IPL retention ನಲ್ಲಿ ಅತೀ ಹೆಚ್ಚು ಹಣ ಕೊಟ್ಟು ಉಳಿಸಿಕೊಂಡ ಆ ಆಟಗಾರ ಧೋನಿ ಅಲ್ಲ ವಿರಾಟ್ ಅಲ್ಲ ಮತ್ಯಾರು ಈ ಆಟಗಾರ.
IPL ಎಂದರೆ ಸಾಕು ಜನರು ಹುಚ್ಚೆದ್ದು ಕುಣಿಯುತ್ತಾರೆ. ಒಂದೇ ದೇಶಕ್ಕೆ ಆಡಿದ ಎಲ್ಲಾ ಆಟಗಾರರು ಒಂದುಂದು ಫ್ರಾಂಚೈಸಿ ಅನ್ನು ಪ್ರತಿನಿಧಿಸಿ ಆಟ ಆಡುತ್ತಾರೆ. ಜನಗಳು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತಾರೆ. ತಮ್ಮ ತಮ್ಮ ತಂಡವನ್ನು ಬೆಂಬಲಿಸುವ ಭರದಲ್ಲಿ ಅದೆಷ್ಟೋ ಅನಾಹುತಗಳು ಆದದ್ದು ಕಂಡಿದ್ದೇವೆ ನಾವು. ಇದೀಗ ಮೆಗಾ ಆಕ್ಷನ್ ಅತ್ತ ಮುಖ ಮಾಡಿರುವ ಐಪಿಎಲ್ ಈ ಬಾರಿ ಹೊಸ ಎರಡು ತಂಡಗಳ ಸೇರ್ಪಡೆ ಮಾಡಿದೆ.
ಇದೀಗ ತಂಡಗಳು ತಮ್ಮಲ್ಲಿರುವ ಆಟಗಾರರನ್ನು ಉಳಿಸಿಕೊಂಡಿದೆ . ಹೌದು ಈ ಬಾರಿ ತಂಡಗಳು ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಇತ್ತು. ಇದರಲ್ಲಿ 3 ಭಾರತೀಯ ಆಟಗಾರ ಮತ್ತು ಗರಿಷ್ಠ 2 ವಿದೇಶಿ ಆಟಗಾರನ ಉಳಿಸ್ಕೊಳ್ಳುವ ಅವಕಾಶ ಇತ್ತು. ಹಾಗಾದರೆ ಅತೀ ಹೆಚ್ಚು ಸಂಭಾವನೆ ಕೊಟ್ಟು ಉಳಿಸಿಕೊಂಡ ಆ ಆಟಗಾರ ಯಾರು ಅವರು ಮಹೇಂದ್ರ ಸಿಂಗ್ ಅಲ್ಲ ವಿರಾಟ್ ಅಲ್ಲ ಮತ್ಯಾರು ಎಂಬ ವಿಚಾರ ಮುಂದಕ್ಕೆ ಓದಿರಿ.
ಹೌದು ಆ ಆಟಗಾರ ಮತ್ಯಾರು ಅಲ್ಲ ಅವರು ಸ್ಪಿನ್ ಮಾಂತ್ರಿಕ ಮತ್ತು ಭಾರತ ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ. ಹೌದು ಇತ್ತೀಚೆಗೆ ಬಹಳ ಸುದ್ದಿ ಅಲ್ಲಿರುವ ಆಟಗಾರ ಇವರು. ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಇಂದ ಇಂತಹ ಪಂದ್ಯವನ್ನು ತಿರುಗಿಸುವ ಮಾಂತ್ರಿಕತೆ ಇವರಲ್ಲಿದೆ. ಇತ್ತೀಚಿನ ದಿನಗಳಲ್ಲಿ ಬಹು ಬೇಡಿಕೆಯ ಆಟಗಾರ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಬಾರಿಯ retension ನಲ್ಲಿ 16 ಕೋಟಿ ಕೊಟ್ಟು ಉಳಿಸಿ ಕೊಂಡಿದ್ದಾರೆ. ಧೋನಿಗೆ 12 ಕೋಟಿ ಕೊಟ್ಟಿದ್ದಾರೆ. ಮುಂಬೈ ತಂಡದ ರೋಹಿತ್ ಶರ್ಮಾ ಕೂಡ 16 ಕೋಟಿ ಪಡೆದಿದ್ದಾರೆ. ಏನೇ ಆಗಲಿ ಮತ್ತೆರಡು ತಂಡಗಳು ಈ ಬಾರಿ ಸೇರ್ಪಡೆ ಗೊಂಡಿದ್ದು ಈ ಬಾರಿಯ ಐಪಿಎಲ್ ಯಾವ ರೀತಿಯ ರೋಚಕತೆ ಸೃಷ್ಟಿಸುತ್ತದೆ ಎಂದು ಕಾದು ನೋಡಬೇಕು.