RCB ಪ್ಲೇ ಆಫ್ ಹೋಗಬೇಕಾದರೆ ಈ ಲೆಕ್ಕಾಚಾರಗಳು ಪಾಸ್ ಆಗಲೇಬೇಕು. ಇಲ್ಲವಾದರೆ ಮುಂದಿನ ಸಲ ಕಪ್ ನಮ್ದೇ.

1,998

ಅರ ಸಿ ಬಿ ಮತ್ತೊಮ್ಮೆ ಕಪ್ ಗೆಲ್ಲುವ ಸನಿಹದಲ್ಲಿದೆ. ಹಾಗೇನೇ ಪ್ಲೇಆಫ್ ಹಂತಕ್ಕೇರುವ ಕನಸು ಕೂಡ ತೂಗತ್ತಿಯಲ್ಲಿ ನೇತಾಡುತ್ತಿದೆ. RCB ಪ್ಲೇಆಫ್ ಹಂತಕ್ಕೇರಲು ಈ ಲೆಕ್ಕಾಚಾರಗಳು ಸಫಲವಾಗಲೇ ಬೇಕಾಗಿದೆ. ಇಲ್ಲವಾದರೆ ಇಂದಿನ ವರ್ಷದಂತೆ ಮುಂದಿನ ಸಲ ಕಪ್ ನಂದೇ ಅನ್ನುತ್ತಾ ನಮ್ಮನ್ನು ನಾವು ಸಮಾಧಾನಿಸಬೇಕಾಗುತ್ತದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ RCB ಕಪ್ ಗೆಲ್ಲುವ ಕನಸನ್ನು ಅನೇಕ ಅಭಿಮಾನಿಗಳು ಹೊಂದಿದ್ದರು, ಆದರೆ ನಾಯಕತ್ವದಿಂದ ಕೆಳಗಿಳಿದ ನಂತರ ಕೊಹ್ಲಿ ತಂಡದಲ್ಲಿರುವಾಗಲಾದರೂ ಕಪ್ ಗೆಲ್ಲಬೇಕು ಎಂದು ಎಲ್ಲರು ಬಯಸುತ್ತಿದ್ದಾರೆ.

RCB ತಂಡದಲ್ಲಿ ಶ್ರೀಲಂಕಾದ ಹಸಾರಂಗ ಹಾಗು ದಿನೇಶ್ ಕಾರ್ತಿಕ್ ಇಬ್ಬರು ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದೇ ರೀತಿ ಉತ್ತಮ ಪ್ರದರ್ಶನ ನೀಡದವರಲ್ಲಿ ವಿರಾಟ್ ಕೊಹ್ಲಿ ಹಾಗು ಹರ್ಷಲ್ ಪಟೇಲ್ ಅವರ ಬಗ್ಗೆ ಅಭಿಮಾನಿಗಳಲ್ಲಿ ಬೇಸರವಿದೆ. ಹಸಾರಂಗ ೨೩ ವಿಕೆಟ್ ಪಡೆದಿದ್ದರೆ, ದಿನೇಶ್ ಕಾರ್ತಿಕ್ 192 ರ ಸ್ಟ್ರೈಕ್ ರೇಟ್ ಅಲ್ಲಿ ೨೮೫ ರನ್ ಗಳಿಸಿದ್ದಾರೆ. ಕಳೆದ ಪಂಜಾಬ್ ವಿರುದ್ದದ ಪಂದ್ಯದಲ್ಲಿ RCB ಸೋತ ನಂತರ ಉಳಿದ ಒಂದು ಪಂದ್ಯ ಗೆಲ್ಲಲೇಬೇಕಾದ ಪರಿಸ್ಥಿತಿ ಬಂದೊದಗಿದೆ. ಇದರ ಜೊತೆ ರನ್ ರೇಟ್ ಕೂಡ ಕಳವಳಕಾರಿಯಾಗಿದೆ.

ಅದರ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ನಿನ್ನೆಯ ಪಂದ್ಯದಲ್ಲಿ ಪಂಜಾಬ್ ಅನ್ನು ಸೋಲಿಸುವ ಮೂಲಕ ಪ್ರಸ್ತುತವಾಗಿ ನಾಲ್ಕನೇ ಸ್ತನದಲ್ಲಿ RCB ಬಂದು ಕೂತಿದೆ. ಡೆಲ್ಲಿ ಹಾಗು ಬೆಂಗಳೂರು ಎರಡು ತಂಡಗಳು ಕೂಡ ೧೩ ಪಂದ್ಯದಲ್ಲಿ ೭ ಪಂದ್ಯಗಳನ್ನು ಗೆಲ್ಲುವ ಮೂಲಕ ೧೪ ಪಾಯಿಂಟ್ಸ್ ಹೊಂದಿದೆ. ಆದರೆ ಡೆಲ್ಲಿ ತಂಡದ ರನ್ ರೇಟ್ RCB ಗಿಂತ ಉತ್ತಮವಾಗಿದೆ. ಅದೇ ಕಾರಣಕ್ಕೆ ಅಂಕಪಟ್ಟಿಯಲ್ಲಿ RCB ಯನ್ನು ಐದನೇ ಸ್ಥಾನಕ್ಕೆ ಕಳುಹಿಸಿ ಡೆಲ್ಲಿ ತಂಡ ನಾಲ್ಕನೇ ಸ್ಥಾನದಲ್ಲಿ ಕೂತು ಪ್ಲೇ ಆಫ್ ಗೇರಲು ಸಜ್ಜಾಗಿದೆ.

ಇನ್ನು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಇನ್ನು ಒಂದು ಪಂದ್ಯ ಉಳಿದಿದೆ. ಆದರೆ ಈ ಗೆಲುವಿನಿಂದ ಪ್ಲೇ ಆಫ್ ಗೇರಲು ಸಾಧ್ಯವಿಲ್ಲ. ಹಾಗೇನೇ ಡೆಲ್ಲಿ ಕ್ಯಾಪಿಟಲ್ ಉಳಿದ ಒಂದು ಪಂದ್ಯ ಸೋಲಲೇ ಬೇಕಾದ ಅನಿವಾರ್ಯತೆ ಬೆಂಗಳೂರು ತಂಡಕ್ಕಿದೆ. ಒಂದು ವೇಳೆ ಬೆಂಗಳೂರು ಮುಂದಿನ ಪಂದ್ಯದಲ್ಲಿ ೨೦೦ ರನ್ ಗಳಿಸಿ ೧೦೦ ರನ್ ಅಂತರದಲ್ಲಿ ಗೆದ್ದರು ಕೂಡ ರನ್ ರೇಟ್ ೦.೦೭೧ ಕ್ಕೆ ಬರಲಿದೆ. ಇನ್ನು ಡೆಲ್ಲಿ ಯಾವುದೇ ಸಣ್ಣ ಅಂತರದಲ್ಲಿ ಗೆದ್ದರು ಕೂಡ RCB ಪ್ಲೇ ಆಫ್ ಕನಸು ನನಸಾಗುವುದಿಲ್ಲ.

ಒಂದು ವೇಳೆ ಎರಡು ಬೆಂಗಳೂರು ಹಾಗು ಡೆಲ್ಲಿ ಎರಡು ತಂಡಗಳು ಕೂಡ ಮುಂದೆ ಇರುವ ಒಂದೊಂದು ಪಂದ್ಯ ಸೋತರು ಕೂಡ ಡೆಲ್ಲಿ ತಂಡ ಪ್ಲೇ ಆಫ್ ಗೆ ಹೋಗಲಿದೆ. ಕಾರಣ ನೆಟ್ ರನ್ ರೇಟ್. ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ೧೫೦ ರನ್ ಇಂದ ಸೋಲಬೇಕು ಹಾಗೇನೇ RCB ೧ ರನ್ ಅಂತರದಲ್ಲಿ ಸೋತರೆ ಬೆಂಗಳೂರು ತಂಡ ಪ್ಲೇ ಆಫ್ ಗೆ ಸೇರಲಿದೆ. ಹಾಗೇನೇ ನೋಡಬೇಕೆಂದರೆ ಬೆಂಗಳೂರು ತಂಡದ ಮುಂದಿನ ಪಂದ್ಯದ ಎದುರಾಳಿ ಗುಜರಾತ್ ಟೈಟಾನ್ಸ್, ಡೆಲ್ಲಿ ತಂಡದ ಎದುರಾಳಿ ಮುಂಬೈ ಇಂಡಿಯನ್ಸ್. ಬೆಂಗಳೂರು ತಂಡ ಅಂಕಪಟ್ಟಿಯ ನಂಬರ್ ೧ ತಂಡವನ್ನು ಸೋಲಿಸಬೇಕು. ಡೆಲಿ ಕ್ಯಾಪಿಟಲ್ ತಂಡ ಅಂಕಪಟ್ಟಿಯ ಕೊನೆಯ ತಂಡದಿಂದ ಸೋಲಬೇಕು. ಆಗ ಮಾತ್ರ RCB ಪ್ಲೇ ಆಫ್ ಗೇರಲು ಸಾಧ್ಯತೆ.

Leave A Reply

Your email address will not be published.