IPL 2024 : ಐಪಿಎಲ್ ನಲ್ಲಿ ಅತಿ ಹೆಚ್ಚು ಸೋಲು ಕಂಡ ತಂಡ ಯಾವುದು ಗೊತ್ತೇ?

137

ಕ್ರಿಕೆಟ್ ಅಭಿಮಾನಿಗಳಿಗೆ ಐಪಿಎಲ್ (IPL) ಹಬ್ಬ ಇದ್ದಾಗಲೇ ಶುರುವಾಗಿದ್ದು, ಎಲ್ಲರೂ ತಮ್ಮ ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸುವ ಎಲ್ಲಾ ಉತ್ಸುಕತೆ ಎದ್ದು ಕಾಣುತ್ತದೆ. ಸೋಶಿಯಲ್ ಮೀಡಿಯಾ ಇದೀಗಾಗಲೇ ಫ್ಯಾನ್ ವಾ-ರ್ ಶುರುವಾಗಿದ್ದು ನಾವು ಕೂಡ ಗಮನಿಸಬಹುದು. ಐಪಿಎಲ್ (IPL) ನಲ್ಲಿ ಅತಿ ಹೆಚ್ಚು ಯಶಸ್ಸು ಕಂಡ ತಂಡಗಳ ಬೇಗ ಎಲ್ಲರಿಗೂ ಗೊತ್ತು. ಐಪಿಎಲ್ (IPL) ಯಶಸ್ಸಿನ ವಿಚಾರ ಬಂದಾಗ ಮುಂಬೈ ಇಂಡಿಯನ್ಸ್ Mumbai Indians) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಗಳ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಅತಿ ಹೆಚ್ಚು ಅಭಿಮಾನಿಗಳು ಇರುವ ತಂಡಗಳು ಕೂಡ ಇದೆ. ಫ್ಯಾನ್ ಬೆಸ್ ವಿಚಾರ ಬಂದಾಗ ಈ ತಂಡಗಳ ಜೊತೆಗೆ RCB (Royal Challengers Bengaluru) ಕೂಡ ಸೇರಿಕೊಳ್ಳುತ್ತದೆ.

ಎಲ್ಲರಿಗೂ ಹೆಚ್ಚಿನ ಯಶಸ್ಸು ಹೊಂದಿದ ತಂಡಗಳ ಬಗ್ಗೆ ಸದಾ ನೆನಪು ಇರುತ್ತದೆ. ಆದರೆ ಇಷ್ಟರ ವರೆಗೆ ಇಪ್ಲಿತಿಹಸದಲ್ಲಿ ಅತಿ ಹೆಚ್ಚು ಸೋಲನ್ನು ಕಂದ ತಂಡಗಳು ಯಾವುದು ಎಂಬ ವಿಚಾರ ಯಾರಿಗೂ ಗೊತ್ತಿರಲಿಕ್ಕಿಲ್ಲ ಮತ್ತು ಅದರ ಬಗ್ಗೆ ಯಾರು ಕೂಡ ಯೋಚನೆ ಕೂಡ ಮಾಡಿರಲಿಕ್ಕಿಲ್ಲ. ಆದರೆ ಇಂದು ನಾವು ಅಂತಹ ತಂಡಗಳ ಬಗ್ಗೆ ಒಂದು ವಿಶೇಷ ವರದಿ ನಿಮ್ಮ ಮುಂದೆ ತಂದಿದ್ದೇವೆ. ಹೌದು ಐಪಿಎಲ್ (IPL) ಶುರುವಾಗಿ ಈಗ 18 ವರ್ಷ ಕಳೆದಿದೆ . ಇಂತಹ ಸಂದರ್ಭದಲ್ಲಿ ಇಷ್ಟರ ವರೆಗೆ ಅತಿ ಹೆಚ್ಚು ಸೋಲು ಕಂಡ ಫ್ರಾಂಚೈಸಿ ಯಾವುದು ಎಂಬ ಕುತೂಹಲಕ್ಕೆ ನಾವು ಇಂದು ತೆರೆ ಎಳೆಯಲಿದ್ದೇವೆ.

2008 ರಿಂದ 2023 ರ ವರೆಗಿನ ದಾಖಲೆ ತೆಗೆದಾಗ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸೋಲು ಕಂಡ ಫ್ರಾಂಚೈಸಿ ಯಲ್ಲಿ ಡೆಲ್ಲಿ ಕ್ಯಾಪಿಟಲ್ (Delhi Capitals)ಮೊದಲ ಸ್ಥಾನದಲ್ಲಿ ಬರುತ್ತದೆ. ತಾನು ಆಡಿದ 238 ಪಂದ್ಯಗಳ ಪೈಕಿ 127 ಪಂದ್ಯಗಳನ್ನು ಸೋತಿದೆ. ಹಾಗೆ ಎರಡನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ಇದ್ದು ತಾನು ಆಡಿದ 234 ಪಂದ್ಯಗಳ ಪೈಕಿ 124 ಪಂದ್ಯಗಳನ್ನು ಸೋತಿದೆ. ಮೂರನೆಯ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಇದ್ದು ತಾನು ಆಡಿದ 241 ಪಂದ್ಯಗಳ ಪೈಕಿ 120 ಪಂದ್ಯ ಸೋತಿದೆ. which team has lost the most matches in the ipl?

Leave A Reply

Your email address will not be published.