RCB ಸೋಲುವುದರ ಜೊತೆಗೆ ವಿರಾಟ್ ಕೊಹ್ಲಿ ಅವರ ಮೇಲಿದ್ದ ದೊಡ್ಡ ಅಪವಾದಕ್ಕೆ ತೆರೆ. ಮುಂದಿನ ಸಲ ಕಪ್ ನಮ್ಮದೇ ಅಂತಿದ್ದಾರೆ ಫ್ಯಾನ್ಸ್.

522

ಎಲಿಮಿನೇಟರ್ ಗೆದ್ದ ಬಳಿಕ ಎಲ್ಲರಿಗು ಆತ್ಮವಿಶ್ವಾಸ ಇತ್ತು ಈ ಬಾರಿ ಫೈನಲ್ ಗೆ ತಲುಪಿ ಐಪಿಎಲ್ ಕಪ್ ಗೆಲ್ಲುತ್ತೇವೆ ಎಂದು. ಅದಕ್ಕೆ ಕಾರಣ ಬೆಂಗಳೂರು ತಂಡದ ಸಂಘಟಿತ ಪ್ರದರ್ಶನ. ಮೊದಲ ಪಂದ್ಯದಿಂದ ಮೊನ್ನೆಯ ಪಂದ್ಯದ ವರೆಗೂ ಉತ್ತಮ ತಂಡವಾಗಿ ಪ್ರದರ್ಶನ ನೀಡುತ್ತಾ ತಂಡ ಕ್ವಾಲಿಫೈರ್ ೨ ತನಕ ಬಂದಿದೆ. ಆದರೆ ರಾಜಸ್ತಾನ ವಿರುದ್ದದ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು ಆದರೆ ಬೆಂಗಳೂರು ತಂಡದ ನೀರಸ ಪ್ರದರ್ಶನದಿಂದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಆದರೆ ಅಭಿಮಾನ ಕಡಿಮೆ ಆಗಿಲ್ಲ. ಮುಂದಿನ ಸಲ ಕಪ್ ನಂದೇ ಅಂತಿದ್ದಾರೆ.

ಎರಡನೇ ಕ್ವಾಲಿಫೈರ್ ಅಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ಹಿನ್ನಡೆ ಅನುಭವಿಸಿತು ಬೆಂಗಳೂರು ತಂಡ, ಆದರೆ ತಂಡವನ್ನು ೧೫೦ ರನ್ ತಲುಪಿಸಿದ್ದು ಕೇವಲ ೩೦ ಲಕ್ಷ ಪಡೆದು ಬಂದ ರಜತ್ ಪಾಟೀದಾರ್. ಅಲ್ಲದೆ ಹಿಂದಿನ ಪಂದ್ಯವನ್ನು ಕೂಡ ಗೆಲ್ಲಿಸುವ ಶ್ರೇಯ ಹೋಗಬೇಕಾಗಿದ್ದು ಕೂಡ ಅವರಿಗೆ. ಇನ್ನು ಬೌಲಿಂಗ್ ಅಲ್ಲೂ ಕೂಡ ಯಾವುದೇ ಮ್ಯಾಜಿಕ್ ಮಾಡಲಿಲ್ಲ ಬೆಂಗಳೂರು ತಂಡ ಇದರ ಜೊತೆಗೆ ರಾಜಸ್ತಾನ ತಂಡ ರಾಯಲ್ ಆಗಿ ಫೈನಲ್ ಅಲ್ಲಿ ಗುಜರಾತ್ ಜೊತೆ ಮುಖಾಮುಖಿ ಆಗಲಿದೆ. ಬಟ್ಲರ್ ಅವರ ಶತಕದಿಂದ ರಾಜಸ್ತಾನ್ ಫೈನಲ್ ಪ್ರವೇಶ ಮಾಡಿದೆ.

ಈ ಬಾರಿ ರಾಯಲ್ ಚಾಲೆಂಜರ್ಸ್ ತಂಡ ಸೋಲುವುದರ ಮೂಲಕ ವಿರಾಟ್ ಕೊಹ್ಲಿ ಮೇಲೆ ಅಂತಿದ್ದ ಒಂದು ಅಪವಾದ ಕೂಡ ಹೋಗಿದೆ. ಇಂದಿನ ಈ ಸೋಲು ಬೆಂಗಳೂರು ಅಭಿಮಾನಿಗಳಿಗೆ ಒಳ್ಳೆ ಸುದ್ದಿಯೋ ಅಥವಾ ಕೆಟ್ಟ ಸುದ್ದಿಯೋ ಅವರೇ ನಿರ್ಧಾರ ಮಾಡಬೇಕಾಗಿದೆ. ಈ ೧೪ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅವರ ನಾಯಕತ್ವ ಸರಿ ಇಲ್ಲ ಎಂದು ಎಲ್ಲರು ಹೇಳುತ್ತಿದ್ದರು. ಅದೇ ಕಾರಣಕ್ಕೆ ಬೆಂಗಳೂರು ತಂಡ ಕಪ್ ಗೆಲ್ಲುತ್ತಿಲ್ಲ ಎನ್ನುತ್ತಿದ್ದರು. ಇದು ವಿರಾಟ್ ಕೊಹ್ಲಿ ಗು ಕೂಡ ಸರಿ ಅನಿಸಿತೋ ಏನೋ ಅದೇ ಕಾರಣಕ್ಕೆ ಈ ಆವೃತ್ತಿಯಲ್ಲಿ ನಾಯಕತ್ವ ವಹಿಸಿಕೊಳ್ಳಲಿಲ್ಲ. ಆದರೂ ಕೂಡ RCB ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದ್ದರಿಂದ ಬೆಂಗಳೂರು ಇಲ್ಲಿಯವರೆಗೆ ಕಪ್ ಗೆಲ್ಲಲು ಸಾಧ್ಯವಾಗದೆ ಇದ್ದದ್ದು ವಿರಾಟ್ ಕೊಹ್ಲಿ ನಾಯಕತ್ವದಿಂದ ಅಲ್ಲ ಎನ್ನುವುದು ಸಾಬೀತಾಗಿದೆ.

 

Leave A Reply

Your email address will not be published.