ಎಲ್ಲ ನಟರಿಗೂ ರವಿ ಮಾಮ ಅಂದ್ರೆ ಇಷ್ಟ, ಆದರೆ ಈ ಕನಸುಗಾರನಿಗೆ ಯಾವ ನಟ ಇಷ್ಟವಂತೆ ಗೊತ್ತೆ??

214

ನಮಸ್ಕಾರ ಸ್ನೇಹಿತರೇ ಕನ್ನಡ ಚಲನಚಿತ್ರರಂಗದ ಧೈತ್ಯ ಪ್ರತಿಭೆ ಪ್ರೇಮಲೋಕದ ಒಡೆಯ ಯುವ ಮನಸ್ಸುಗಳಿಂದ ಪ್ರೀತಿಯಿಂದ ರವಿಮಾಮ ಅಂತ ಕರೆಸಿಕೊಳ್ಳುವ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ರವಿಚಂದ್ರನ್ ಅಂದಾಕ್ಷಣ ಹೆಂಗಳೆಯರ ಮನ ಒಮ್ಮೆ ಝಲ್ಲೆನ್ನುತ್ತದೆ. ಅಷ್ಟರ ಮಟ್ಟಿಗೆ ಹೆಣ್ಣು ಮಕ್ಕಳ ಮನಸ್ಸನ್ನ ಕದ್ದ ಚೋರ ಚಿತ್ತ ಚೋರ ಈ ಒನ್ ಮ್ಯಾನ್ ಶೋ ಮ್ಯಾನ್.

90 ರ ದಶಕದಲ್ಲಿ ಸಿನಿಮಾಲೋಕಕ್ಕೆ ಹೊಸ ಬೆರಗನ್ನು ನೀಡಿದ ಖ್ಯಾತಿ ವಿ.ರವಿಚಂದ್ರನ್ ಅವರದ್ದು. 90 ರ ದಶಕದಲ್ಲಿ ಕನ್ನಡ ಚಿತ್ರಗಳಿಗೆ ಹೊರ ಮೆರಗು ತಂದು ಯುವ ಸಮೂಹವನ್ನು ಚಿತ್ರಮಂದಿರಕ್ಕೆ ಕರೆ ತಂದ ಕನ್ನಡ ಸಿನಿಮಾಗಳಿಗೆ ಮನ ಸೋಲುವಂತೆ ಮಾಡಿದ ಕಲಾವಿದ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್. ವಿ.ರವಿಚಂದ್ರನ್ ಅವರು ಕೇವಲ ನಟ ಮಾತ್ರ ಅಲ್ಲ. ಇವರು ಬಹುಮುಖ ಪ್ರತಿಭೆ. ನಿರ್ಮಾಪಕ,ನಿರ್ದೇಶಕ, ಬರಹಗಾರ,ಸಂಭಾಷಣೆಗಾರ,ನೃತ್ಯ ಸಂಯೋಜಕ,ಸಂಕಲನಕಾರ ಜೊತೆಗೆ ಸಂಗೀತ ನಿರ್ದೇಶಕ ಹೀಗೆ ಸಿನಿಮಾದ ಪ್ರತಿಯೊಂದು ಭಾಗವನ್ನ ಕೂಡ ತನ್ನ ಜೀವನದ ಭಾಗವನ್ನಾಗಿ ಮಾಡಿಕೊಂಡು ಸಿನಿಮಾನೇ ತನ್ನ ಉಸಿರು ಅಂತ ಸಿನಿಮಾವನ್ನೇ ತಮ್ಮ ಬದುಕಾಗಿಸಿಕೊಂಡವರು ರವಿ ಚಂದ್ರನ್.

ಇತ್ತೀಚೇಗೆ ರವಿಚಂದ್ರನ್ ಅವರು ದೃಶ್ಯಂ2.ಸಿನಿಮಾ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತು. ನಟ ರವಿಚಂದ್ರನ್ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾಗೂ ಕೂಡ ಎಂಟ್ರಿ ಆಗಿದ್ದಾರೆ. ಸಿನಿಮಾ, ಕಿರುತೆರೆ ರಿಯಾಲಿಟಿ ಷೋ ಅಂತ ಬಿಝಿ಼ ಆಗಿರುವ ರವಿಚಂದ್ರನ್ ಅವರಿಗೆ ಕನ್ನಡದ ಈ ನಟ ಫೇವರೇಟ್ ಅಂತೆ. ಅದು ಯಾರು ಅಂದ್ರೆ ರಾಕಿಂಗ್ ಸ್ಟಾರ್ ಯಶ್. ಇತ್ತೀಚೆಗೆ ಖ್ಯಾತ ನಿರೂಪಕಿ ಅನುಶ್ರೀ ಮತ್ತು ನಟ ರಕ್ಷಿತ್ ಶೆಟ್ಟಿ ಅವರು ಮಾಡಿದ ಸಂದರ್ಶನವೊಂದರಲ್ಲಿ ರವಿಚಂದ್ರನ್ ಭಾಗವಹಿಸಿರುತ್ತಾರೆ.

ಆ ಸಂಧರ್ಭದಲ್ಲಿ ರ್ಯಾಪಿಡ್ ರೌಂಡ್ ಪ್ರಶ್ನೆ ಸುತ್ತಿನಲ್ಲಿ ಹಲವು ಪ್ರಶ್ನೆಗಳನ್ನ ಕೇಳಿದ್ದಾರೆ. ಅದರಲ್ಲಿ ಇತ್ತೀಚಿನ ಜನ್ರೇಶನ್ ನಲ್ಲಿ ನಿಮ್ಮ ಫೇವರೇಟ್ ನಟ ಯಾರು ಎಂಬ ಪ್ರಶ್ನೆಗೆ ರವಿಚಂದ್ರನ್ ಅವರು ಯಾವುದೇ ರೀತಿ ಥಿಂಕ್ ಮಾಡ್ದೇ ತಟ್ಟನೇ ರಾಕಿಂಗ್ ಸ್ಟಾರ್ ಯಶ್ ಅಂತ ಉತ್ತರಿಸಿದ್ದಾರೆ. ಯಶ್ ಏಕೆ ನನಗೆ ಫೇವರೇಟ್ ಆಗ್ತಾರೆ ಅಂದ್ರೆ ಅವರಲ್ಲಿರುವ ಸಿನಿಮಾದ ಮೇಲಿನ ಒಲವು, ಬದ್ದತೆ ಇತ್ತೀಚಿಗೆ ಬೇರೆ ನಟರಲ್ಲಿ ನಾನು ಕಂಡಿಲ್ಲ. ಒಂದು ಸಿನಿಮಾಗಾಗಿ ವರ್ಷಾನುಗಟ್ಟಲೆ ತನ್ನನ್ನೇ ತಾನು ಸಮರ್ಪಿಸಿಕೊಂಡಿರುವುದು ಸುಲಭದ ಮಾತಲ್ಲ.

ಆ ವಿಚಾರವಾಗಿ ಯಶ್ ತುಂಬಾ ವಿಶೇಷ ವ್ಯಕ್ತಿಯಾಗಿ ಕಾಣ್ತಾರೆ. ಯಶ್ ಅವರ ಕೆಜಿಎಫ್ ಸಿನಿಮಾ ಅದಕ್ಕೆ ಹೂಡಿಕೆ ಮಾಡಿರುವ ಬಂಡವಾಳದ ಮೊತ್ತವನ್ನ ನಿರ್ಮಾಪಕರು ಬೇರೆ ನಟರಾಗಿದ್ರೆ ಒಪ್ಪಿಕೊಳ್ತಿರ್ಲಿಲ್ಲ. ಸಿನಿಮಾದ ಮೇಲಿನ ಫ್ಯಾಶನ್ ಯಶ್ ಅವರಿಗೆ ಬೇರೆಯದ್ದೇ ಲೆವೆಲ್ ಗೆ ಇದೆ. ಕೆಜಿಎಫ್ ಸಿನಿಮಾ ಸಾಮಾನ್ಯವಾದ ರೀತಿಯಲ್ಲಿ ಮೂಡಿ ಬಂದಿಲ್ಲ. ಸಿನಿ ಪ್ರೇಕ್ಷಕರ ನಿರೀಕ್ಷೆಗೂ ಮೀರಿ ವಿಭಿನ್ನ ಅಭಿರುಚಿ ನೀಡಿರುವ ಸಿನಿಮಾ ಅಂದ್ರೆ ಅದು ಕೆಜಿಎಫ್ ಚಿತ್ರ. ನಾನು ಅಂದು ಕಂಡತಹ ಕನಸುಗಳನ್ನ ಇತ್ತೀಚಿಗಿನ ಯುವ ಪೀಳಿಗೆ ನನಸು ಮಾಡುತ್ತಿರುವುದು ನನಗೆ ತುಂಬಾ ಸಂತಸ ಎಂದು ಹೇಳಬಹುದು ಅಂತ ಸಂದರ್ಶನದಲ್ಲಿ ಯಶ್ ಅವರ ಬಗ್ಗೆ ಅಪಾರ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Leave A Reply

Your email address will not be published.