ಎಲ್ಲರೂ ಇಷ್ಟ ಪಡುವ “Teddy bear” ಆ ಹೆಸರು ಬಂದಿದ್ದೆ ಒಂದು ರೋಚಕ ಕಥೆ? ಬನ್ನಿ ತಿಳಿಯೋಣ
Teddy bear ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ , ಅತೀ ಹೆಚ್ಚು ಜನರು ಇಷ್ಟ ಪಡುವ ಗೊಂಬೆಯ ಆಟಿಕೆ ಒಂದಿದ್ದರೆ ಅದು Teddy bear. ನೋಡಲು ಬಹಳ ಮುದ್ದು ಮುದ್ದಾಗಿ ಕಾಣುವ ಈ ಗೊಂಬೆಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆ ಇದೆ. ಹೆಣ್ಣು ಮಕ್ಕಳಂತೂ ಈ Teddy bear ಗೆ ಫಿದಾ ಆಗಿದ್ದಾರೆ. ಹೆಚ್ಚಿನ ಹೆಣ್ಣು ಮಕ್ಕಳಿಗೆ ಇದನ್ನೇ ಉಡುಗೊರೆ ಆಗಿ ನೀಡುತ್ತಾರೆ. ಹಾಗಾದರೆ ಇದನ್ನು Teddy bear ಎಂದು ಯಾಕೆ ಕರೆಯುತ್ತಾರೆ ? ಹೌದು ನಿಮಗೆ ಈ ಪ್ರಶ್ನೆ ವಿಚಿತ್ರ ಎನಿಸಿದರೂ ಸತ್ಯ. ಈ ಹೆಸರು ಬಂದಿರುವುದರ ಹಿಂದೆ ಒಂದು ಕಥೆ ಇದೆ. ಏನೆಂದು ತಿಳಿಯೋಣ ಬನ್ನಿ.
ಇದರ ಹಿನ್ನಲೆ ಹುಡುಕಿ ಕೊಂಡು ಹೋದರೆ ನಾವು ಅಮೆರಿಕಾದ ಕಡೆ ಹೋಗಬೇಕು . ಅಮೆರಿಕಾದ 26ನೆಯ ಅಧ್ಯಕ್ಷ ತಿಯೋಡೋರೆ ರೂಸ್ವೆಲ್ಟ್ . ಇವರನ್ನು Teddy ಅಂತಲೂ ಕರೆಯುತ್ತಿದ್ದರು. ಇವರಿಗೆ ಬೇಟೆಗೆ ಹೋಗುವ ಹುಚ್ಚು ಹೆಚ್ಚು, ಆದರಿಂದ ಒಮ್ಮೆ ಅಧ್ಯಕ್ಷರಾಗಿದ್ದಾಗ ಇವರು ಬೇಟೆಗೆ ಹೋಗಬೇಕು ಮತ್ತು ಆ ದಿನ ನಾನು ಕರಡಿ (bear) ಬಿಟ್ಟು ಬೇರೆ ಯಾವುದೇ ಪ್ರಾಣಿಯನ್ನು ಬೇಟೆ ಮಾಡುವುದಿಲ್ಲ ಎಂದು ನಿರ್ಧರಿಸಿದ್ದರು, ಆದರೆ ಅಂದು ಎಷ್ಟು ತಿರುಗಾಡಿದರೂ ಯಾವುದೇ ಕರಡಿ ಸಿಕ್ಕಿಲ್ಲ ಇದರಿಂದ ನಿರಾಶರಾಗಿ ವಾಪಸು ಆದಾಗ ಅದು ಬಹು ದೊಡ್ಡ ಸುದ್ದಿ ಆಯಿತು.
ಆದರೆ ಅಧ್ಯಕ್ಷರ ಮಾನ ಉಳಿಸಲು ಅಲ್ಲಿಯವರು ಒಂದು ಕರಡಿಯನ್ನು ಹಿಡಿದು ತಂದು ಕಟ್ಟಿ ಹಾಕಿ ನಿಮ್ಮ ಆಸೆಯನ್ನು ಪೂರೈಸಿಕೊಳ್ಳಿ ಎಂದಾಗ ಅವರು ಆ ಕರಡಿಯನ್ನು ನೋಡಿ, “ಎಷ್ಟು ಮುದ್ದಾಗಿದೆ ಇದು, ಇದನ್ನು ನೋಡಿದರೆ ಯಾರಿಗಾದರೂ ಏನಾದರೂ ಮಾಡಬೇಕು ಎಂದು ಮನಸ್ಸು ಬರುತ್ತದೆಯೇ ಎಂದು ಆ ಕರಡಿಯ ಅಂದವನ್ನು ಹೊಗಳುತ್ತಾ ಕಾಡಿಗೆ ಬಿಟ್ಟು ಬರುವಂತೆ ಆದೇಶಿಸುತ್ತಾರೆ. ಇದು ಮರುದಿನ ಬಹುದೊಡ್ಡ ಸುದ್ದಿ ಆಗಿ ಟಿವಿ ಪೇಪರ್ ಗಳಲ್ಲಿ ಬರುತ್ತದೆ. ಇಲ್ಲಿಂದ ನಂತರ ಆ ಕರಡಿ ಅಥವಾ Bear ಗೆ “Teddy bear” ಅಂತ ಕರೆಯಲು ಶುರು ಮಾಡಿದರು. Teddy ಎಂಬ ಅಂಕಿತನಾಮ ಹೊಂದಿದ್ದ ರೂಸ್ವೆಲ್ಟ್ ಅವರ ಹೆಸರನ್ನೇ ಅದಕ್ಕೆ ಇಡಲಾಯಿತು.