RCB ಪರ ಉತ್ತಮ ಪ್ರದರ್ಶನ ನೀಡದೆ ನಾಲ್ಕು ಪಂದ್ಯದ ನಂತರ ಬೆಂಚು ಕಾದಿದ್ದ ಈ ಆಟಗಾರ ಇದೀಗ ಬೊಂಬಾಟ್ ಬ್ಯಾಟಿಂಗ್ ಮಾಡಿ ಎಲ್ಲೆಡೆ ಸಂಚಲನ ಸೃಷ್ಟಿಸಿದ್ದಾರೆ

207

ಇತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಅಲ್ಲಿ ಡುಪ್ಲೆಸಿಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿಕೊಂಡ ನಂತರ ಪ್ಲೇ ಆಫ್ ಹಂತದವರೆಗೆ ತಂಡವನ್ನು ಮುಂದುವರೆಸಿಕೊಂಡು ಬಂದರು. ಆದರೆ ನಮ್ಮ ತಂಡಕ್ಕೆ ಲಕ್ ಸರಿ ಇಲ್ಲದೆ ರಾಜಸ್ತಾನ ದ ಎದುರು ಸೋತು ವಾಪಸಾಯಿತು ಬೆಂಗಳೂರು ತಂಡ. ಈ ಬಾರಿಯ ತಂಡ ಉತ್ತಮ ಸಮತೋಲನದಿಂದ ಕೂಡಿತ್ತು. ಕೆಲ ಆಟಗಾರರಿಗೆ ಪೂರ್ತಿ ಅವಕಾಶ ಸಿಗಲಿಲ್ಲ. ಅಂತಹ ಆಟಗಾರರಲ್ಲಿ ಡೇವಿಡ್ ವಿಲ್ಲೆ ಕೂಡ ಒಬ್ಬರು. ಮೊದಲ ನಾಲ್ಕು ಪಂದ್ಯಗಳಲ್ಲಿ ಜೋಶ ಹ್ಯಾಝೆಲ್ವುಡ್ ಬದಲಿಗೆ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಂಡಿದ್ದರು.

ಬೆಂಗಳೂರು ತಂಡ ಇವರಿಗೆ ಕೇವಲ ನಾಲ್ಕು ಪಂದ್ಯ ಅಡಲಷ್ಟೇ ಅವಕಾಶ ನೀಡಿತ್ತು. ಆದರೆ ಈ ಆಟಗಾರ ಯಾವುದೇ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಇಂಗ್ಲೆಂಡ್ ನ ಆಲ್ರೌಂಡರ್ ಡೇವಿಡ್ ವಿಲ್ಲೆ ಅಲ್ಲಿ ನಡೆಯುತ್ತಿರುವ ಟಿ-೨೦ ದೇಶಿಯ ಟೂರ್ನಮೆಂಟ್ ಅಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಇದೀಗ ಸುದ್ದಿಯಲ್ಲಿದ್ದಾರೆ. ಯಾರ್ಕ್ ಶೈರ್ ಪರ ಆಡುತ್ತಿರುವ ಡೇವಿಡ್ ವಿಲ್ಲೆ ಶುಕ್ರವಾರ ದೆಹ್ರಾಮ್ ಎದುರಿನ ಪಂದ್ಯದಲ್ಲಿ ಉತ್ತಮ ಆಟ ಆಡಿ ಸಂಚಲನ ಮೂಡಿಸಿದ್ದಾರೆ. ಅಲ್ಲದೆ ಈ ಪಂದ್ಯವನ್ನು ೬ ವಿಕೆಟ್ ಗಳಿಂದ ಗೆದ್ದಿದೆ. ಇದು ಕೂಡ ಈ ಡೇವಿಡ್ ವಿಲ್ಲೆ ಅವರ ಸಹಾಯದಿಂದ ಅಂದರೆ ತಪ್ಪಾಗಲಾರದು.

ಮೊದಲು ಬ್ಯಾಟಿಂಗ್ ಮಾಡಿದ ದೆಹ್ರಾಮ್ ಒಟ್ಟು ಎಂಟು ವಿಕೆಟ್ ಕಳೆದುಕೊಂಡು 207 ರನ್ ಕಲೆ ಹಾಕಿತ್ತು. ಇದನ್ನು ಚೇಸ್ ಮಾಡಿದ ಯಾರ್ಕ್ ಶೈರ್ ತಂಡ ಡೇವಿಡ್ ವಿಲ್ಲೆ ಅವರ ಆಟದಿಂದ ಗೆದ್ದು ಬಿಗಿದೆ. ಉತ್ತಮ ಆರಂಭ ಪಡೆದರು ಕೂಡ ೧೦ ನೇ ಓವರ್ ಅಲ್ಲಿ ಫ಼ಿನ್ ಅಲೆನ್ ಆಡಮ್ ಲಿತ್ ಅವರ 54 ರನ್ ಗಳ ಜೊತೆಯಾಟ ಕೊನೆಗೊಂಡಿತ್ತು. ಅಲ್ಲದೆ ವಿಕೆಟ್ ಗಳು ಕೂಡ ಬೀಳಲಾರಂಬಿಸಿತು. ನಂತರ ಬಂದ ಡೇವಿಡ್ ವಿಲ್ಲೆ ಕೇವಲ 39 ಬೌಲ್ಗಳಲ್ಲಿ 75 ರನ್ ಗಳ ಅಜೇಯ ಆಟದ ಮೂಲಕ ಪಂದ್ಯವನ್ನು ಗೆಲ್ಲಿಸುವಲ್ಲಿ ಸಫಲವಾಯಿತು. ಡೇವಿಡ್ ಅವರ ಸ್ಟ್ರೈಕ್ ರೇಟ್ ಬರೋಬ್ಬರಿ 192.71 ರಲ್ಲಿತ್ತು. RCB ಅಲ್ಲಿ ಇರುವಾಗ ಇದೆ ಆಟಗಾರ ನಾಲ್ಕು ಪಂದ್ಯದಲ್ಲಿ ಗಳಿಸಿದ್ದು ಕೇವಲ 18 ರನ್ ಅಷ್ಟೇ.

Leave A Reply

Your email address will not be published.