ಇಡೀ ದೇಶವೇ ಬ್ರಹ್ಮಾಸ್ತ್ರ ನೋಡಲ್ಲ ಎನ್ನುತ್ತಿರುವಾಗ ರಾಜಮೌಳಿ ಪ್ರಮೋಷನ್ ಮಾಡುತ್ತಿರುವುದು ಯಾಕೆ ಗೊತ್ತೆ?? ಹಿಂದಿರುವ ಅಸಲಿ ಕಾರಣವೇನು ಗೊತ್ತೇ??
ಪ್ಯಾನ್ ಇಂಡಿಯಾ ಇರಲಿ ಈಗ ಪ್ಯಾನ್ ವರ್ಲ್ಡ್ ನಿರ್ದೇಶಕ ಎಂದು ಗುರುತಿಸಿಕೊಂಡಿರುವವರು ನಿರ್ದೇಶಕ ರಾಜಮೌಳಿ ಅವರು. ಆರ್.ಆರ್.ಆರ್ ಸಿನಿಮಾವನ್ನು ಹಾಲಿವುಡ್ ನವರು ಮೆಚ್ಚಿಕೊಂಡಿರುವ ವಿಚಾರ ಗೊತ್ತೇ ಇದೆ. ಆರ್.ಆರ್.ಆರ್ ಬಳಿಕ ಮಹೇಶ್ ಬಾಬು ಅವರೊಡನೆ ಹೊಸ ಸಿನಿಮಾ ಘೋಷಿಸಿರುವ ರಾಜಮೌಳಿ ಅವರು ಈಗ ಹಿಂದಿಯ ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಬ್ರಹ್ಮಾಸ್ತ್ರ ಸಹ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ನಟಿಸಿರುವ ಈ ಸಿನಿಮಾವನ್ನು ರಾಜಮೌಳಿ ಅವರು ತೆಲುಗಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಬ್ರಹ್ಮಾಸ್ತ್ರ ಸಿನಿಮಾದ ತೆಲುಗು ಪ್ರಚಾರ ರಾಜಮೌಳಿ ಅವರ ಮೇಲುಸ್ತುವಾರಿಯಲ್ಲೇ ನಡೆಯುತ್ತಿದೆ. ಸಿನಿಮಾ ಪ್ರಚಾರ ಹೀಗೆಯೇ ಇರಬೇಕು ಎಂದು ಡಿಸೈನ್ ಸಹ ಮಾಡಿದ್ದಾರೆ, ಪ್ರಚಾರ ಹೆಚ್ಚಾಗಿ ನಡೆಯುತ್ತಿರುವುದು ಆಂಧ್ರ ಹಾಗೂ ತೆಲಂಗಾಣದಲ್ಲೇ. ಸ್ವತಃ ರಾಜಮೌಳಿ ಅವರು ಆಲಿಯಾ ಹಾಗೂ ರಣಬೀರ್ ಜೊತೆಗೆ ವೇದಿಕೆ ಹಂಚಿಕೊಂಡು, ಪ್ರಚಾರಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಆಲಿಯಾ ಹಾಗೂ ರಣಬೀರ್ ಅವರಿಗೆ ತೆಲುಗು ಡೈಲಾಗ್ ಗಳನ್ನು ಸಹ ಬರೆದುಕೊಟ್ಟಿದ್ದಾರೆ. ಬ್ರಹಾಸ್ತ್ರ ಸಿನಿಮಾ ಬಗ್ಗೆ ರಾಜಮೌಳಿ ಅವರು ತಲೆ ಕೆಡಿಸಿಕೊಂಡಿರುವುದಕ್ಕೆ ಒಂದು ಕಾರಣ ಸಹ ಇದೆ, ಅದೇನೆಂದರೆ ಈ ಸಿನಿಮಾವನ್ನು ತೆಲುಗಿನಲ್ಲಿ ಅವರೇ ಪ್ರೆಸೆಂಟ್ ಮಾಡುತ್ತಿದ್ದು, ವಿತರಣೆ ಹಕ್ಕನ್ನು ಪಡೆದಿದ್ದರೆ. ಸ್ನೇಹಿತ ಬಳ್ಳಾರಿ ಸಾಯಿ ಅವರೊಡನೆ ಸೇರಿ ಆಂಧ್ರ ಮತ್ತು ತೆಲಂಗಾಣದಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ತೆಲುಗು ಹಾಗೂ ಹಿಂದಿ ವಿತರಣೆಯನ್ನು ರಾಜಮೌಳಿ ಅವರೇ ಮಾಡುತ್ತಿದ್ದಾರೆ.
ಹಾಗಾಗಿ ಬ್ರಹ್ಮಾಸ್ತ್ರ ಸಿನಿಮಾವನ್ನು ಪ್ರೊಮೋಟ್ ಮಾಡುತ್ತಲೇ ಇದ್ದಾರೆ. ಇನ್ನು ನಟ ನಾಗಾರ್ಜುನ ಅವರು ಈ ಸಿನಿಮಾದಲ್ಲಿ ನಟಿಸಿರುವ ಕಾರಣ ಅವರು ಸಹ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ರಾಜಮೌಳಿ ಅವರ ಮಗ ಕಾರ್ತಿ ಸಹ ಇದರಲ್ಲಿ ಇನ್ಬಾಲ್ವ್ ಆಗಿದ್ದಾರೆ. ಕಾರ್ತಿ ಇವೆಂಟ್ ಮ್ಯಾನೇಜ್ಮೆಂಟ್ ಹಾಗೂ ಸಿನಿಮಾ ಯೂನಿಟ್ ಕಂಪನಿ ನಡೆಸುತ್ತಿದ್ದು, ಅವರ ಸಂಸ್ಥೆಯಿಂದಲೇ ಬ್ರಹ್ಮಾಸ್ತ್ರ ಪ್ರಚಾರಗಳು ನಡೆಯುತ್ತಿದೆ. ಹೈದರಾಬಾದ್ ನಲ್ಲಿ ದೊಡ್ಡ ಮಟ್ಟದ ಪ್ರೀ ರಿಲೀಸ್ ಇವೆಂಟ್ ಸಹ ಹಮ್ಮಿಕೊಳ್ಳಲಾಗಿತ್ತು, ಆದರೆ ಕೊನೆಯ ಕ್ಷಣದಲ್ಲಿ ನಿಂತು ಹೋಯಿತು. ಒಟ್ಟಿನಲ್ಲಿ ಬ್ರಹ್ಮಾಸ್ತ್ರ ಸಿನಿಮಾಗೆ ಒಳ್ಳೆಯ ರೀತಿಯಲ್ಲಿ ದೊಡ್ಡ ಸಪೋರ್ಟ್ ಸಿಗುತ್ತಿದೆ, ಸೆಪ್ಟೆಂಬರ್ 9ರಂದು ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.