Cricket News: ಉತ್ತಮ ಪ್ರದರ್ಶನ ನೀಡಿದರೂ ಎರಡನೇ ಟೆಸ್ಟ್ ಗೆ ಕುಲದೀಪ್ ಯಾದವ್ ರನ್ನು ಆಯ್ಕೆ ಮಾಡದಕ್ಕೆ ಕೆ ಎಲ್ ರಾಹುಲ್ ವಿರುದ್ಧ ಸುನಿಲ್ ಗವಾಸ್ಕರ್ ಗರಂ.

141

ಭಾರತ ಮತ್ತು ಬಾಂಗ್ಲಾದೇಶ ನಡುವಣ ಟೆಸ್ಟ್ ಸೀರೀಸ್ ನ ಎರಡನೇ ಪಂದ್ಯ ಇಂದು ಆರಂಭವಾಗಿದೆ. ಮೊದಲ ಟೆಸ್ಟ್ ನಲ್ಲಿ ಗೆಲುವು ದಾಖಲಿಸಿ 1-0 ಮುನ್ನಡೆ ಕಾಯ್ದು ಕೊಂಡಿದೆ ಭಾರತ. ಮೊದಲ ಪಂದ್ಯದಲ್ಲಿ ಒಂದು ಹಂತದಲ್ಲಿ ಸ್ವಲ್ಪ ಮಟ್ಟಿಗೆ ಕುಸಿತ ಕಂಡಾಗ ಭಾರತದ ಯುವ ಸ್ಪಿನ್ನರ್ ಕುಲದೀಪ್ ಯಾದವ್ (Kuldeep Yadav) ಅವರು 40 ರನ್ ಬಾರಿಸುವ ಮೂಲಕ ಕೆಳ ಕ್ರಮಾಂಕದಲ್ಲಿ ತಂಡವನ್ನು ಭದ್ರ ಇರಿಸಿದ್ದರು. ಆದರೆ ಇಂದು ಎರಡನೇ ಪಂದ್ಯದ ಟಾಸ್ ವೇಳೆ ಎಲ್ಲಾ ಭಾರತೀಯ ಕ್ರೀಡಾ ಅಭಿಮಾನಿಗಳಿಗೆ ಶಾಕಿಂಗ್ ವಿಷಯ ಎರಡನೇ ಪಂದ್ಯದಲ್ಲಿ ಕುಲದೀಪ್ ಯಾದವ್ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಕುಲದೀಪ್ ಬದಲಿಗೆ ಜಯದೇವ್ ಊನಾಡ್ಕಟ್ Jayadev Unadkat) ಅವರಿಗೆ ಮಣೆ ಹಾಕಲಾಗಿದೆ.

ಆದರೆ ಈ ನಿರ್ಣಯದ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಗಾವಸ್ಕರ್ (Suneel Gavaskar) ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಹೌದು ಮೊದಲನೆಯ ಪಂದ್ಯದಲ್ಲಿ ಉತ್ತಮ ಕ್ರಿಕೆಟ್ ಆಡಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದಿದ್ದಾರೆ. ಭಾರತದ ಸಂಕಷ್ಟದ ಸಮಯದಲ್ಲಿ 40ರನ್ ಬಾರಿಸುವ ಮೂಲಕ ಸಮಾಧಾನಕರ ಮೊತ್ತ ದಾಖಲಿಸಿದ್ದಾರೆ. ಅದೇ ಅಲ್ಲದೆ ಮೊದಲು ಮತ್ತು ಎರಡನೇ ಇನ್ನಿಂಗ್ಸ್ ಸೇರಿ ಒಟ್ಟು 8 ವಿಕೆಟ್ ಪಡೆದಿದ್ದಾರೆ. ಹೀಗಿರುವಾಗ ಇಂತಹ ಆಟಗಾರರನ್ನು ಹೊರಗಿಟ್ಟ ನಾಯಕ ರಾಹುಲ್ ಕೋಚ್ ದ್ರಾವಿಡ್ ಮತ್ತು ಮ್ಯಾನೇಜ್ ಮೆಂಟ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಸ್ಪಿನ್ ಬೌಲರ್ ಗಳಿಗೆ ಪಿಚ್ ನೆರವು ಇಲ್ಲದಿದ್ದರೆ ಬೇರೆ ಯಾವುದಾದರೂ ಸ್ಪಿನ್ನರ್ ಅನ್ನು ಹೊರ ಇಡಬಹುದಾಗಿತ್ತು ಮೊದಲ ಪಂದ್ಯದ ಹೀರೋ ಆಟಗಾರನನ್ನು ಹೊರ ಹಾಕಿದ್ದು ಬೇಸರ ಮೂಡಿಸಿದೆ ಎಂದಿದ್ದಾರೆ. ಮೊದಲ ಪಂದ್ಯದ ಮ್ಯಾನ್ ಆಫ್ ಡಿ ಮ್ಯಾಚ್ ಪ್ಲೇಯರ್ ಅನ್ನು ಹೊರಗಿಟ್ಟದ್ದು ನಂಬಲು ಅಸಾಧ್ಯ ಇಷ್ಟೇ ಹೇಳಬಲ್ಲೆ , ಇದಕ್ಕಿಂತಲೂ ಕಟುವಾಗಿ ಟೀಕಿಸಲು ಮನಸಾಗುತ್ತಿದೆ ಎಂದು ಅವರು ಮಾಧ್ಯಮದಲ್ಲಿ ಹೇಳಿದ್ದಾರೆ.

Leave A Reply

Your email address will not be published.