ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಜೊತೆ ಜೊತೆಯಲ್ಲಿ ನಟಿ ಮೇಘ ಶೆಟ್ಟಿ. ಅಷ್ಟಕ್ಕೂ ಆ ಸುದ್ದಿ ಏನು?
ಸಾಮಾಜಿಕ ಜಾಲತಾಣದಲ್ಲಿ ಮೇಘ ಶೆಟ್ಟಿ ಅಂದರೆ ಕರ್ನಾಟಕದಲ್ಲಿ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ನಟಿ ಅಣು ಸಿರಿಮನೆ ಪಾತ್ರದಾರಿ ಅವರು ಧಾರಾವಾಹಿ ಅಲ್ಲಿ ನಟನೆ ಬಿಡುತ್ತಿದ್ದಾರೆ ಎನ್ನುವ ಉಹಾ ಪೋಹಗಳು ಹರಿದಾಡುತ್ತಿದ್ದವು. ಕೆಲವರಂತೂ ಅವರ ಜಾಗಕ್ಕೆ ಬೇರೆ ನಟಿ ಯಾರಾಗಬಹುದು ಎಂದು ಕೂಡ ನಿರ್ಮಾಪಕರಿಗೆ ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದರು. ಇದೀಗ ಮೇಘ ಶೆಟ್ಟಿ ಅವರು ಖುದ್ದಾಗಿ ಬಂದು ಸ್ಪಷ್ಟನೆ ನೀಡಿದ್ದಾರೆ.
ಹೌದು ಮೇಘ ಶೆಟ್ಟಿ ಅವರು ಧಾರವಾಹಿ ಅಲ್ಲಿ ಮುಂದುವರೆಯಲಿದ್ದಾರೆ. ಹಾಗು ಧಾರಾವಾಹಿ ಕೊನೆ ತನಕ ಕೂಡ ಅಣು ಸಿರಿಮನೆಯಾಗಿ ಬರಲಿದ್ದಾರೆ ಎಂದು ಹೇಳಿದ್ದಾರೆ. ಅದೇ ಸಂಧರ್ಭದಲ್ಲಿ ಎಲ್ಲರಿಗು ಧನ್ಯವಾದ ಕೂಡ ಹೇಳಿದ್ದಾರೆ. ಗೊಂದಲಕ್ಕೀಡಾದ ವಿಕ್ಷರಲ್ಲೂ ಕ್ಷಮೆಯಾಚಿಸಿದ್ದಾರೆ ಅಣು ಸಿರಿಮನೆ ಪಾತ್ರದಾರಿ ಮೇಘ ಶೆಟ್ಟಿ. ಮುಂದೆ ಇಂತಹ ಮಾತುಗಳು ಕೇಳಿ ಬಂದರೆ ಅದನ್ನು ನಂಬಬೇಡಿ ಎಂದು ಹೇಳಿದ್ದಾರೆ. ಈ ಧಾರಾವಾಹಿ ಇಂದ ಸಾಕಷ್ಟು ಪಡೆದಿದ್ದೇನೆ, ಅದಕ್ಕೆ ನಾನು ಸದಾ ಚಿರಋಣಿ, ಅಭಿಮಾನಿಗಳ ಪ್ರೀತಿ ವಿಶ್ವಾಸ ಹೀಗೆ ಮುಂದುವರೆಯಲಿ ಎಂದು ಅವರು ಕೋರಿದ್ದಾರೆ.
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಾಗಲೇ ಜೀ ಕನ್ನಡ ವಾಹಿನಿ ಸ್ಪಷ್ಟನೆ ನೀಡಿತ್ತು. ಇದೀಗ ಮೇಘ ಶೆಟ್ಟಿ ಅವರೇ ಬಂದು ಸ್ಪಷ್ಟನೆ ನೀಡಿದ್ದು ಎಲ್ಲ ಉಹಾ ಪೋಹಗಳಿಗೆ ತೆರೆ ಬಿದ್ದಿದೆ. ವಿಭಿನ್ನ ಕತೆಯೊಂದಿಗೆ ಶುರುವಾದ ಈ ಧಾರಾವಾಹಿ ಸ್ವಲ್ಪ ಸಮಯದಲ್ಲೇ ಎಲ್ಲರೆ ಮನೆ ಮಾತಾಗಿತ್ತು. ಹಾಗೆ ಇಂದಿಗೂ ಅದೇ ಜನಪ್ರಿಯತೆ ಇಂದಿಗೆ ಮುಂದುವರೆಯುತ್ತಿದೆ. ಆರ್ಯವರ್ಧನ್ ಪಾತ್ರ ಮಾಡುತ್ತಿರುವ ಅನಿರುದ್ದ್ ಅವರು ಕೂಡ ತಮ್ಮ ನಟನೆ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದಾರೆ.