ಅಗ್ಗದ ತೆಂಗಿನ ಸಿಪ್ಪೆಯನ್ನು ವಿನೂತನವಾಗಿ ಬಳಸಿ ವಾರ್ಷಿಕ 70 ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಇವರ ಬಿಸಿನೆಸ್ ಗುಟ್ಟೇನು?

219

ತೆಂಗಿನ ಸಿಪ್ಪೆಯಿಂದ ತೆಗೆದ ಕೊಕೊ ಪಿಟ್ ಅನ್ನು ಬೆಳೆಯುವ ಸಸಿಗಳಿಗೆ ಮಣ್ಣಿನ ಬದಲಾಗಿ ಬಳಸಬಹುದು ಎನ್ನುವ ವಿಷಯ ನಿಮಗೆ ತಿಳಿದಿತ್ತೇ? ಹೌದು ಇದು ಮಣ್ಣಿನ ಬದಲಾಗಿ ಬಳಸಬಹುದು ಹಾಗೇನೇ ಇದು ಮಣ್ಣಿನ ಫಲವತ್ತತೆಯನ್ನು ಕೂಡ ಹೆಚ್ಚಿಸುತ್ತದೆ.

90 ರ ದಶಕದ ವರೆಗೆ ಈ ಉಪ ಉತ್ಪನ್ನದ ಸಾಮರ್ಥ್ಯ ಇಂದಿಗೂ ಬಳಸಲಾಗಲಿಲ್ಲ. ಇದನ್ನು ಮಾಲಿನ್ಯಕ್ಕೆ ಕಾರಣವಾಗುತ್ತದೆ ಎನ್ನುವ ಕಾರಣಕ್ಕೆ ಇದರ ವಿಲೇವಾರಿ ಮಾಡುತ್ತಿದ್ದರು. ಈ ಕೊಕೊ ಪಿಟ್ ಅನ್ನು ಮೊದಲು ಬಳಸಿದವರು ಡಚ್ಚರು. ಇದೀಗ ಚೆನ್ನೈ ನ ವ್ಯಕ್ತಿಯೊಬ್ಬ ಇದನ್ನು ಬಳಸಿಕೊಂಡು ಕೋಟ್ಯಂತರ ವ್ಯವಹಾರ ಮಾಡುತ್ತಿದ್ದಾರೆ.

ಗ್ಲೋಬಲ್ ಗ್ರೀನ್ ಕಾಯರ್ ಎನ್ನುವ ಸಂಸ್ಥೆಯ ಸಂಸ್ಥಾಪಕ ಅನೀಸ್ ಅಹ್ಮದ್ ಈ ಧೂಳಿನಂತೆ ಇರುವ ತೆಂಗಿನ ಸಿಪ್ಪೆಯಿಂದ ಚಿನ್ನದ ಬೆಳೆ ಬೆಳೆಯುತ್ತಿದ್ದಾರೆ. ವಾರ್ಷಿಕವಾಗಿ 75 ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದ್ದಾರೆ. ಇವರು ಪ್ರಪಂಚದಾದ್ಯಂತ ಈ ಕಾಯಿರ್ ಪಿಟ್ ಅನ್ನು ರಫ್ತು ಮಾಡುತ್ತಿದ್ದಾರೆ.

ಗ್ಲೋಬಲ್ ಗ್ರೀನ್ ಕಾಯರ್ ಕೊಕೊ ಪಿಟ್ ಅನ್ನು ರಫ್ತು ಮಾತ್ರ ಮಾಡುವುದಲ್ಲದೆ ಅದರಲ್ಲಿ ಪೋಷಕಾಂಶಗಳನ್ನು ಬೆರೆಸುವ ಮೂಲಕ ತನ್ನ ಉತ್ಪನ್ನಗಳನ್ನು ಕಸ್ಟಮೈಸ್ ಮಾಡುತ್ತದೆ. ಕಂಪೆನಿಯು ಮೊದಲು ದೂಳು, ಮಣ್ಣು ಎಲೆ ನಾರುಗಳನ್ನು ಹಾಗು ಇತರ ತ್ಯಾಜ್ಯಗಳನ್ನು ಬೇರ್ಪಡಿಸಿ ಸ್ವಚ್ಛಗೊಳಿಸುತ್ತದೆ. ನಂತರ ಇದನ್ನು ನೀರಿನಲ್ಲಿ ತೊಳೆದು ರಫ್ತು ಮಾಡಲು ಯೋಗ್ಯವಾಗುವಂತೆ ಬ್ಲಾಕ್ ಗಳು, ಡಿಸ್ಕ್ ಹಾಗು ಬ್ಯಾಗ್ ಗಳಾಗಿ ಪರಿವರ್ತಿಸಲಾಗುತ್ತದೆ.

Leave A Reply

Your email address will not be published.