RCB ಕಪ್ ಇಲ್ಲತನಕ ಗೆಲ್ಲದೇ ಇರಲು ಕೊಹ್ಲಿ ಮಾಡಿದ ಈ ತಪ್ಪೇ ಕಾರಣವಂತೆ. ಕೊಹ್ಲಿ ಬಗ್ಗೆ ವೀರೇಂದ್ರ ಸೆಹ್ವಾಗ್ ಮಹತ್ವದ ಹೇಳಿಕೆ.

599

ಮುಂಬೈ ತೇಲುವಿಕ ಕೇಕೆಯಿಂದ ಬೆಂಗಳೂರು ತಂಡಕ್ಕೆ ಪ್ಲೇ ಆಫ್ ಆಡುವ ಅವಕಾಶ ಸಿಕ್ಕಿತ್ತು. ಇದರ ಸಂಪೂರ್ಣ ಲಾಭ ಬೆಂಗಳೂರು ತಂಡ ಪಡೆದುಕೋದಿದೆ ಅನ್ನುವುದಕ್ಕೆ ನಿನ್ನೆಯ ಆತನೇ ಸಾಕ್ಷಿ. ಇದಕ್ಕಿಂತ ಮೊದಲು ಕೂಡ RCB ಎಲಿಮಿನೇಟರ್ ಅಲ್ಲದೆ ಫೈನಲ್ ಅಲ್ಲೂ ಕೂಡ ಆಡಿದೆ. ಆದರೆ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಇದಕ್ಕೆ ಕಾರಣ ಅನೇಕವಿದ್ದರೂ ಕೂಡ ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹವಾಗ್ ಪ್ರಕಾರ ಕೊಹ್ಲಿ ಮಾಡಿದ ಈ ನಿರ್ಧಾರ ಕಾರಣವಂತೆ. ಏನು ಕೊಹ್ಲಿ ತಪ್ಪು?

RCB ಬಗ್ಗೆ ಮಾತಾಡಿರುವ ವೀರೇಂದ್ರ ಸೆಹವಾಗ್ ತಂಡದ ಕೋಚ್ ಸಂಜಯ್ ಬಂಗಾರ್ ಹಾಗು ನೂತನ ನಾಯಕ ಫಾಫ್ ಡುಪ್ಲೆಸಿಸ್ ಅವರನ್ನು ಅಭಿನಂದಿಸಿದ್ದಾರೆ. ತಂಡದ ಸಮತೋಲನ ನಾಯಕನಾಗಿ ಡುಪ್ಲೆಸಿಸ್ ಉತ್ತಮವಾಗಿ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಈ ಬಾರಿ ಪ್ಲೇ ಆಫ್ ಗೆ ಬೆಂಗಳೂರು ತಂಡ ತಲುಪಿದೆ ಎಂದು ಹೇಳಿದ್ದಾರೆ. ಇನ್ನು ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮಾತಾಡಿದ ಸೆಹ್ವಾಗ್ ಕೊಹ್ಲಿ ಕೆಲ ಆಟಗಾರರನ್ನು ಕೈ ಬಿಡುತ್ತಿದ್ದರು ಇದು ತಂಡದ ಸಮತೋಲನಕ್ಕೆ ಅಡ್ಡಿಪಡಿಸುತ್ತದೆ ಹಾಗೇನೇ ಆಟಗಾರರು ಕೂಡ ತಮ್ಮಲ್ಲಿನ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ.

ಒಂದೆರಡು ಪಂದ್ಯಗಳಲ್ಲಿ ಪ್ರದರ್ಶನ ಇಲ್ಲದೆ ಇದ್ದರೆ ಆಟಗಾರರನ್ನು ವಿರಾಟ್ ಕೊಹ್ಲಿ ಮುಂದಿನ ಪಂದ್ಯಗಳಿಗೆ ತೆಗೆದುಕೊಳ್ಳುತ್ತಿರಲಿಲ್ಲ, ಇದು ತಂಡದ ಸಮತೋಲನಕ್ಕೆ ತೊಂದರೆ ಕೊಡುತ್ತಿತ್ತು. ಇದು ಯಾವ ಆಲೋಚನೆ ಮೇಲೆ ಮಾಡುತ್ತಿದ್ದರು ಎನ್ನುವುದು ಅವರಿಗೆ ಗೊತ್ತು. ಆದರೆ ಈ ಬಾರಿ ಡುಪ್ಲೆಸಿಸ್ ನಾಯಕತ್ವ ವಹಿಸಿಕೊಂಡ ನಂತರ ಹಾಗೇನೇ ಕೋಚ್ ಅವರ ಗರಡಿಯಲ್ಲಿ ಈ ಪದ್ದತಿಗೆ ಬ್ರೇಕ್ ಬಿದ್ದಿದೆ. ಇದು ತಂಡವನ್ನು ಪ್ಲೇ ಆಫ್ ಗೆ ತಲುಪಿಸಲು ಸಾಧ್ಯವಾಗಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.

Leave A Reply

Your email address will not be published.