ಅಮಿತಾಬ್ ಬಚ್ಚನ್ ರವರ ಬಾಡಿಗೆ ಮನೆಯಲ್ಲಿರುವ ಸ್ಟಾರ್ ನಟಿ. ತಿಂಗಳ ಬಾಡಿಗೆ ಎಷ್ಟು ಗೊತ್ತೆ?

500

ಅಮಿತಾಬ್ ಬಚ್ಚನ್ ಬಾಲಿವುಡ್ ನ ಸರ್ವಶ್ರೇಷ್ಠ ನಟರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ಕರ್ನಾಟಕದ ಮಗಳಾದ ವಿಶ್ವ ಸುಂದರಿ ಐಶ್ವರ್ಯ ರಾಯ್ ಬಚ್ಚನ್ ಕುಟುಂಬಕ್ಕೆ ಸೊಸೆಯಾಗಿ ಹೋಗಿದ್ದಾರೆ. ಬಹುದೊಡ್ಡ ತಾರೆಯಾಗಿರುವ ಅಮಿತಾಬ್ ಬಚ್ಚನ್ ಮುಂಬಯಿ ಹಾಗು ದೇಶದ ಹಲವೆಡೆ ಅಪಾರ್ಟ್ಮೆಂಟ್ ಗಳನ್ನು ಹೊಂದಿರಬಹುದು. ಮನೆಗಳನ್ನು ತಮ್ಮ ಪರಿಚಯದವರಿಗೆ ಬಾಡಿಗೆಗೆ ನೀಡುವುದು ಹೊಸತೇನಲ್ಲ. ಅಮಿತಾಬ್ ರಿಂದ ಹಿಡಿದು ಸೈಪ್ ಅಲಿ ಖಾನ್ ವರೆಗೂ ಇಂತಹ ವ್ಯವಹಾರಗಳನ್ನು ಮಾಡಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಅಮಿತಾಬ್ ಬಚ್ಚನ್ ಅವರು ತಮ್ಮ ಒಂದು‌ ಅಪಾರ್ಟ್ಮೆಂಟ್ ಬ್ಯಾಂಕ್ ಗೆ ಬಾಡಿಗೆಗೆ ನೀಡುತ್ತಾರೆ ಎನ್ನುವ ಸುದ್ದಿ ಹರಿದಾಡುತಿತ್ತು. ಈಗ ಈ ಅಪಾರ್ಟ್ಮೆಂಟ್ ಬಾಲಿವುಡ್ ಬೆಡಗಿ ಕೃತಿ ಸನೂನ್ ಅವರಿಗೆ ಎರಡು ವರ್ಷಗಳವರೆಗೆ ಲೀಸ್ ಗೆ ನೀಡಿದ್ದಾರೆ‌‌‌ ಎಂದು ವರದಿ ಪ್ರಕಟವಾಗುತ್ತಿದೆ. ಇದಕ್ಕೆ ಇವರು‌ ಅತ್ಯಂತ ದುಬಾರಿ ಸೆಕ್ಯುರಿಟಿ ಹಣ ಕೂಡಾ ಅಂದರೆ ಅಡ್ವಾನ್ಸ್ ಹಣ ಕೂಡಾ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರತಿ ತಿಂಗಳ ಬಾಡಿಗೆ ಹಣ ಎಷ್ಟು ಗೊತ್ತೆ? ಇಲ್ಲಿದೆ ಅದರ ಮಾಹಿತಿ.

ಮನಿಕಂಟ್ರೋಲ್.ಕಾಮ್ ವರದಿ ಪ್ರಕಾರ ಅಮಿತಾಬ ಬಚ್ಚನ್ ತಮ್ಮ ಮನೆಯನ್ನು ಕೃತಿ ಸನೂನ್ ಅವರಿಗೆ ಎರಡು ವರ್ಷಗಳ‌ ಲೀಸ್ ಅಲ್ಲಿ ನೀಡಿದ್ದಾರೆ. ಇದಕ್ಕಾಗಿ ಅವರು ಸುಮಾರು ೬೦ ಲಕ್ಷಗಳಷ್ಟು ಸೆಕ್ಯೂರಿಟಿ ಡೆಪಾಸಿಟ್ ಕೂಡಾ ಮಾಡಿದ್ದಾರಂತೆ. ಅಲ್ಲದೇ ಇದರ ತಿಂಗಳ ಬಾಡಿಗೆ ಸುಮಾರು ೧೦ ಲಕ್ಷದಷ್ಟು ಬಾಡಿಗೆ ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ೧೬ ಅಕ್ಟೋಬರ್ ೨೦೨೧ ರಿಂದ ೧೫ ಅಕ್ಟೋಬರ್ ೨೦೨೩ ರ ವರೆಗೆ ಕೃತಿ ಸನೂನ್ ಬಳಿ ಇರಲಿದೆ ಬಚ್ಚನ್ ರವರ‌ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್.

Leave A Reply

Your email address will not be published.