ಆರಾಮವಾಗಿ ರುಚಿಯಾದ ಬಿರಿಯಾನಿ ಮಾಡಿ. ಸಿಂಗಲ್ಸ್ ಜಾಸ್ತಿ ಕಷ್ಟಪಡೋದೇ ಬೇಡ ಇದನ್ನು ಮಾಡಲು. ಹೇಗೆ ಮಾಡೋದು ಅಂತ ನೋಡಿ.
ಸಿಂಗಲ್ ಆಗಿ ಇರೋರು ಬೇರೆ ಊರಿಂದ ಬ್ಯಾಂಗಲೋರ್ ಅಥವಾ ಬೇರೆ ಕಡೆಗೆ ಕೆಲಸಕ್ಕೆ ಅಂತ ಹೋಗೋರಿಗೆ ಬೆಳಿಗ್ಗೆ ತಿಂಡಿ ಮಾಡೋದೇ ದೊಡ್ಡ ಸಮಸ್ಯೆ. ಹೇಗೆ ಮಾಡೋದು ಅಂತ ಗೊತ್ತಿಲ್ಲ, ಅದೇ ರೀತಿ ಸಮಯ ಎಷ್ಟು ಬೇಕು ಅನ್ನೋದು ಕೂಡ ಗೊತ್ತಿಲ. ಆದರೆ ಇಂದು ನಾವು ನಿಮಗೆ ಈ ಸಿಂಪಲ್ ಆಗಿ ಕಡಿಮೆ ಸಮಯದಲ್ಲಿ ಬಿರಿಯಾನಿ ಹೇಗೆ ಮಾಡೋದು ಅಂತ ಹೇಳುತ್ತೇವೆ. ಇದಕ್ಕಾಗಿ ನೀವು ಹೆಚ್ಚಿನದು ಏನು ಮಾಡೋದು ಬೇಕಾಗಿಲ್ಲ.
ಹಿಂದಿನ ದಿನ ಉಳಿದಿರೋ ಅನ್ನದಲ್ಲೂ ಕೂಡ ಮಾಡಬಹುದು ಈ ಬಿರಿಯಾನಿ. ಬೇಕಾಗಿರುವ ಐಟಂ ಗಳೇನು? ಅಣ್ಣ ಒಂದು ಕಪ್, ಬೆಳ್ಳುಳ್ಳಿ ಒಂದು ೫-೬, ಶುಂಠಿ ಸ್ವಲ್ಪ, ಕತ್ತರಿಸಿದ ನೀರುಳ್ಳಿ, ಟೊಮೇಟೊ ಒಂದು, ಬಿರಿಯಾನಿ ಮಸಾಲಾ, ಎಣ್ಣೆ ಒಂದು ಚಮಚ ಹಾಗು ತುಪ್ಪ ಒಂದು ಚಮಚ. ಕರಿಬೇವು ಸ್ವಲ್ಪ ಹಾಗು ಹಸಿಮೆಣಸು ೨ ಆಮೇಲೆ ಉಪ್ಪು ನಿಮಗೆ ಎಷ್ಟು ರುಚಿಗೆ ಬೇಕು ಅಷ್ಟು. ಬೇಕಿದ್ದರೆ ಕೊತ್ತಂಬರಿ ಸೊಪ್ಪು.