ಅಪ್ಪು ನಂತರ ಇದೀಗ ಕನ್ನಡದ ಸ್ಟಾರ್ ನಟ ಮುನ್ನಡೆಸಲಿದ್ದಾರೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ. ಯಾರಿವರು?

241

ನಮ್ಮವರು ಎಂಬ ಪ್ರೀತಿಗಿಂತ ನಮ್ಮವರು ಅಗಲಿದ ನೋವು ನಮಗೆ ಸದಾ ಕಾಡುತ್ತಾ ಇರುತ್ತದೆ. ಜೀವನದಲ್ಲಿ ಸದಾ ಹತ್ತಿರ ಇದ್ದ ಜೊತೆ ಜೊತೆಯಾಗಿ ಇದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕಣ್ಮರೆ ಆದಾಗ ನಮಗೆ ಆಗುವ ನೋವು ನುಂಗಲು ಸಹ ಸಾಧ್ಯ ಇಲ್ಲ. ಅಂತಹುದೇ ನೋವಾಗಿದ್ದು ಕನ್ನಡ ಸಿನಿ ಅಭಿಮಾನಿಗಳಿಗೆ. ಹೌದು ಅಪ್ಪು ನಮ್ಮನ್ನಲ್ಲೆ ಆಗಲಿ ಹಲವಾರು ತಿಂಗಳು ಕಳೆದು ಹೋಯಿತು. ಆದರೆ ಇದೀಗ ಅಪ್ಪು ನಡೆಸಿ ಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನ ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಇರುವಾಗಲೇ.

ಅದನ್ನು ಕನ್ನಡದ ಖ್ಯಾತ ನಟ ಮುನ್ನಡೆಸುತ್ತಾರೆ ಎಂಬ ಸುದ್ದಿ ಹರಿದು ಬಂದಿದೆ ಯಾರವರು? ಹೌದು ಅಪ್ಪು ನಂತರ ಇದೀಗ ಹಲವಾರು ಹೆಸರುಗಳು ಕೇಳಿ ಬರುತ್ತಿದ್ದು, ಇದೀಗಾಗಲೇ ಕನ್ನಡದ ಎರಡು ದೊಡ್ಡ ರಿಯಾಲಿಟಿ ಶೋ ನಡೆಸಿ ಕೊಡುವ ರಮೇಶ್ ಅರವಿಂದ್ ಮತ್ತು ಕಿಚ್ಚ ಸುದೀಪ್ ಅವರ ಹೆಸರು ಕೇಳಿ ಬರುತ್ತಿದೆ. ಹೌದು ಇವರಿಬ್ಬರಲ್ಲಿ ಯಾರಾದರೂ ಒಬ್ಬ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮುಂದುವರೆಸುತ್ತಾರೆ ಎಂಬ ಸುದ್ದಿ ಬಂದಿದೆ. ಮೂಲಗಳ ಪ್ರಕಾರ ಸುದೀಪ್ ಈ ಲಿಸ್ಟ್ ನಲ್ಲಿ ಫೇವರಿಟ್ ಆಗಿದ್ದು ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ ಎಂಬ ಸುದ್ದಿ ಬರುತ್ತಿದೆ.

ರಮೇಶ್ ಅರವಿಂದ್ ಕೂಡ ಒಬ್ಬ ಒಳ್ಳೆಯ ಕಾರ್ಯಕ್ರಮ ನಿರೂಪಕರಾಗಿದ್ದು, ಅವರು ನಡೆಸಿ ಕೊಡುವ ಕಾರ್ಯಕ್ರಮ ಕೂಡ ಅಷ್ಟೇ ಹಿಟ್ ಆಗಿದೆ. ಹೀಗಿರುವಾಗ ಕನ್ನಡದ ಕೋಟ್ಯಾಧಿಪತಿ ಯ ಸಾರಥ್ಯ ಯಾರು ಹಿಡಿಯುತ್ತಾರೆ ಎಂದು ಕಾದು ನೋಡಬೇಕು. ಅಪ್ಪುವಿನ ಸ್ಥಾನ ಯಾರು ತುಂಬಲು ಸಾಧ್ಯವಿಲ್ಲ, ಆದರೂ ಅವರ ಬದಲಿಗೆ ಬೇರೆ ನಟರು ಉತ್ತಮ ಕಾರ್ಯಕ್ರಮ ನಡೆಸಿಕೊಡಲಿ ಎಂದು ಆಶಿಸುವ.

Leave A Reply

Your email address will not be published.