IPL 2023: ಈ ಬಾರಿಯ ಐಪಿಎಲ್ ಹರಾಜಿನಲ್ಲಿ 10 ಕೋಟಿಗೂ ಹೆಚ್ಚು ಬಾಚುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

85

2023ರ ಐಪಿಎಲ್ ಟೂರ್ನಿ ಶುರುವಾಗಲು ಇನ್ನು 6 ತಿಂಗಳು ಉಳಿದಿದೆ. ಈ ಸಾರಿ ಐಪಿಎಲ್ ಆಕ್ಷನ್ ಡಿಸೆಂಬರ್ ತಿಂಗಳ ಮಧ್ಯದಲ್ಲಿ ಶುರುವಾಗುತ್ತದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಆಕ್ಷನ್ ಗಾಗಿ ತಯಾರಿ ನಡೆಸಿಕೊಳ್ಳುತ್ತಿವೆ. ಎಲ್ಲ ಫ್ರ್ಯಾಂಚೈಸಿ ಗಳು ತಮ್ಮ ತಂಡದ ಬೆಸ್ಟ್ ಪ್ಲೇಯರ್ ಗಳನ್ನು ಉಳಿಸಿಕೊಂಡು, ಉಳಿದವರನ್ನು ರಿಲೀಸ್ ಮಾಡಬಹುದು, ಇದರಿಂದ ತಂಡಕ್ಕೂ ಹೊಸ ಆಟಗಾರರು ಸಿಗುತ್ತಾರೆ ಮತ್ತು ಆಕ್ಷನ್ ಸಹ ಚೆನ್ನಾಗಿ ನಡೆಯುತ್ತದೆ. ಈ ಬಾರಿ ಸಹ ಐಪಿಎಲ್ ಆಕ್ಷನ್ ನಲ್ಲಿ ಅನೇಕ ಇಂಟರ್ನ್ಯಾಷನಲ್ ಸ್ಟಾರ್ ಪ್ಲೇಯರ್ ಗಳು ಇರಲಿದ್ದಾರೆ, ತಂಡದ ಪರ್ಸ್ ಸಹ 5 ಕೋಟಿ ಇಂದ 95 ಕೋಟಿ ಗೆ ಏರಿಕೆಯಾಗಿದೆ. ಹಾಗಿದ್ದರೆ ಮುಂದಿನ ವರ್ಷದ ಐಪಿಎಲ್ ನಲ್ಲಿ 10 ಕೋಟಿಗಿಂತ ಹೆಚ್ಚಿನ ಹಣಕ್ಕೆ ಕಾಂತ್ರ್ಯಾಕ್ಟ್ ಪಡೆಯಬಹುದಾದ ಟಾಪ್ 5 ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

1.ಬೆನ್ ಸ್ಟೋಕ್ಸ್ :- ಇಂಗ್ಲೆಂಡ್ ತಂಡದ ಅತ್ಯದ್ಭುತ ಆಲ್ ರೌಂಡರ್ ಎಂದು ಹೆಸರು ಪಡೆದಿರುವವರು ಬೆನ್ ಸ್ಟೋಕ್ಸ್. 2023ರ ಐಪಿಎಲ್ ಆಕ್ಷನ್ ಗೆ ಇವರು ಸಹ ಬರಲಿದ್ದಾರೆ..ಆಲ್ ರೌಂಡರ್ ಆಗಿ ಹಲವು ಮ್ಯಾಚ್ ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ನಲ್ಲಿ ಅತಿ ಹೆಚ್ಚು ಹಣ ಸುರಿದು ಕೊಂಡುಕೊಂಡಿರುವ ಆಟಗಾರ ಕ್ರಿಸ್ ಮೋರಿಸ್ ಅವರು, ರಾಜಸ್ತಾನ್ ರಾಯಲ್ಸ್ ತಂಡ ಇವರ ಮೇಲೆ 16.25ಕೋಟಿ ರೂಪಾಯಿ ಸುರಿದಿತ್ತು, ಬೆನ್ ಸ್ಟೋಕ್ಸ್ ಅವರಿಗು ಇಷ್ಟರ ಮಟ್ಟಿಗೆ ಬೆಲೆ ನೀಡಿ ಖರೀದಿ ಮಾಡಬಹುದು ಎನ್ನಲಾಗುತ್ತಿದೆ. ಈಗಾಗಲೇ ಇವರು ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಆದ ಬಳಿಕ ಓಡಿಐ ಪಂದ್ಯಗಳಿಂದ ಇಂದ ಹೊರಬಂದಿದ್ದಾರೆ. 2017ರಲ್ಲಿ ಐಪಿಎಲ್ ಗೆ ಎಂಟ್ರಿ ಕೊಟ್ಟಿದ್ದ ಬೆನ್ ಸ್ಟೋಕ್ಸ್ ಅವರು, ಕಳೆದ ವರ್ಷ ಹೊರಹೋಗಿದ್ದರು. 2023ರಲ್ಲಿ ಮಟ್ಗೆ ಬರಲಿದ್ದಾರೆ.

2.ಕೆಮೆರಾನ್ ಗ್ರೀನ್ :- ಆಸ್ಟ್ರೇಲಿಯಾ ತಂಡದ ಆಲ್ ರೌಂಡರ್ ಆಗಿರುವ ಗ್ರೀನ್ ಅವರು ಓಪನರ್ ಆಗಿ ಮತ್ತು ಮಿಡ್ಲ್ ಆರ್ಡರ್ ನಲ್ಲಿ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಾರೆ. ಇತ್ತೀಚೆಗೆ ಇವರು ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಮ್ಯಾಚ್ ನಲ್ಲಿ ಡೇವಿಡ್ ವಾರ್ನರ್ ಅವರ ಬದಲಾಗಿ ಆಡಿ, ಮೊಹಾಲಿಯಲ್ಲಿ 30 ಎಸೆತಗಳಲ್ಲಿ 61 ರನ್ಸ್ ಭಾರಿಸಿದ್ದರು. ಹೈದ್ರಾಬಾದ್ ನಲ್ಲಿ 21 ಎಸೆತಗಳಲ್ಲಿ 52 ರನ್ಸ್ ಚಚ್ಚಿದ್ದರು. ಇವರು 2023ರ ಐಪಿಎಲ್ ನಲ್ಲಿ ಆಕ್ಷನ್ ಗೆ ಬಂದರೆ, ಇವರ ಮೇಲೆ ಕೋಟಿಗಟ್ಟಲೆ ಹಣ ಸುರಿದು ಇವರನ್ನು ಕೊಂಡುಕೊಳ್ಳುವುದು ಖಂಡಿತ. ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಇವರನ್ನು ತಮ್ಮ ತಂಡಕ್ಕೆ ತೆಗೆದುಕೊಳ್ಳಲು ಕಾಯುತ್ತಿದ್ದಾರೆ.

3.ಫಿಲ್ ಸಾಲ್ಟ್ :- ಇಂಗ್ಲೆಂಡ್ ತಂಡದ ಡೈನಾಮಿಕ್ ಬ್ಯಾಟ್ಸ್ಮನ್ ಆಗಿದ್ದಾರೆ. ಇವರು ಟಿ20 ಪಂದ್ಯಗಳಿಗೆ ಎಂಟ್ರಿ ಕೊಟ್ಟಿದ್ದು ಈ ವರ್ಷ ಜನವರಿಯಲ್ಲಿ. ಈವರೆಗೂ ಆಡಿರುವ 10 ಟಿ20 ಪಂದ್ಯಗಳಲ್ಲಿ 215 ರನ್ಸ್ ಸ್ಕೋರ್ ಮಾಡಿದ್ದರು, ಇವರ ಸ್ಟ್ರೈಕ್ ರೇಟ್ 164 ಇತ್ತು. ಇವರ ಬೆಸ್ಟ್ ಇನ್ನಿಂಗ್ಸ್ ನೋಡಿದ್ದು, ಲಾಹೋರ್ ನಲ್ಲಿ ನಡೆದ ಇಂಗ್ಲೆಂಡ್ ವರ್ಸಸ್ ಪಾಕಿಸ್ತಾನ್ ಮ್ಯಾಚ್ ನಲ್ಲಿ, ಈ ಪಂದ್ಯದಲ್ಲಿ ಸಾಲ್ಟ್ ಅವರು 41 ಎಸೆತಗಳಲ್ಲಿ 84 ರನ್ಸ್ ಭಾರಿಸಿದರು, ಆಗ ಇವರ ಸ್ಟ್ರೈಕ್ ರೇಟ್ 214. ಇಂಗ್ಲೆಂಡ್ ತಂಡದಲ್ಲಿ ಸೀನಿಯರ್ ಆಟಗಾರ ಜೇಸನ್ ಅವರನ್ನು ಬಿಟ್ಟು ಸಾಲ್ಟ್ ಅವರನ್ನು ಓಪನರ್ ಆಗಿ ಆಯ್ಕೆಮಾಡಲಾಗಿದೆ. ಈ 26 ವರ್ಷದ ಕ್ರಿಕೆಟರ್ ಓಪನರ್ ಆಗಿ ಮತ್ತು 3ನೇ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ. ಹಾಗಾಗಿ ಇವರ ಮೇಲು ಐಪಿಎಲ್ ಫ್ರಾಂಚೈಸಿ ಗಳ ಕಣ್ಣಿದೆ.

4.ದಾಸುನ್ ಶನಾಕ :- ಶ್ರೀಲಂಕಾ ತಂಡ ಕಳಪೆ ಪ್ರದರ್ಶನ ನೀಡುತ್ತಿದ್ದಾಗ, ಶನಾಕ ಆವರಂತಹ ಆಲ್ ರೌಂಡರ್ ಆಟಗಾರ ಎಂಟ್ರಿ ಕೊಟ್ಟು, ತಂಡದ ಪ್ರದರ್ಶನ ಚೆನ್ನಾಗಿರುವ ಹಾಗೆ ಮಾಡಿದರು. ಶನಾಕ ಅವರು ಆಲ್ ರೌಂಡರ್ ಆಗಿ ಶ್ರೀಲಂಕಾ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ 2015ರಿಂದಲು ಇವರು ಕ್ರಿಕೆಟ್ ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಈಗ ತಮ್ಮ ಕೆರಿಯರ್ ನ ಅತ್ಯುತ್ತಮ ಫೇಸ್ ನಲ್ಲಿದ್ದಾರೆ. ಈವರೆಗೂ ಇವರು ಆಡಿರುವ 158 ಟಿ20 ಮ್ಯಾಚ್ ಗಳಲ್ಲಿ ಸ್ಟ್ರೈಕ್ ರೇಟ್ ಇದೆ, ಡೆತ್ ಓವರ್ ಗಳಲ್ಲಿ 212ರ ಸ್ಟ್ರೈಕ್ ರೇಟ್ ನಲ್ಲಿ ಆಡುತ್ತಾರೆ ಶನಾಕ. ಈ ಎಲ್ಲಾ ಗುಣಗಳಿಂದ ಶನಾಕ ಅವರು ಐಪಿಎಲ್ ನಲ್ಲಿ ಉತ್ತಮ ಹಣ ಬಾಚಬಹುದು.

5.ಮಿಚೆಲ್ ಸ್ಟಾರ್ಕ್ :- ಆಸ್ಟ್ರೇಲಿಯಾ ತಂಡದ ಅದ್ಭುತ ಬೌಲರ್ ಆಗಿರುವ ಸ್ಟಾರ್ಕ್ ಅವರು, 2015ರ ನಂತರ ಐಪಿಎಲ್ ಪಂದ್ಯಗಳನ್ನು ಆಡಿಲ್ಲ. 2014 ಮತ್ತು 2015ರಲ್ಲಿ ಆರ್.ಸಿ.ಬಿ ತಂಡದ ಪರವಾಗಿ 31 ವಿಕೆಟ್ಸ್ ತೆಗೆದಿದ್ದರು. ಈ ಅತ್ಯದ್ಭುತ ಬೌಲರ್ ಇಂಜುರಿ ಮತ್ತು ವರ್ಕ್ ಲೋಡ್ ಇಂದ ಐಪಿಎಲ್ ಇಂದ ದೂರ ಉಳಿದಿದ್ದರು. ಆದರೆ 2023ರಲ್ಲಿ ಇವರು ಐಪಿಎಲ್ ಗೆ ಕಂಬ್ಯಾಕ್ ಮಾಡಬಹುದು ಎನ್ನಲಾಗುತ್ತಿದ್ದು, ಒಂದು ವೇಳೆ ಇವರು ಕಂಬ್ಯಾಕ್ ಮಾಡಿದರೆ, ಕನಿಷ್ಠ 10 ಕೋಟಿಗೇ ಮಾರಾಟ ಆಗುವುದು ಖಚಿತ ಎನ್ನಲಾಗುತ್ತಿದೆ.

Leave A Reply

Your email address will not be published.