IPL 2023: ಈ ಬಾರಿ ತಂಡದಿಂದ ಬಿಡುಗಡೆಯಾಗಿ ಹರಾಜಿನಲ್ಲಿ ಪಾಲ್ಗೊಳ್ಳುವ ಸ್ಟಾರ್ ಆಟಗಾರರು ಯಾರ್ಯಾರು ಗೊತ್ತೇ?? ಆರ್ಸಿಬಿ ಇಂದ ಯಾರು ಗೊತ್ತೇ??

83

2023ರ ಐಪಿಎಲ್ ಆಕ್ಷನ್ ಡಿಸೆಂಬರ್ ನಲ್ಲಿ ಶುರುವಾಗಲಿದೆ, ಮುಂದಿನ ವರ್ಷ ಮಾರ್ಚ್ ತಿಂಗಳಿನಲ್ಲಿ ಐಪಿಎಲ್ ಶುರುವಾಗಲಿದೆ. ಈ ಸಾರಿ ಫ್ರಾಂಚೈಸಿಗಳು ಸಹ ಹೆಚ್ಚು ಹಣವನ್ನು ಇಟ್ಟುಕೊಂಡಿದ್ದು, ಈ ವರ್ಷ ಐಪಿಎಲ್ ಮೊದಲಿನ ಹಾಗೆ ಹೋಮ್ ಅಂಡ್ ಅವೇ ರೀತಿಯಲ್ಲಿ ನಡೆಯಲಿದೆ. ಹಾಗಾಗಿ ಈ ಸಾರಿ ಐಪಿಎಲ್ ನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ಒಬ್ಬ ದೊಡ್ಡ ಪ್ಲೇಯರ್ ಅನ್ನು ರಿಲೀಸ್ ಮಾಡಲಿದೆ. ಪ್ರತಿ ತಂಡದ ಯಾವ ಆಟಗಾರರನ್ನು ಬಿಡುಗಡೆ ಮಾಡಬಹುದು ಎಂದು ತಿಳಿಸುತ್ತೇವೆ ನೋಡಿ.

ಸಿ.ಎಸ್.ಕೆ :- ರವೀಂದ್ರ ಜಡೇಜಾ :- ಇವರು ಅದ್ಭುತವಾದ ಆಲ್ ರೌಂಡರ್ ಗಳಲ್ಲಿ ಒಬ್ಬರು. ಕಳೆದ ಸೀಸನ್ ನಲ್ಲಿ ಜಡೇಜಾ ಅವರು ಸಿ.ಎಸ್.ಕೆ ತಂಡದ ಕ್ಯಾಪ್ಟನ್ ಆಗಿದ್ದರು, ಆದರೆ ಕ್ಯಾಪ್ಟನ್ ಆಗಿ ಲೀಗ್ ಹಂತರ ಮೊದಲ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತರು, 10ನೇ ಪಂದ್ಯದಲ್ಲಿ ಇಂಜುರಿಗೆ ಒಳಗಾದರು. ಇದಾದ ಬಳಿಕ ಜಡೇಜಾ ಅವರು ಸಿ.ಎಸ್.ಕೆ ತಂಡ ಬಿಟ್ಟುಬಂದರು. ಸೋಷಿಯಲ್ ಮೀಡಿಯಾದಲ್ಲಿ ಸಿ.ಎಸ್.ಕೆ ತಂಡದ ಬಹುತೇಕ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇವರು ಸಿ.ಎಸ್.ಕೆ ತಂಡವನ್ನು ಕಾಂಟ್ಯಾಕ್ಟ್ ಸಹ ಮಾಡಿಲ್ಲ. ಹಾಗಾಗಿ ಇವರನ್ನು ತಂಡದಿಂದ ಹೊರಬಿಡಬಹುದು ಎನ್ನಲಾಗುತ್ತಿದೆ.
ಎಂಐ :- ಕೀರನ್ ಪೋಲಾರ್ಡ್ :- ವೆಸ್ಟ್ ಇಂಡೀಸ್ ತಂಡದ ಮಾಜಿ ಕ್ಯಾಪ್ಟನ್ ಆಗಿರುವ ಇವರು, ಈ ವರ್ಷ ಐಪಿಎಲ್ ನಲ್ಲಿ ಕಳಪೆ ಫಾರ್ಮ್ ನಲ್ಲಿದ್ದರು, 14ರ ಆವರೇಜ್ ನಲ್ಲಿ, ಇವರ ಸ್ಟ್ರೈಕ್ ರೇಟ್ ನಲ್ಲಿ 107 ಇತ್ತು. ಹಾಗಾಗಿ ಕೀರನ್ ಪೋಲಾರ್ಡ್ ಅವರನ್ನು ತಂಡದಿಂದ ಕೈಬಿಡಬಹುದು ಎನ್ನಲಾಗುತ್ತಿದೆ. ಈ ವರ್ಷ ಪೋಲಾರ್ಡ್ ಅವರನ್ನು 6 ಕೋಟಿ ಕೊಟ್ಟು ಖರೀದಿ ಮಾಡಲಾಗಿತ್ತು, ಈ ವರ್ಷ ಇವರನ್ನು ರಿಲೀಸ್ ಮಾಡಿ, ಮತ್ತೆ ಆಕ್ಷನ್ ನಲ್ಲಿ ಕೊಂಡುಕೊಳ್ಳಬಹುದು.

ಕೆಕೆಆರ್ :- ಪ್ಯಾಟ್ ಕಮಿನ್ಸ್ :- ಟೆಸ್ಟ್ ಮತ್ತು ಓಡಿಐ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಇವರು, ಟಿ20 ಪಂದ್ಯಗಳಲ್ಲಿ ನಿರೀಕ್ಷೆಯ ಮಟ್ಟದ ಬೌಲಿಂಗ್ ಮಾಡಲಿಲ್ಲ. ಐಪಿಎಲ್ ನಲ್ಲಿ 30 ಪಂದ್ಯಗಳಲ್ಲಿ 30 ವಿಕೆಟ್ಸ್ ಪಡೆದಿದ್ದರು. ಒಂದು ಓವರ್ ನಲ್ಲಿ 9ರನ್ಸ್ ಬಿಟ್ಟುಕೊಡುತ್ತಿದ್ದರು. 2022ರಲ್ಲಿ 1 ಓವರ್ ಗೆ 10ಕ್ಕಿಂತ ಹೆಚ್ಚು ರನ್ಸ್ ಬಿಟ್ಟುಕೊಟ್ಟಿದ್ದರು. 7.25ಕೋಟಿ ರೂಪಾಯಿ ಕೊಟ್ಟು ಪ್ಯಾಟ್ ಅವರನ್ನು ಖರೀದಿ ಮಾಡಲಾಗಿದ್ದು, ಆದರೆ ಇವರು ಕಳಪೆ ಫಾರ್ಮ್ ನಲ್ಲಿರುವ ಕಾರಣ ಇವರನ್ನು ರಿಲೀಸ್ ಮಾಡಬಹುದು.
ಆರ್.ಸಿ.ಬಿ :- ಶೆಫ್ರಾನ್ ರುದರ್ ಫೋರ್ಡ್ :- ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಗಿರುವ ಇವರನ್ನು ಆರ್.ಸಿ.ಬಿ ತಂಡ ರಿಲೀಸ್ ಮಾಡಬಹುದು ಎನ್ನಲಾಗುತ್ತಿದೆ. ಆರ್.ಸಿ.ಬಿ ತಂಡಡ್ಸ್ ಇನ್ನುಳಿದ ಪ್ಲೇಯರ್ ಗಳು ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆದರೆ ಇವರಿಗೆ ಆಡುವ ಅವಕಾಶ ಸಿಕ್ಕಿದ್ದು ಕೆಲವು ಪಂದ್ಯಗಳಲ್ಲಿ ಮಾತ್ರ, ಅದರಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ, ಹಾಗಾಗಿ ಇವರನ್ನು ಆರ್ಸಿಬಿ ತಂಡ ಬಿಡುಗಡೆ ಮಾಡಬಹುದು.

ಜಿಟಿ :- ಜೇಸನ್ ರಾಯ್ :- ಗುಜರಾತ್ ಟೈಟನ್ಸ್ ತಂಡ ಇವರನ್ನು 2 ಕೋಟಿ ನೀಡಿ ಖರೀದಿ ಮಾಡಿತ್ತು. ಇವರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು, 2022ರಲ್ಲಿ ಅನಾರೋಗ್ಯದ ಕಾರಣ ಐಪಿಎಲ್ ಇಂದ ಹೊರಹೋಗಿದ್ದರು. ಪ್ರಸ್ತುತ ಇವರು ಒಳ್ಳೆಯ ಫಾರ್ಮ್ ನಲ್ಲಿ ಇಲ್ಲದ ಕಾರಣ ಇಂಗ್ಲೆಂಡ್ ತಂಡದಿಂದ ಹೊರಗುಳಿದಿದ್ದಾರೆ. ಇವರ ಸ್ಟ್ರೈಕ್ ರೇಟ್ 104 ಇದ್ದು ಆವರೇಜ್ ಸ್ಕೋರ್ 14 ಇದೆ. ಹಾಗಾಗಿ ಇವರನ್ನು ತಂಡದಿಂದ ರಿಲೀಸ್ ಮಾಡಬಹುದು.
ಆರ್.ಆರ್ :- ನಥಾನ್ ಕೌಲ್ಟರ್ :-2 ಕೋಟಿ ಕೊಟ್ಟು ರಾಜಸ್ತಾನ್ ತಂಡ ಇವರನ್ನು ಖರೀದಿ ಮಾಡಿತ್ತು. ಇವರಿಗೆ ಒಂದು ಮ್ಯಾಚ್ ನಲ್ಲಿ ಆಡುವ ಅವಕಾಶ ಮಾತ್ರ ಸಿಕ್ಕಿತು, ನೈಲ್ ಅವರು 3 ಓವರ್ ಗಳಲ್ಲಿ 48 ರನ್ ಬಿಟ್ಟುಕೊಟ್ಟಿದ್ದರು. ಇದಾದ ಬಳಿಕ ಇಂಜುರಿ ಇಂದ ಐಪಿಎಲ್ ಇಂದ ಹೊರಗುಳಿದಿದ್ದರು. ಇದಾದ ಬಳಿಕ ಯಾವುದೆ ಮ್ಯಾಚ್ ಅನ್ನು ಆಡಿಲ್ಲ, ಹಾಗಾಗಿ ಇವರನ್ನು ಆರ್.ಆರ್ ತಂಡ ರಿಲೀಸ್ ಮಾಡಬಹುದು.

ಎಲ್.ಎಸ್.ಜಿ :- ಮಾರ್ಕ್ ವುಡ್ :- ಇವರನ್ನು 7 ಕೋಟಿ ರೂಪಾಯಿ ಕೊಟ್ಟು ಲಕ್ನೌ ತಂಡ ಖರೀದಿ ಮಾಡಿತ್ತು, ಆದರೆ ಇಂಜುರಿ ಕಾರಣದಿಂದ ಮಾರ್ಕ್ ವುಡ್ ಅವರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಗಲೇ ಇಲ್ಲ. ವುಡ್ ಅವರನ್ನು ನಂಬಿ ಅಷ್ಟು ಹಣ ಕೊಟ್ಟು ಕೊಂಡುಕೊಳ್ಳುವುದು ರಿಸ್ಕ್ ಎಂದು ಗೊತ್ತಿದ್ದರೂ ಸಹ ಲಕ್ನೌ ತಂಡ ಖರೀದಿ ಮಾಡಿತ್ತು, 2018ರಲ್ಲಿ ಸಿ.ಎಸ್.ಕೆ ತಂಡ ಇವರನ್ನು ಖರೀದಿ ಮಾಡಿತ್ತು, ಆಗ ಒಂದೇ ಮ್ಯಾಚ್ ಆಡಿ ಇಂಜುರಿ ಕಾರಣದಿಂದ ಹೊರಗುಳಿದಿದ್ದರು. ಹಾಗಾಗಿ ಎಲ್.ಎಸ್.ಜಿ ತಂಡ ಇವರನ್ನು ರಿಲೀಸ್ ಮಾಡಬಹುದು.
ಡಿಸಿ :- ಮಂದೀಪ್ ಸಿಂಗ್ :- ಹಲವು ವರ್ಷಗಳಿಂದ ಇವರು ಐಪಿಎಲ್ ನಲ್ಲಿ ಆಡುತ್ತಿದ್ದರು ಸಹ ತಮ್ಮದೇ ಆದ ಛಾಪು ಮೂಡಿಸಿಲ್ಲ. ಮಂದೀಪ್ ಅವರು ಹಲವು ಫ್ರಾಂಚೈಸಿಗಳಿಗೆ ಆಡಿದ್ದರು ಸಹ, ಇವರ ಬ್ಯಾಟಿಂಗ್ ಹೇಳಿಕೊಳ್ಳುವ ಹಾಗಿಲ್ಲ. 1.1ಕೋಟಿ ರೂಪಾಯಿ ಕೊಟ್ಟು ಡಿಸಿ ತಂಡ ಇವರನ್ನು ಖರೀದಿ ಮಾಡಿತ್ತು. ಇವರ ಸ್ಟ್ರೈಕ್ ರೇಟ್ 76, ಮತ್ತು ಇವರು ಸ್ಕೋರ್ ಮಾಡಿದ್ದು ಕೇವಲ 18 ರನ್ ಗಳು. ಹಾಗಾಗಿ ಡಿಸಿ ತಂಡ ಇವರನ್ನು ರಿಲೀಸ್ ಮಾಡಬಹುದು.

ಪಿಬಿಕೆಎಸ್ :- ಬೆನ್ನಿ ಹೊವೆಲ್ :- ಇವರು ಇಂಗ್ಲಿಷ್ ಸರ್ಕ್ಯೂಟ್ ನ ಉತ್ತಮವಾದ ಆಲ್ ರೌಂಡರ್ ಆಗಿದ್ದಾರೆ. ಆದರೆ ಈ ವರ್ಷದ ಐಪಿಎಲ್ ನಲ್ಲಿ ಹೊವೆಲ್ ಅವರಿಗೆ ಸರಿಯಾಗಿ ಆಡುವ ಅವಕಾಶ ಸಿಗಲಿಲ್ಲ. ಆಗ ಹೊವೆಲ್ ಅವರು ಪಿಬಿಕೆಎಸ್ ತಂಡದ ವಿರುದ್ಧ ಸಾಕಷ್ಟು ಟ್ವೀಟ್ ಮಾಡಿದ್ದರು. ಪಿಬಿಕೆಎಸ್ ತಂಡವನ್ನು ಇನ್ಸಲ್ಟ್ ಮಾಡಿದ್ದರು. ಹಾಗಾಗಿ ಇವರನ್ನು ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಿದೆ.
ಎಸ್.ಆರ್.ಹೆಚ್ :- ರೊಮಾರಿಯೋ ಶೆಫರ್ಡ್ :- ಇವರನ್ನು ಬರೋಬ್ಬರಿ 7.75 ಕೋಟಿ ಕೊಟ್ಟು ಖರೀದಿ ಮಾಡಿತು ಎಸ್.ಆರ್.ಹೆಚ್ ತಂಡ, ಆದರೆ ಶೆಫರ್ಡ್ ಅವರಿಗೆ 3 ಪಂದ್ಯಗಳಲ್ಲಿ ಆಡುವ ಅವಕಾಶ ಮಾತ್ರ ಸಿಕ್ಕಿತು, ಅದರಲ್ಲಿ ಸಹ 3 ವಿಕೆಟ್ಸ್ ಪಡೆದು, ಒಂದು ಓವರ್ ನಲ್ಲಿ 11 ರನ್ಸ್ ಬಿಟ್ಟುಕೊಡುತ್ತಿದ್ದರು. ಹಾಗಾಗಿ ಇವರನ್ನು ಬಹುತೇಕ ರಿಲೀಸ್ ಮಾಡುವುದು ಖಚಿತ ಎನ್ನಲಾಗುತ್ತಿದೆ.

Leave A Reply

Your email address will not be published.