FIFA2022: ಫೀಫಾ ವಿಶ್ವಕಪ್ ಗೆದ್ದ ತಂಡಕ್ಕೆ ಸಿಕ್ಕ ಹಣ ಎಷ್ಟು ಗೊತ್ತೆ? ಐಪಿಎಲ್ ಅಲ್ಲಿ ಸಿಗುವ ಹಣವೆಷ್ಟು?
ಫೀಫಾ ವಿಶ್ವಕಪ್ ಕ್ರೀಡಾಕೂಟ ಇದೀಗಾಗಲೇ ಕತಾರ್ (Qatar) ನಲ್ಲಿ ಮುಗಿದಿದ್ದು. ಫುಟ್ಬಾಲ್ ಅಭಿಮಾನಿಗಳಿಗೆ ರಸದೌತಣ ನೀಡಿದೆ. ಅದೆಷ್ಟೋ ಕೋಟ್ಯಾಂತರ ಅಭಿಮಾನಿಗಳನ್ನು ರಂಜಿಸಿ ಹಲವಾರು ತಂಡಗಳು ವಿಶ್ವಕಪ್ ಗಾಗಿ ಸೆಣಸಿ ಕೊನೆಗೆ ಅರ್ಜೆಂಟೀನಾ (Argentine) ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. 40 ವರ್ಷಗಳ ನಂತರ ಮತ್ತೊಮ್ಮೆ ಅರ್ಜೆಂಟೀನಾ (Argentine) ತಂಡ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಹಾಗಾದರೆ ಗೆದ್ದ ತಂಡ ಬಹುಮಾನ ರೂಪದಲ್ಲಿ ಪಡೆದ ಹಣ ಎಷ್ಟು ಗೊತ್ತೆ ? ಅತ್ಯಂತ ದುಬಾರಿ ವೆಚ್ಚದಲ್ಲಿ ನಡೆಯುವ ಈ ಕ್ರೀಡಾಕೂಟದ ಬಹುಮಾನ ಮೊತ್ತ ಕೇಳಿದರೆ ಎಲ್ಲರಿಗೂ ಒಮ್ಮೆ ಅಯ್ಯಬ್ಬ ಎನ್ನುವ ಭಾವನೆ ಬರುತ್ತದೆ.
ಹೌದು ಕತಾರ್ ನಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಈ ಬಾರಿ ಕ್ರೀಡಾಕೂಟದ ಮೂರನೇ ಸ್ಥಾನ ಪಡೆದ ತಂಡ ಕ್ರೋವಶಿಯ (Croasia) ಒಟ್ಟು 12ಮಿಲಿಯನ್ ಅಂದರೆ ಭಾರತದ ರೂಪಾಯಿ ಮೌಲ್ಯ 100 ಕೋಟಿಯ ಆಸುಪಾಸಿನಲ್ಲಿ ಬರುತ್ತದೆ. ಹಾಗೆ ಫೀಫಾ 2022 (FIFA2022) ರನ್ನರ್ ಅಪ್ ತಂಡ ಫ್ರಾನ್ಸ್ (France) ಕಳೆದ ಬಾರಿಯ ಚಾಂಪಿಯನ್ ಕೂಡ ಹೌದು ಈ ತಂಡಕ್ಕೆ ಹಣದ ರೂಪದಲ್ಲಿ 30 ಮಿಲಿಯನ್ ಹಣ ಸಿಕ್ಕಿದೆ ಭಾರತದ ರೂಪಾಯಿ ಮೌಲ್ಯ ಅಂದಾಜು 248 ಕೋಟಿ ರೂಪಾಯಿ ಆಸುಪಾಸಿನಲ್ಲಿ ಬರುತ್ತದೆ. ಹೀಗೆ ಈ ಬಾರಿಯ ಚಾಂಪಿಯನ್ ತಂಡ ಮೆಸ್ಸಿ (Messi) ನಾಯಕತ್ವದ ಅರ್ಜೆಂಟೀನಾ (Argentine) ತಂಡ ವಿಶ್ವಕಪ್ ಗೆದ್ದಿದ್ದು ಬಹುಮಾನ ರೂಪದಲ್ಲಿ 42 ಮಿಲಿಯನ್ ಪಡೆದಿದೆ . ಭಾರತದ ರೂಪಾಯಿ ಮೌಲ್ಯದ ಅಂದಾಜು 348 ಕೋಟಿ ರೂಪಾಯಿ ಆಸುಪಾಸಿನಲ್ಲಿ ಬರುತ್ತದೆ.
ಐಪಿಎಲ್ (IPL) ಗೆ ಹೋಲಿಕೆ ಮಾಡಿದರೆ ಇದು 500 ಪಟ್ಟು ಹೆಚ್ಚು . ಹೌದು ಈ ಬಾರಿಯ ಐಪಿಎಲ್ ತಂಡ ಪಡೆದಿದ್ದು 20 ಕೋಟಿ ಅಷ್ಟೇ ಆದರೆ ಫುಟ್ಬಾಲ್ ಚಾಂಪಿಯನ್ ತಂಡ ಪಡೆದಿದ್ದು ಬರೋಬ್ಬರಿ 348 ಕೋಟಿ. ಅದಕ್ಕೆ ಫುಟ್ಬಾಲ್ ಆಟವನ್ನು ಅತ್ಯಂತ ಶ್ರೀಮಂತ ಆಟ ಎಂದು ಕರೆಯುತ್ತಾರೆ. ಅದೇನೇ ಆಗಲಿ ಈ ಬಾರಿಯ ಕ್ರೀಡಾಕೂಟ ಮುಗಿದಿದ್ದು ಇನ್ನೂ ಮುಂದಿನ ವಿಶ್ವಕಪ್ ಗೆ ಮತ್ತು ನಾಲ್ಕು ವರ್ಷ ಕಾಯಬೇಕು ಅಲ್ಲಿಯವರೆಗೆ ಗೆದ್ದ ತಂಡ ವಿಶ್ವ ಚಾಂಪಿಯನ್ ಆಗಿ ಇರಲಿದೆ.