RCB ಇಲ್ಲಿವರೆಗೆ ಖರೀದಿಸಿದ ಟಾಪ್ 5 ಅತ್ಯಂತ ದುಬಾರಿ ಆಟಗಾರರು ಯಾರೆಲ್ಲ ಗೊತ್ತೇ? ಇವಾಗ ಇವರೆಲ್ಲ ಯಾವ ತಂಡದಲ್ಲಿ ಇದ್ದಾರೆ? ಇಲ್ಲಿದೆ ಮಾಹಿತಿ.

292

ಅರ ಸಿ ಬಿ ಐಪಿಎಲ್ ಅಲ್ಲಿ ತನ್ನದೇ ಆದ ಛಾಪು ಮೂಡಿಸಿದ ತಂಡ ವಿರಾಟ್ ಕೊಹ್ಲಿ ಹಾಗು ಡಿ ವಿಲಿಯರ್ಸ್ ಅವರನ್ನು ನೆಚ್ಚಿಕೊಂಡಿರುವ ತಂಡ. ಒಂದಾದರು ಟ್ರೋಪಿ ಗೆಲ್ಲಬೇಕೆಂದು ಎಲ್ಲ ಸರಣಿಯಲ್ಲೂ ಪ್ರಯತ್ನಿಸುತ್ತಿದೆ. ಅದೇ ಕಾರಣಕ್ಕೆ ವಿಶ್ವದ ಟಾಪ್ ಆಟಗಾರರನ್ನು ಅತಿ ದುಬಾರಿ ಬೆಲೆ ಕೊಟ್ಟು ಖರೀದಿಸುತ್ತದೆ. ಆದರೂ ಈ ದುಬಾರಿ ಆಟಗಾರರಲ್ಲಿ ಕೆಲವರು ಉತ್ತಮ ಪ್ರದರ್ಶನ ನೀಡಿದರೆ ಇನ್ನು ಉಳಿದ ಆಟಗಾರರು ತಾವು ಪಡೆದ ಹಣಕ್ಕೆ ನ್ಯಾಯ ದೊರಕಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ. ಇಂದು ಆರ್ ಸಿ ಬಿ ತಂಡ ದುಬಾರಿ ಆಟಗಾರರನ್ನು ಖರೀದಿಸಿದ ಪಟ್ಟಿ ನಿಮ್ಮ ಮುಂದೆ ಇಡುತ್ತಿದ್ದೇವೆ.

೫. ದಿನೇಶ್ ಕಾರ್ತಿಕ್- ೨೦೧೫ ರಲ್ಲಿ ದಿನೇಶ್ ಕಾರ್ತಿಕ್ ಐಪಿಎಲ್ ಹರಾಜಿನಲ್ಲಿ ಧಾಖಲೆಯ ೧೦.೫ ಕೋತಿ ಮೊತ್ತಕ್ಕೆ ಆರ್ ಸಿ ಬಿ ತಂಡಕ್ಕೆ ಸೇರಿಕೊಂಡರು. ಈ ಪಂದ್ಯದಲ್ಲಿ ಒಟ್ಟು ೧೬ ಪಂದ್ಯಗಳನ್ನು ಆಡಿದ್ದಾರೆ. ಆದರೆ ಅಷ್ಟು ದುಬಾರಿ ಮೊತ್ತಕ್ಕೆ ಹರಾಜಾದರು ಕೂಡ ಅವರು ಆರ್ ಸಿ ಬಿ ಪರ ಕೇವಲ ೧೨ ರ ಸರಾಸರಿಯಲ್ಲಿ ಒಟ್ಟು ೧೪೧ ರನ್ ಗಳನಷ್ಟೇ ಗಳಿಸಿದರು. ಪಡೆದ ಹಣಕ್ಕೆ ಅವರ ಪ್ರದರ್ಶನ ತುಂಬಾ ಕೆಟ್ಟದಾಗಿತ್ತು. ಇಂದು ಕಾರ್ತಿಕ್ ದೇಶಿಯ ಕ್ರಿಕೆಟ್ ಅಲ್ಲಿ ಸಕ್ರಿಯರಾಗಿದ್ದಾರೆ. ಅದೇ ರೀತಿ ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ ತಂಡದಲ್ಲಿ ಆಡಿದರೆ ಈ ವರ್ಷ ಕೂಡ ಐಪಿಎಲ್ ಅಲ್ಲಿ ಕಾಣಿಸಿಕೊಳ್ಳಲಿದ್ದಾರೆ.

೪.ಟೈಮಲ್ ಮಿಲ್ಸ್ – ಆರ್ ಸಿ ಬಿ ತಂಡದಲ್ಲಿ ಫಾಸ್ಟ್ ಬೌಲರ್ ಗಳದ್ದೇ ಕೊರತೆ. ಅಂತಿಮ ಓವರ್ಗಳಲ್ಲಿ ಯಾವೊಬ್ಬ ಬೌಲರ್ ಕೂಡ ರನ್ ನಿಲ್ಲಿಸುವಲ್ಲಿ ವಿಫಲರಾಗುತ್ತಿದ್ದಾರೆ. ಅದೇ ಕಾರಣಕ್ಕೆ ೨೦೧೭ ರಲ್ಲಿ ಆರ್ ಸಿ ಬಿ ತಂಡ ಇಂಗ್ಲೆಂಡ್ ನ ವೇಗಿ ಟೈಮಲ್ ಮಿಲ್ಸ್ ಅವರನ್ನು ೧೨ ಕೋಟಿ ನೀಡಿ ಖರೀದಿಸಿತ್ತು. ಅವರು ಆಡಿದ ೫ ಪಂದ್ಯಗಳಲ್ಲಿ ಕೇವಲ ೫ ವಿಕೆಟ್ ಅಷ್ಟೇ ಪಡೆದರು ಅದಾದ ನಂತರ ಇಂಗ್ಲೆಂಡ್ ತಂಡದಲ್ಲೂ ಅವರು ಪ್ಲೇಯಿಂಗ್ ೧೧ ರಲ್ಲಿ ಸ್ಥಾನ ಪಡೆಯಲು ತಡಕಾಡಿದ್ದಾರೆ. ೨೦೨೧ ರಲ್ಲಿ ಇಂಗ್ಲೆಂಡ್ ಪರ ಟಿ-೨೦ ತಂಡದಲ್ಲಿ ಸೇರಿಕೊಂಡಿದ್ದಾರೆ. ಅವರ ಫಾರಂ ಕಂಡುಕೊಂಡರೆ ಐಪಿಎಲ್ ಅಲ್ಲದೆ ಉಳಿದ ಟಿ-೨೦ ಟೂರ್ನಿಯಲ್ಲಿ ಕಾಣಿಸಿಕೊಳ್ಳಬಹುದು.

೩. ಯುವರಾಜ್ ಸಿಂಗ್ – ಯುವಿ ಅವರನ್ನು ಯಾರು ಮರೆಯಲು ಸಾಧ್ಯ? ಟಿ-೨೦ ಕ್ರಿಕೆಟ್ ಅಲ್ಲಿ ಇವರು ಅತ್ಯಂತ ಸೂಕ್ತ ಆಟಗಾರ. ೨೦೧೪ ರಲ್ಲಿ ಅವರನ್ನು ಆರ್ ಸಿ ಬಿ ಅತ್ಯಂತ ಗರಿಷ್ಟ ಅಂದರೆ ೧೪ ಕೋಟಿ ನೀಡಿ ಅವರನ್ನು ಖರೀದಿಸಿತ್ತು ಆದರೆ ಆ ಸೀಸನ್ ನಂತರದ ಸೀಸನ್ ಅಲ್ಲಿ ಅವರನ್ನು ತಂಡದಿಂದ ಬಿಟ್ಟುಕೊಟ್ಟಿತು. ಇಂದು ಅವರು ಎಲ್ಲ ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಪಡೆದಿದ್ದಾರೆ. ಆದರೂ ಕೂಡ ಇತ್ತೀಚಿಗೆ ಕ್ರಿಕೆಟ್ ಗೆ ಮರಳಿ ಬರುತ್ತಿದ್ದೇನೆ ಎಂದು ಹೇಳಿದ್ದಾರೆ.

೨. ಗ್ಲೇನ್ ಮ್ಯಾಕ್ಸ್ವೇಲ್- ಕಳೆದ ವರ್ಷ ಆಸ್ಟ್ರೇಲಿದ ಆಟಗಾರ ಗ್ಲೇನ್ ಮ್ಯಾಕ್ಸ್ ವೆಲ್ ಆರ್ ಸಿ ಬಿ ಗೆ ಹರಾಜಿನ ಮೂಲಕ ಬಂದಿದ್ದಾರೆ. ಅವರು ಇದಕ್ಕಿಂತ ಮೊದಲು ಪಂಜಾಬ್ ತಂಡದಲ್ಲಿ ಇದ್ದರು. ಅಲ್ಲಿ ಯಾವುದೇ ಉತ್ತಮ ಪ್ರದರ್ಶ ನೀಡಿರಲಿಲ್ಲ. ಒಅಂಜಬ್ ಕೂಡ ಅವರನ್ನು ಕೈ ಬಿಟ್ಟಿತ್ತು. ಆದರೆ ಫಾರಂ ಇಲ್ಲದಿದ್ದರೂ ಕೂಡ ಆರ್ ಸಿ ಬಿ ಅವರನ್ನು ದುಬಾರಿ ಮೊತ್ತ ಅಂದರೆ ೧೪.೨೫ ಕೋಟಿ ನೀಡಿ ಖರೀದಿ ಮಾಡಿತ್ತು, ಆರ್ ಸಿ ಬಿ ಅಷ್ಟು ಹಣ ಕೊಟ್ಟರು ಕೂಡ ಕಳೆದ ಐಪಿಎಲ್ ಅಲ್ಲಿ ಉತ್ತಮ ಆಟ ಆಡಿ ನೀಡಿದ ಹಣಕ್ಕೆ ನ್ಯಾಯ ಒದಗಿಸಿದ್ದಾರೆ. ಕಳೆದ ವರ್ಷದ ಐಪಿಎಲ್ ಅಲ್ಲಿ ಮ್ಯಾಕ್ಸ್ ಅವರು ೧೪೪ ರ ಸ್ಟ್ರೈಕ್ ರೇಟ್ ಅಲ್ಲಿ ೫೧೩ ರನ್ ಗಳಿಸಿದ್ದಾರೆ. ೨೦೨೨ ರ ಐಪಿಎಲ್ ಗೆ ಆರ್ ಸಿ ಬಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಈ ಬಾರಿಯೂ ಕೂಡ ಮ್ಯಾಕ್ಸ್ವೇಲ್ ಆರ್ ಸಿ ಬಿ ಪರ ಆಡಲಿದ್ದಾರೆ.

೧. ಕೈಲೆ ಜೆಮಿಸಾನ್- ಆರ್ ಸಿ ಬಿ ದುಬಾರಿ ಆಟಗಾರರನ್ನು ಖರೀದಿಸಿದ ಲಿಸ್ಟ್ ಅಲ್ಲಿ ನ್ಯೂಜಿಲ್ಯಾಂಡ್ ನ ಫಾಸ್ಟ್ ಬೌಲರ್ ಕೈಲೆ ಜೆಮಿಸಾನ್ ಮೊದಲ ಸ್ಥಾನದಲ್ಲಿ ಬರುತ್ತಾರೆ. ಕಳೆದ ವರ್ಷ ಅಂದರೆ ೨೦೨೧ ರ ಐಪಿಎಲ್ ಆವೃತ್ತಿಯಲ್ಲಿ ಆರ್ ಸಿ ಬಿ ಇವರಿಗೆ ಬರೋಬ್ಬರಿ ೧೫ ಕೋಟಿ ಕೊಟ್ಟು ಖರೀದಿಸಿತ್ತು. ಕಳೆದ ವರ್ಷದ ಐಪಿಎಲ್ ಅಲ್ಲಿ ಅವರ ಆರ್ ಸಿ ಬಿ ಪರ ೯ ಪಂದ್ಯದಲ್ಲಿ ೯ ವಿಕೆಟ್ ಅಷ್ಟೇ ಪಡೆದಿದ್ದಾರೆ. ಅವರ ಎಕಾನಮಿ ಕೂಡ ೯ ರ ಮೇಲಿತ್ತು. ಇಂದು ಇವರು ನ್ಯೂಜಿಲ್ಯಾಂಡ್ ಟೆಸ್ಟ್ ಟೀಮ್ ಅಲ್ಲಿ ಸ್ಥಾನ ಪಡೆದಿದ್ದಾರೆ. ಟೆಸ್ಟ್ ಬೌಲಿಂಗ್ ಅಲ್ಲಿ ಉತ್ತಮ ಫಾರಂ ಹೊಂದಿದ್ದಾರೆ. ಕಳೆದ ವರ್ಷ ಟೆಸ್ಟ್ ಚಾಂಪಿಯನ್ಷಿಪ್ ಗೆಲ್ಲುವಲ್ಲಿ ಜೆಮಿಸಾನ್ ಅವರ ಪಾತ್ರ ಮಹತ್ವದ್ದು. ಈ ಬಾರಿ ಅವರು ಹರಾಜಿನಲ್ಲಿ ಭಾಗವಹಿಸಲು ಯಾವುದೇ ಸಹಿ ಮಾಡಿಲ್ಲ. ಆದ್ದರಿಂದ ಈ ಬಾರಿ ಅವರು ಐಪಿಎಲ್ ಅಲ್ಲಿ ಕಾಣಸಿಗುವುದಿಲ್ಲ.

Leave A Reply

Your email address will not be published.