IPL 2024 : ಐಪಿಎಲ್ ಇತಿಹಾಸದಲ್ಲಿ ನಿಧಾನಗತಿಯ ಶತಕ ಸಿಡಿಸಿದ ವಿರಾಟ್ ಕೊಹ್ಲಿಗೆ ಅಭಿನಂದನೆಗಳು, ಆರ್‌ಸಿಬಿ ಬ್ಯಾಟಿಂಗ್‌ನ್ನು ಟೀಕಿಸಿದ ಪಾಕಿಸ್ತಾನದ ಮಾಜಿ ಆಟಗಾರ.

63

ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024)ಅತ್ಯಂತ ಯಶಸ್ವಿ ಯಾಗಿ ಮುನ್ನುಗುತ್ತಾ ಇದೆ. ಹೀಗೆ ಆಗುತ್ತಿರುವ ಪಂದ್ಯಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಐದನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಶತಕವನ್ನು ಬಾರಿಸಿದರು. ಈ ಶತಕವನ್ನು ಇಡೀ ಕ್ರಿಕೆಟ್ ಅಭಿಮಾನಿಗಳು ಕೊಂಡಾಡಿದರು. ಅದರಲ್ಲೂ ಅರ್ಸಿಬಿ ಫ್ಯಾನ್ಸ್ ಮತ್ತು ಕೊಹ್ಲಿ ಅಭಿಮಾನಿಗಳಂತೂ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ಆದರೆ ಇದೀಗ ಅವರ ಶತಕ ಮಾತ್ರ ಟೀಕೆಗೆ ಗುರಿಯಾಗಿದೆ. ಪಾಕಿಸ್ತಾನದ ಮಾಜಿ ವೇಗದ ಬೌಲರ್ ಜುನೈದ್ ಖಾನ್ ಕೊಹ್ಲಿ ಅವರ ವರ್ತನೆಯನ್ನು ಟೀಕಿಸಿದ್ದಾರೆ. ಅವರು X ನಲ್ಲಿ ವ್ಯಂಗ್ಯಾತ್ಮಕ ಕಾಮೆಂಟ್ ಅನ್ನು ಪೋಸ್ಟ್ ಮಾಡಿದ್ದಾರೆ. “ಐಪಿಎಲ್ ಇತಿಹಾಸದಲ್ಲಿ ಅತ್ಯಂತ ನಿಧಾನವಾದ ಶತಕಕ್ಕೆ ಅಭಿನಂದನೆಗಳು ವಿರಾಟ್ ಕೊಹ್ಲಿ” ಎಂದು ಅವರು ಬರೆದಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚಿನ ಬಾಲ್ ಬಳಸಿ ಶತಕ ಸಿಡಿದ ದಾಖಲೆ ಮನೀಶ್ ಪಾಂಡೆ (Manish Pandey) ಹೆಸರಿಗೆ ಇತ್ತು . ಅವರು 2009 ರ ಆವೃತ್ತಿ ಐಪಿಎಲ್ ನಲ್ಲಿ 67 ಎಸೆತಗಳನ್ನು ತೆಗೆದುಕೊಂಡು ಡೆಕ್ಕನ್ ಚಾರ್ಜರ್ಸ್ ಪರ ಶತಕ ಸಿಡಸಿದ್ದರು. ಇದೀಗ ಐಪಿಎಲ್ (IPL) ಇತಿಹಾಸದಲ್ಲಿ ನಿಧಾನಗತಿಯ ಶತಕದ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದರು. ಮನೀಷ್ ಪಾಂಡೆ 2009ರಲ್ಲಿ ಡೆಕ್ಕನ್ ಚಾರ್ಜರ್ಸ್ (Deccan Chargers) ವಿರುದ್ಧ ಶತಕ ಬಾರಿಸಿದಾಗಲೂ ಅಷ್ಟೇ ಎಸೆತಗಳನ್ನು ಎದುರಿಸಿದ ಕೊಹ್ಲಿ ಅವರು ಮನೀಶ್ ಪಾಂಡೆ ಹೆಸರಿಗಿದ್ದ ದಾಖಲೆ ಸಮ ಮಾಡಿದರು.

ಇದೀಗ ಪಾಕಿಸ್ತಾನ್ (Pakistan) ಮಾಜಿ ಕ್ರಿಕೆಟಿಗ ವಿರುದ್ಧ , X ನಲ್ಲಿ ಜನರು ಮುಗಿ ಬಿದ್ದಿದ್ದಾರೆ. ಕೊಹ್ಲಿ ಪರವಾಗಿ ಜನರು ಸಪೋರ್ಟ್ ತೋರುತ್ತಾರೆ, ಪಾಕಿಸ್ತಾನ್ ಮತ್ತು ಪಾಕಿಸ್ತಾನ ಕ್ರಿಕೆಟ್ ಅನ್ನು ಜನರು ಗೇಲಿ ಮಾಡುತ್ತಿದ್ದಾರೆ. ಐಪಿಎಲ್ ನಲ್ಲಿ ಆಡಲು ಯೋಗ್ಯರು ಇಲ್ಲದವರು ಕೊಹ್ಲಿ ಅಂತ ದಿಗ್ಗಜ ಕ್ರಿಕೆಟಿಗನ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲ ಎಂದು ಒಬ್ಬರು X ಯೂಸರ್ ಬರೆದುಕೊಂಡಿದ್ದಾರೆ. ಹೀಗೆ ಕ್ರಿಕೆಟ್ ಅಭಿಮಾನಿಗಳ ನಡುವೆ ಕ್ರೀಡಾಂಗಣದ ಹೊರಗೂ ಕೂಡ ಹವಾ ಜೋರಾಗಿಯೇ ಬೀಸುತ್ತಿದೆ.

Leave A Reply

Your email address will not be published.