ಒಂದು ಸಿನೆಮಾ ಬ್ಲಾಕ್ ಬಸ್ಟರ್ ಇನ್ನೊಂದು ಸಿನೆಮಾ ದೊಡ್ಡ ಫ್ಲಾಪ್. ಇದು ತೆಲುಗಿನ ಆಚಾರ್ಯ ಸಿನೆಮಾದ ಸುದ್ದಿ.

357

ಭಾರತದಲ್ಲಿ ಪ್ರತಿ ವರ್ಷ ಸರಾಸರಿ ೧೮೦೦ ಸಿನೆಮಾ ಬಿಡುಗಡೆ ಆಗುತ್ತದೆ. ಅದರಲ್ಲಿ ನಮಗೆ ನೆನಪಿರುವುದು ಎರಡು ಬಗೆಗಿನ ಸಿನೆಮಾಗಳು ಒಂದು ಹೊಸ ನಾಯಕ ನಟನ ಸಿನೆಮಾ ಸೂಪರ್ ಹಿಟ್ ಆಗುವಂತದ್ದು, ಇನ್ನೊಂದು ಸೂಪರ್ ಸ್ಟಾರ್ ನ ಸಿನೆಮಾ ಮಕಾಡೆ ಮಲಗೋದು. ಈಗ ಈ ಲಿಸ್ಟ್ ಗೆ ತೆಲುಗಿನ ಎರಡು ಸೂಪರ್ ಸ್ಟಾರ್ ಗಳು ಒಟ್ಟಿಗೆ ನಟಿಸಿದ ಸಿನೆಮಾ ಸೇರಿದೆ. ಅದು ಮತ್ಯಾವುದು ಅಲ್ಲ ಚಿರಂಜೀವಿ ಹಾಗು ರಾಮಚರಣ್ ಅಭಿನಯಿಸಿರುವ ಚಿತ್ರ “ಆಚಾರ್ಯ”.

ರಾಮಚರಣ್ ಅವರ ಇದಕ್ಕಿಂತ ಹಿಂದಿನ ಚಿತ್ರ RRR ಇದರಲ್ಲಿ ಜೂನಿಯರ್ NTR ಕೂಡ ಇದ್ದರು, ಈ ಸಿನೆಮಾ ವಿಶ್ವದಾದ್ಯಂತ ಒಳ್ಳೆ ಹಣ ಸಂಪಾದನೆ ಮಾಡಿ ಮಿಂಚಿದೆ. ೧,೧೦೦ ಕೋಟಿಗಿಂತಲೂ ಅಧಿಕ ಕಲೆಕ್ಷನ್ ಮಾಡಿ ಇಂದು ಕೂಡ ಕೆಲ ಸಿನಿ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಆದರೆ ಅದರ ನಂತರ ಬಂದ ಇನೊಂದು ಮಲ್ಟಿ ಸ್ಟಾರರ್ ಸಿನೆಮಾ ಆಚಾರ್ಯ ಮಕಾಡೆ ಮಲಗಿದೆ. ಎಲ್ಲರು ಇದನ್ನು ಒಂದು ಫ್ಲಾಪ್ ಸಿನೆಮಾ ಅಂತಿದ್ದಾರೆ. ಇದರ ಬಗ್ಗೆ ಉತ್ತಮ ನಿರೀಕ್ಷೆ ಇಟ್ಟುಕೊಂಡಿದ್ದ ಜನತೆಗೆ ತುಂಬಾ ನಿರಾಸೆ ಆಗಿದೆ.

ಈ ಚಿತ್ರದಲ್ಲಿ ಇಬ್ಬರು ಮಹಾನ್ ಕಲಾವಿದರು ಇದ್ದಾರೆ, ಚಿತ್ರದ ಮೇಕಿಂಗ್ ಸರಿ ಇಲ್ಲ ಎನ್ನುವ ಕಾರಣಕ್ಕೆ ಪ್ರೇಕ್ಷಕರು ದೂರ ಸರಿಯುತ್ತಿದ್ದಾರೆ. ಅದೇ ರೀತಿ ಸಿನೆಮಾದ ಕಥೆ ಏನು ಹೊಸದಲ್ಲ, ಹಳೆ ಕಥೆಗೆ ಹೊಸ ರೂಪ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ ಅಲ್ಲಿನ ಸಿನೆಮಾ ಅಭಿಮಾನಿಗಳು ಹಾಗು ಅಲ್ಲಿನ ತೆಲುಗು ಮಾಧ್ಯಮಗಳು. ಇದೀಗ RRR ಹಾಗು KGF Chapter 2 ರಂತಹ ಸಿನೆಮಾಗಳು ಬಿಡುಗಡೆ ಆದ ನಂತರ ಜನರ ನಿರೀಕ್ಷೆ ಹೆಚ್ಚಾಗಿದೆ. ಆದ್ದರಿಂದ ಈ ಹಳೆಯ ಮಸಾಲಾ ಇಲ್ಲದ ಸಿನೆಮಾಗಳಿಂದ ಜನರು ದೂರಾನೇ ಉಳಿಯುತ್ತಿದ್ದಾರೆ.

ಇನ್ನು ಈ ಚಿತ್ರದ ಕಲೆಕ್ಷನ್ ಬಗ್ಗೆ ಮಾತಾಡುವುದಾದರೆ ಆಚಾರ್ಯ ಸಿನೆಮಾ ಮೊದಲ ವಾರಾಂತ್ಯಕ್ಕೆ ಕೇವಲ ೭೩ ಕೋಟಿ ಕಲೆಕ್ಷನ್ ಮಾಡಿದೆ. RRR ಹಾಗು KGF ಚಿತ್ರದ ಅಬ್ಬರದಿಂದ ಈ ಸಿನೆಮಾಗೆ ದೊಡ್ಡ ಹಿನ್ನಡೆ ಆಗುತ್ತಿದೆ. ಮೊದಲ ದಿನ ಅಂದಾಜು ೫೧.೦೭ ಕೋಟಿ, ಎರಡನೇ ದಿನ ೧೨.೪೩ ಕೋಟಿ, ಮೂರನೇ ದಿನ ೭.೯೫ ಕೋಟಿ, ನಾಲ್ಕನೇ ದಿನ ೧.೫೮ ಕೋಟಿ ಒಟ್ಟಾರೆ ೭೩.೦೩ ಕೋಟಿ ಗಳಿಸಿದೆ. ಇದರಿಂದ ಈ ಸಿನೆಮಾ ಒಂದು ಫ್ಲಾಪ್ ಮೂವಿ ಎಂದು ಪರಿಗಣಿಸಬಹುದಾಗಿದೆ.

Leave A Reply

Your email address will not be published.