IPL 2022 : ಈ ವಿಷಯದಲ್ಲಿ ಧೋನಿಯನ್ನು ಓವರ್ಟೇಕ್ ಮಾಡಿದ ಹಾರ್ದಿಕ್ ಪಾಂಡ್ಯ. ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದು ಬೀಗಿದ ಗುಜರಾತ್.

389

ಇಂಡಿಯನ್ ಪ್ರೀಮಿಯರ್ ಲೀಗ್ ೨೦೨೨ ನಿನ್ನೆ ಮುಕ್ತಾಯಗೊಂಡಿದೆ. ಇದರೊಂದಿಗೆ ಗುಜರಾತ್ ತಮ್ಮ ಚೊಚ್ಚಲ ಐಪಿಎಲ್ ಕಪ್ ಗೆದ್ದಿದೆ. ಹಾಗೇನೇ ಎರಡನೇ ಬಾರಿ ಕಪ್ ಗೆಲ್ಲುವ ರಾಜಸ್ತಾನ ರಾಯಲ್ಸ್ ಕನಸು ಪೂರ್ಣಗೊಳ್ಳಲಿಲ್ಲ ಗುಜರಾತ್ ಎದುರು. ಹಾರ್ದಿಕ್ ಪಾಂಡ್ಯ ಅವರ ಬ್ಯಾಟ್ ಹಾಗು ಬೌಲಿಂಗ್ ನಲ್ಲಿ ಮಿಂಚಿದ ಕಾರಣ ಗುಜರಾತ್ ತಂಡ ರಾಜಸ್ತಾನದ ಎದುರು ೭ ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಇದರ ಜೊತೆಗೆ ೨೦ ಕೋಟಿಯ ನಗದು ಬಹುಮಾನ ಪಡೆದು ಭೇಷ್ ಎನಿಸಿದೆ.

ನಾಯಕನಾಗಿ ಹಾರ್ದಿಕ್ ಪಾಂಡ್ಯ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಈ ಸರಣಿಯಲ್ಲಿ ಒಟ್ಟಾರೆ ಇವರ ಬ್ಯಾಟ್ ಇಂದ ಬಂದಿದ್ದು ೪೮೭ ರನ್ ಹಾಗು ಇವರಿಗೆ ಸಿಕ್ಕ ವಿಕೆಟ್ ೮. ನಿನ್ನೆಯ ಪಂದ್ಯದಲ್ಲಿ ಇವರ ಬೌಲಿಂಗ್ ಉತ್ತಮವಾಗಿತ್ತು. ರಾಜಸ್ತಾನ್ ರಾಯಲ್ಸ್ ತಂಡವನ್ನು ೧೩೧ ರನ್ಗಳಿಗೆ ನಿಲ್ಲಿಸಲು ಪಾಂಡ್ಯ ಬೌಲಿಂಗ್ ಕಾರಣ ಎಂದರೆ ತಪ್ಪಾಗಲಾರದು. ೪ ಓವರ್ ಗಳಲ್ಲಿ ೧೭ ರನ್ ನೀಡಿ ೩ ವಿಕೆಟ್ ಪಡೆದು ಮಿಂಚಿದ್ದಾರೆ. ಹಾಗೇನೇ ಬ್ಯಾಟಿಂಗ್ ಅಲ್ಲೂ ಕೂಡ ೩೪ ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು.

ಇದು ಹಾರ್ದಿಕ್ ಪಾಂಡ್ಯ ಅವರು ನಾಯಕನಾಗಿ ಗೆದ್ದ ಮೊದಲ ಐಪಿಎಲ್ ಕಪ್ ಆಗಿದೆ. ಆದರೆ ಈ ಐಪಿಎಲ್ ಕಪ್ ಗೆ ಪಾಂಡ್ಯ ಹೊಸಬರಲ್ಲ. ಮುಂಬೈ ಇಂಡಿಯನ್ಸ್ ಆಟಗಾರರಾಗಿದ್ದ ಪಾಂಡ್ಯ, ೨೦೧೫,೨೦೧೭,೨೦೧೯, ಹಾಗು ೨೦೨೦ ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ೨೦೧೫ ರಲ್ಲಿ ಉತ್ತಮವಾಗಿ ಪ್ರದರ್ಶನ ಇಲ್ಲದೆ ಇದ್ದರು ಕೂಡ ೨೦೧೯ ರ ವರೆಗೆ ಬರುವಾಗ ತಮ್ಮ ಪ್ರತಿಭೆಯನ್ನು ಹೊರತೆಗೆದು ೨೦೨೨ ರ ಐಪಿಎಲ್ ಗೆ ನಾಯಕನಾಗಿದ್ದರೆ. ಹೀಗೆ ಪಾಂಡ್ಯ ಒಟ್ಟಾರೆ ೫ ಐಪಿಎಲ್ ಕಪ್ ಗೆದ್ದ ಹಾಗಾಗಿದೆ.

ರೋಹಿತ್ ಶರ್ಮ ೬ ಕಪ್ ಗೆಲ್ಲುವ ಮೂಲಕ ಇನ್ನು ಕೂಡ ಮೊದಲಿಗರಾಗಿದ್ದರೆ. ಇನ್ನು ಪಾಂಡ್ಯ ಸಾಲಿಗೆ ಕಿರೇನ್ ಪೊಲಾರ್ಡ್ ೫ ಟ್ರೋಫಿ, ಅಂಬಟಿ ರಾಯ್ಡು ೫ ಟ್ರೋಫಿ ಗೆದ್ದಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ನಿನ್ನೆ ಕಪ್ ಗೆಲ್ಲುವ ಮೂಲಕ ಧೋನಿ ಗೆದ್ದ ೪ ಕಪ್ ದಾಖಲೆಯನ್ನು ಓವರ್ಟೇಕ್ ಮಾಡಿದ್ದಾರೆ. ಧೋನಿ ಇನ್ನು ಮುಂದಿನ ಐಪಿಎಲ್ ಆವೃತ್ತಿ ಆಡಲಿದ್ದಾರೆ ಎನ್ನುವುದು ಖಚಿತ. ಮುಂದಿನ ಬಾರಿ ಚೆನ್ನೈ ಕಪ್ ಗೆದ್ದರೆ ಪಾಂಡ್ಯ ಸಾಲಿಗೆ ಬರಬಹುದು ಧೋನಿ, ಇಲ್ಲವಾದರೆ ಪಾಂಡ್ಯ ಮುಂದಿನ ಗುರಿ ರೋಹಿತ್ ಶರ್ಮ ಅವರ ೬ ಕಪ್ ಗೆದ್ದಿರುವ ಆಟಗಾರ ಎನ್ನುವ ದಾಖಲೆ ಸರಿದೂಗಿಸುವುದು. ಚೊಚ್ಚಲ ಸರಣಿಯಲ್ಲಿ ಕಪ್ ಗೆದ್ದಿರುವ ಪಾಂಡ್ಯ ನಾಯಕತ್ವಕ್ಕೆ ಎಲ್ಲೆಡೆಯಿಂದ ಅಭಿನಂದನೆ ಮಹಾಪುರ ಹರಿದು ಬರುತ್ತಿದೆ.

Leave A Reply

Your email address will not be published.