ಕಂಡು ಕೇಳರಿಯದ ರೀತಿಯಲ್ಲಿ ದುಬಾರಿ ಬೆಲೆ ಖರೀದಿ ಮಾಡಿದ ದೀಪಿಕಾ ರಣವೀರ್- ಗುಂಡಿಗೆ ಗಟ್ಟಿ ಮಾಡಿಕೊಂಡು ಬೆಲೆ ತಿಳಿಯಿರಿ: ಎಷ್ಟು ಗೊತ್ತೇ??

169

ಬಾಲಿವುಡ್ ನ ಖ್ಯಾತ ತಾರಾಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇದೀಗ ಹೊಸ ಐಷಾರಾಮಿ ದುಬಾರಿ ಕಾರ್ ಖರೀದಿ ಮಾಡಿ, ಸುದ್ದಿಯಾಗಿದ್ದಾರೆ. ಈ ಜೋಡಿ ಇತ್ತೀಚೆಗೆ ಹೊಸ ಫ್ಲ್ಯಾಟ್ ಖರೀದಿ ಮಾಡಿತ್ತು, ಇದೀಗ ಹೊಸ ಮರ್ಸಿಡಿಸ್ ಬೆಂಜ್ ಕಾರ್, ಅತ್ಯಂತ ದುಬಾರಿ ಬೆಲೆಯ ಕಾರ್ ಗಳಲ್ಲಿ ಒಂದನ್ನು ಈ ಜೋಡಿ ಖರೀದಿ ಮಾಡಿದೆ. ರಣವೀರ್ ಸಿಂಗ್ ಅವರು ಕಳೆದ ವರ್ಷ ತಮ್ಮ ಹುಟ್ಟುಹಬ್ಬಕ್ಕೆ ಇಂಥದ್ದೇ ಒಂದು ಕಾರ್ ಖರೀದಿ ಮಾಡಿದ್ದರು. ಇದೀಗ ದೀಪಿಕಾ ಪಡುಕೋಣೆ ಸಹ ದುಬಾರಿ ಕಾರ್ ಖರೀದಿ ಮಾಡಿದ್ದಾರೆ.

ದೀಪಿಕಾ ಅವರು Mercedes Benz Maybach GLS600 4Matic SUV ಕಾರ್ ಅನ್ನು ಖರೀದಿ ಮಾಡಿದ್ದು ಈ ಕಾರ್ ನ ಬೆಲೆ ಬರೋಬ್ಬರಿ 2.8 ಕೋಟಿ ರೂಪಾಯಿಗಳು. ಸೆಪ್ಟೆಂಬರ್ 2ರಂದು ಈ ಹೊಸ ಕಾರ್ ಅನ್ನು, ದೀಪಿಕಾ ಪ್ರಕಾಶ್ ಪಡುಕೋಣೆ ಹೆಸರಿನಲ್ಲಿ ಮುಂಬೈ ಆರ್.ಟಿ.ಒ ರಿಜಿಸ್ಟರ್ ಮಾಡಿದೆ. ಇವರಿಬ್ಬರು ಖರೀದಿ ಮಾಡಿರುವುದು ಒಂದೇ ರೀತಿಯ ನೀಲಿ ಬಣ್ಣದ ಕಾರ್ ಆಗಿದೆ. ಈ ಕಾರ್ ನ ಸ್ಪೆಷಾಲಿಟಿ ಬಗ್ಗೆ ಹೇಳುವುದಾದರೆ, ಸ್ಟೈಲ್ ಮತ್ತು ಐಷಾರಾಮಿ ತನದಲ್ಲಿ ಇದಕ್ಕೆ ಸರಿ ಸಾಟಿ ಇಲ್ಲ, ಲೆದರ್ ಅಫ್ಹೊಲ್ಸ್ಟರಿ, ಎಲೆಕ್ಟ್ರಾನಿಕ್ ಪನೋರಮಿಕ್ ಸ್ಪೈಡಿಂಗ್ ಸನ್ ರೂಫ್, ವೆಂಟಿಲೇಟೆಡ್ ಮಸಾಜ್ ಸೀಟ್ ಗಳನ್ನು ಈ ಕಾರ್ ಹೊಂದಿದೆ.

ಈ ಕಾರ್ ನ ಇಂಜಿನ್, GLS600 4.0-ಲೀಟರ್ V8 ಎಂಜಿನ್‌ ಇದ್ದು, 48V ಸಾಫ್ಟ್ ಹೈಬ್ರಿಡ್ ವ್ಯವಸ್ಥೆ ಈ ಕಾರ್ ನಲ್ಲಿದೆ. ಈ ಇಂಜಿನ್ 557 PS ಹಾಗೂ 730 Nm ಗರಿಷ್ಠ ಟಾರ್ಕ್ ಉತ್ಪಾದನೆ ಮಾಡುತ್ತದೆ, ಆದರೆ ಹೈಬ್ರಿಡ್ ಸಿಸ್ಟಮ್ 22PS ಹಾಗೂ 250 Nm ಟಾರ್ಕ್ ಉತ್ಪಾದನೆ ಮಾಡುತ್ತದ. ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ ಮಿಷನ್‌ ಜೊತೆಗೆ ಜೋಡಿಸಿದೆ. ರಣವೀರ್ ಸಿಂಗ್ ಅವರ ಬಳಿ ಇದೊಂದೇ ಅಲ್ಲದೆ Lamborghini ಹಾಗೂ ಇನ್ನಿತರ ಐಷಾರಾಮಿ ಕಾರ್ ಗಳಿವೆ.

Leave A Reply

Your email address will not be published.