ಅಂದು ಮೆಕ್ಯಾನಿಕ್ ಆಗಿ ಮೂವಿ ನೋಡಲು ಹಣವಿರಲಿಲ್ಲ. ಇಂದು ಜುರಾಸಿಕ್ ಪಾರ್ಕ್ ಚಿತ್ರದಲ್ಲಿ ನಟನೆ ಮಾಡಿದ್ದಾರೆ ಭಾರತೀಯ ನಟ?
ಜೀವನವೇ ಹಾಗೆ ನೋಡಿ ಎಣಿಸಿದ್ದು ಒಂದೂ ಸಿಗುವುದಿಲ್ಲ, ಆಗ ಮನಸಿಗೆ ತುಂಬಾ ಬೇಸರ ಆಗುತ್ತದೆ . ಜೀವನದಲ್ಲಿ ಕಷ್ಟಗಳು ಬಂದೆ ಬರುತ್ತದೆ, ಆದರೆ ನಾವು ಯಾವ ರೀತಿಯಲ್ಲಿ ಎಲ್ಲವನ್ನೂ ನಿಭಾಯಿಸುತ್ತೇವೆ ಅದರ ಮೇಲೆ ನಮ್ಮ ಜೀವನ ನಿಲ್ಲುತ್ತದೆ. ನಾವು ಇಂದು ತಿಳಿಯಲು ಹೊರಟ ಕಥೆ ಅಂತಹದೇ. ಇವರು ಜೀವನದಲ್ಲಿ ಕಷ್ಟಗಳನ್ನು ನೋಡಿಯೇ ಬೆಳೆದವರು, ಆದರೆ ಜೀವನದಲ್ಲಿ ಸೋಲೊಪ್ಕೊಂಡ ಜನವೇ ಅಲ್ಲ. ಎಲ್ಲವನ್ನೂ ಸಮರ್ಥವಾಗಿ ಎದುರಿಸಿದವರು. ಬನ್ನಿ ತಿಳಿಯೋಣ ಇವರ ಬಗ್ಗೆ.
ಅಂದು ಕೆಲಸ ಹುಡುಕಿಕೊಂಡು ಮುಂಬೈ ಮಹಾನಗರಕ್ಕೆ ಬಂದಿದ್ದರು ಇವರು. ಆ ಸಮಯಕ್ಕೆ ಇವರು ಅಲ್ಲಿ ಎಸಿ ಮ್ಯಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಅದರಲ್ಲೇ ಅಲ್ಪ ಸ್ವಲ್ಪ ದುಡಿದು ಜೀವನ ಹೇಗೋ ಸಾಗಿಸುತ್ತಿದ್ದರು. ಸಿನೆಮಾದಲ್ಲಿ ತುಂಬಾ ಆಸಕ್ತಿ ಇದ್ದ ವ್ಯಕ್ತಿ ಇವರು. ಅಂದು ಅದೇ ಸಮಯಕ್ಕೆ ಹಾಲಿವುಡ್ ನ ಜುರಾಸಿಕ್ ಪಾರ್ಕ್ ಸಿನೆಮಾ ತೆರೆ ಕಂಡಿತ್ತು, ಆದರೆ ಇವರಿಗೆ ಹೋಗಿ ನೋಡಬೇಕು ಎಂದು ಮನಸಿದ್ದರೂ ಕಿಸೆಯಲ್ಲಿ ಕಾಸು ಇರಲಿಲ್ಲ. ಆದರೆ ಮನಸ್ಸು ಗಟ್ಟಿ ಇತ್ತು . ಹೀಗೆ ಕೆಲಸ ಮಾಡುತ್ತಿದ್ದಾಗ ಬಾಲಿವುಡ್ ನಲ್ಲಿ ಸಣ್ಣ ಪುಟ್ಟ ಅವಕಾಶ ದೊರಕಿತು. “ರೋಗಿ ಬಯಸಿದ್ದು ಹಾಲು, ವೈದ್ಯ ಹೇಳಿದ್ದು ಹಾಲು” ಎಂಬಂತೆ ಸಿಕ್ಕಿದ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡು ಬಹುಬೇಡಿಕೆಯ ನಟನಾಗಿ ಹೊರ ಹೊಮ್ಮಿದ್ದರು.
ಎಷ್ಟರ ಮಟ್ಟಿಗೆ ಬೆಳೆದು ನಿಂತರು ಎಂದರೆ ಅಂದು ಜುರಾಸಿಕ್ ಪಾರ್ಕ್ ಸಿನೆಮಾ ನೋಡಲು ಹಣ ಇಲ್ಲದೆ ಇದ್ದರೂ ಇಂದು ಅದೇ ಸಿನೆಮಾದಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿತು, ಆ ಸಿನೆಮಾದಲ್ಲಿ ನಟಿಸಿ ಹಾಲಿವುಡ್ ನಲ್ಲಿ ಕೂಡ ಸೈ ಎನಿಸಿಕೊಂಡರು ಇವರು. ಈಗ ನಿಮಗೆ ಕುತೂಹಲ ಹೆಚ್ಚಾಗಿರಬಹುದು ಯಾರು ಎಂದು, ಅವರು ಮತ್ಯಾರು ಅಲ್ಲ ಭಾರತೀಯ ಸಿನೆಮಾ ರಂಗದ ದಿಗ್ಗಜ ಮೇರು ನಟ ಇರ್ಫಾನ್ ಖಾನ್. ಹೌದು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಈ ಯಶೋಗಾಥೆ ಮತ್ತಷ್ಟು ಜನರಿಗೆ ಸ್ಫೂರ್ತಿ ಆಗಬೇಕು ಎಂಬುವುದು ನಮ್ಮ ಆಶಯ.