Kannada Bigboss :ಬಿಗ್ ಬಾಸ್ ಮನೆಯಿಂದ ಟಾಪ್ ಎಂಟರ್ಟೈನರ್ ಗಾಯಬ್. ಎಲ್ಲೋಗಿದ್ದರೆ ಅರುಣ್ ಸಾಗರ್?
ಕನ್ನಡ ಬಿಗ್ ಬಾಸ್ (Kannada Bigboss) ರಿಯಾಲಿಟಿ ಶೋ ಗಳಲ್ಲೇ ಅತಿ ಜನಪ್ರಿಯ ಕಾರ್ಯಕ್ರಮವಾಗಿದೆ. ಇದಕ್ಕೆ ಕಾರಣ ಮನೆಯಲ್ಲಿ ಸ್ಪರ್ದಿಗಳ ನಡುವೆ ನಡೆಯುವ ಮಾತಿನ ಚಕಮಕಿ ಇರಬಹುದು ಅಥವಾ ಅಲ್ಲಿ ಆಡುವ ಆಟಗಳೇ ಇರಬಹುದು. ಇನ್ನೊಂದು ಮುಖ್ಯ ಕಾರಣ ಕಿಚ್ಚ ಸುದೀಪ್ (Kicha Sudeep) ಅವರು ಈ ಶೋ ನಡೆಸಿಕೊಡುತ್ತಿರುವುದು. ಎಂಟು ಆವೃತ್ತಿಯನ್ನು ಯಶಸ್ವಿಯಾಗಿ ನಡೆಸಿ ಇದೀಗ ಒಂಬತ್ತನೇ ಶೋ ಮುಕ್ತಾಯ ಹಂತಕ್ಕೆ ಬಂದಿದೆ. ಈಗಾಗಲೇ ಒಂದರ ಮೇಲೊಂದರಂತೆ ಟ್ವಿಸ್ಟ್ ನೀಡುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇದೀಗ ಇನ್ನೊಂದು ಪ್ರಸಂಗ ನಡೆದಿದೆ.
ಸದಾ ಬಿಗ್ ಬಾಸ್ ಮನೆಯಲ್ಲಿ ಮನೋರಂಜನೆಯನ್ನು ನೀಡುತ್ತಿದ್ದ ಅರುಣ್ ಸಾಗರ್ (Arun Sagar) ಅವರು ಮನೆಯಲ್ಲಿ ಕಾಣಿಸುತ್ತಿಲ್ಲ. ಪ್ರತಿದಿನ ಒಂದು ಒಂದು ವೇಷ ಧರಿಸಿ ಬರುತ್ತಿದ್ದ ಇವರು ಎಲ್ಲರಿಗು ಮನರಂಜನೆ ನೀಡುತ್ತಿದ್ದರು. ಅಲ್ಲದೆ ಎಲ್ಲರ ಜೊತೆಯೂ ಅತ್ಯಂತ ಉತ್ತಮವಾಗಿ ಇರುತ್ತಿದ್ದರು. ಅದೇ ಕಾರಣಕ್ಕಾಗಿ ಇವರು ದಿನದ ಒಂದು ಗಂಟೆಯ ಎಲ್ಲ ಕ್ಲಿಪ್ ಗಳಲ್ಲಿ ಕಾಣಿಸುತ್ತಿದ್ದರು. ಇದೀಗ ಕಳೆದವಾರ ಅನುಪಮಾ ಗೌಡ (Anupama Gowda) ಅವರ ಎಲಿಮಿನೇಷನ್ ನಂತರ ಈ ಹೊಸ ವಾರದಲ್ಲಿ ಅರುಣ್ ಸಾಗರ್ ಅವರನ್ನು ಕಾರ್ಯಕ್ರಮದಲ್ಲಿ ಬಿಗ್ ಬಾಸ್ ತೋರಿಸಿಲ್ಲ.
ಸೋಮವಾರ ನಡೆದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅರುಣ್ ಸಾಗರ್ (Arun Sagar) ಯಾವುದೇ ರೀತಿಯಲ್ಲೂ ಕಾಣಿಸಿಲ್ಲ. ಇವರು ಮನೆಗೆ ಹೋಗಿದ್ದರೋ ಎನ್ನುವುದು ಕೂಡ ಸ್ಪಷ್ಟ ಪಡಿಸಿಲ್ಲ. ಅಲ್ಲದೆ ಇವರ ನಾಪತ್ತೆ ಬಗ್ಗೆ ಮನೆಯಲ್ಲಿ ಯಾರು ಕೂಡ ಮಾತಾಡುತ್ತಿಲ್ಲ. ಹಾಗೇನೇ ಇವರಿಗೇನಾದರೂ ಅರೋಗ್ಯ ಸಮಸ್ಯೆ ಆಗಿದೆಯೋ ಎನ್ನುವುದು ಕೂಡ ಗೊತ್ತಿಲ್ಲ. ಅಲ್ಲದೆ ಇವರನ್ನು ಸೀಕ್ರೆಟ್ ರೂಮ್ ಅಲ್ಲಿ ಇಡಲಾಗಿದೆಯೋ ಎನ್ನುವ ಅನುಮಾನ ಕೂಡ ಎಲ್ಲರಲ್ಲಿದೆ. ಯಾಕೆಂದರೆ ಇದನ್ನು ಬಿಗ್ ಬಾಸ್ ಹಿಂದೆಯೂ ಮಾಡಿದೆ. ಆದರೆ ಇವರು ಆ ರೂಮ್ ಅಲ್ಲಿ ಇದ್ದರೆ ಇದನ್ನು ಪ್ರಸಾರ ಮಾಡಬೇಕಿತ್ತು. ಆದರೆ ಇದರ ಬಗ್ಗೆ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಹಾಗಿದ್ದರೆ ಎಲ್ಲಿದ್ದಾರೆ ಅರುಣ್ ಸಾಗರ್ ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.