Sandalwood News: ಬೆಂಬಲಿಸಿದಕ್ಕೆ ಕಿಚ್ಚ ಸುದೀಪ್ ಗೆ ಧನ್ಯವಾದ ಹೇಳಿದ ದರ್ಶನ ತೂಗುದೀಪ.

160

ದರ್ಶನ ತೂಗುದೀಪ ಅವರ ಕ್ರಾಂತಿ ಸಿನೆಮಾ ಇನ್ನೇನು ಮುಂದಿನ ತಿಂಗಳು ಬರಲಿದೆ. ಇದಕ್ಕೆ ಸಾಕಷ್ಟು ಪೂರ್ವ ತಯಾರಿ ನಡೆಸುತ್ತಿದ್ದಾರೆ ದರ್ಶನ ಹಾಗು ಇಡೀ ಸಿನೆಮಾ ತಂಡ. ಈಗಾಗಲೇ ಹಾಡು ಬಿಡುಗಡೆ ಆಗಿದೆ. ಆದರೆ ಈ ಸಿನೆಮಾ ಬಿಡುಗಡೆ ಗು ಮೊದಲು ಅನೇಕ ವಿವಾದಗಳಿಗೆ ಸಾಕ್ಷಿ ಆಗಿದ್ದಾರೆ ದರ್ಶನ ಅವರು. ಇದರಲ್ಲಿ ಹೊಸಪೇಟೆಯಲ್ಲಿ ನಡೆದ ಘಟನೆ ಕೂಡ ಒಂದಾಗಿದೆ. ಏನಿದು ವಿವಾದಗಳ ಸುರಿಮಳೆ?

ದರ್ಶನ ಅವರ ವಿವಾದಗಳು ಇವತ್ತು ನಿನ್ನೆಯದಲ್ಲ. ಕ್ರಾಂತಿ ಪ್ರಮೋಷನ್ ಗೆ ಇಳಿಯುವ ಮುನ್ನವೇ ೪-೫ ತಿಂಗಳ ಹಿಂದೆ ನಿರ್ಮಾಪಕ ಉಮಾಪತಿ ಅವರ ಜೊತೆಗೆ ನಡೆದ ವಿವಾದ ನಂತರ ಮಾಧ್ಯಮಗಳು ಇವರ ಬಗ್ಗೆ ಸುದ್ದಿ ಮಾಡುವುದನ್ನೇ ನಿಲ್ಲಿಸಿಬಿಟ್ಟಿವೆ. ಇವರ ಬಗ್ಗೆ ಏನೇ ಸುದ್ದಿ ಇರಲಿ ಮುಂದೆ ಬಂದು ಸುದ್ದಿ ಪ್ರಸಾರ ಮಾಡುತ್ತಿಲ್ಲ. ಇದೀಗ ಅವರ ಅಭಿಮಾನಿಗಳೇ ಕ್ರಾಂತಿ ಸಿನೆಮಾ ಪ್ರಚಾರ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ಹವಾ ಎಬ್ಬಿಸಿದ್ದಾರೆ.

ಇಷ್ಟಕ್ಕೆ ಅಲ್ಲದೆ ಕೆಲ ದಿನಗಳ ಹಿಂದೆ ಒಂದು ಸಂದರ್ಶನದಲ್ಲಿ ಅದೃಷ್ಟ ಲಕ್ಷ್ಮಿ ಬಗ್ಗೆ ಅಸಭ್ಯವಾಗಿ ಮಾತಾಡಿ ಬಹುಸಂಖ್ಯಾತ ಜನರ ಕಣ್ಣಿಗೂ ಕೂಡ ಗುರಿಯಾಗಿದ್ದರು. ಇದು ಮಾತ್ರ ಅಲ್ಲದೆ ಹೊಸಪೇಟೆಯಲ್ಲಿ ಅಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡುವ ಸಮಯದಲ್ಲಿ ಜನರ ನಡುವೆಯಿಂದ ಚಪ್ಪಲ್ಲಿ ಎಸೆತ ನಡೆದಿದ್ದು ದರ್ಶನ ತೂಗುದೀಪ ಅವರಿಗೆ ತುಂಬಾ ಇರಿಸು ಮುರಿಸು ಉಂಟಾಗಿದೆ.

ಇದಕ್ಕೆ ಸ್ಯಾಂಡಲ್ ವುಡ್ ನ ಅನೇಕ ನಟರು ಬೇಸರ ವ್ಯಕ್ತ ಪಡಿಸಿದ್ದಾರೆ. ಇದರಲ್ಲಿ ಕಿಚ್ಚ ಸುದೀಪ್ ಅವರು ಕೂಡ ಒಬ್ಬರು. ಒಂದು ಕಾಲದಲ್ಲಿ ಗೆಳೆಯರಾಗಿದ್ದ ಸುದೀಪ್ ಹಾಗು ದರ್ಶನ ನಂತರದ ದಿನಗಳಲ್ಲಿ ಹಲವು ಕಾರಣಗಳಿಂದ ದೂರವಾಗಿದ್ದಾರೆ ಎನ್ನುವ ಸುದ್ದಿ ಇತ್ತು. ಇದೀಗ ಈ ಚಪ್ಪಲಿ ಪ್ರಸಂಗ ನಂತರ ಕಿಚ್ಚ ಸುದೀಪ್ ಅವರು ಟ್ವಿಟ್ಟರ್ ಮೂಲಕ ಇದನ್ನು ಖಂಡಿಸಿ ಅಭಿಪ್ರಾಯ ಹಂಚಿಕೊಂಡಿದ್ದರು. ಇದಕ್ಕೆ ದರ್ಶನ ತೂಗುದೀಪ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Leave A Reply

Your email address will not be published.