ಕಾಂತಾರ ನೋಡಲು ಇಚ್ಚಿಸಿದ ಕಂಗನಾ ರಣಾವತ್. ಸಿನೆಮಾ ನೋಡಿದ ಶಿಲ್ಪಿ ಶೆಟ್ಟಿ ಕಾಂತಾರ ಬಗ್ಗೆ ಹೇಳಿದ್ದೇನು?

194

ದೇಶಾದ್ಯಂತ ತನ್ನ ಕಥೆಯಿಂದ ಅಲೆ ಎಬ್ಬಿಸಿರುವ ಕಾಂತಾರ ಸಿನೆಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕರ್ನಾಟಕದಿಂದ ಇದು ಐದನೇ ಸಿನೆಮಾ ದೇಶಾದ್ಯಂತ ಸುದ್ದಿ ಮಾಡುತ್ತಿದೆ. ಈ ಸಿನೆಮಾ ದೇಶದ ಮೂಲೆ ಮೂಲೆ ಯಲ್ಲೂ ಪ್ರದರ್ಶನ ಕಂಡಿದ್ದು, ಎಲ್ಲ ಕಡೆಯಿಂದ ಮೆಚ್ಚುಗೆ ಪಡೆದಿದೆ. ಇದು ಪ್ರೇಕ್ಷಕರಿಂದ ಅಷ್ಟೇ ಅಲ್ಲದೆ ಸೆಲೆಬ್ರೆಟಿ ಗಳಿಂದಲೂ ಪ್ರಶಮಸೆ ಪಡೆದ ಸಿನೆಮಾವಾಗಿ ಹೊರಹೊಮ್ಮಿದೆ.

ತೆಲುಗು ಸೂಪರ್ ಸ್ಟಾರ್ ಪ್ರಭಾಸ್, ಪ್ರಶಾಂತ್ ನೀಲ್, ಮಲಯಾಳಂ ಸೂಪರ್ ಸ್ಟಾರ್ ಪ್ರುತ್ವಿರಾಜ್ ಸುಕುಮಾರನ್, ತಮಿಳ್ ನಟ ಧನುಷ್ ಹಾಗು ಕಾರ್ತಿ ಇನ್ನು ಅನೇಕರು ಈ ಸಿನೆಮಾ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದಲ್ಲದೆ ಬಾಲಿವುಡ್ ಬೆಡಗಿ ಮಂಗಳೂರಿನ ಶಿಲ್ಪಿ ಶೆಟ್ಟಿ ಕೂಡ ಈ ಸಿನೆಮಾ ನೋಡಿ ಅದರ ಬಗ್ಗೆ ಅನುಭವ ಹಂಚಿಕೊಂಡಿದ್ದರು, ಇದೀಗ ಬಾಲಿವುಡ್ ಕ್ವೀನ್ ಅನಿಸಿಕೊಂಡಿರೋ ಕಂಗನಾ ರಣಾವತ್ ಕೂಡ ಈ ಸಿನೆಮಾ ನೋಡಬೇಕು ಎಂದು ಬಯಕೆ ಹೊರ ಹಾಕಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಇದರ ಬಗ್ಗೆ ಹಂಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ಸ್ಟೋರಿ ಅಲ್ಲಿ ಕಾಂತಾರ ಬಗ್ಗೆ ಹೇಳುತ್ತಾ, ಕಾಂತಾರ ಸಿನೆಮಾ ಬಗ್ಗೆ ಅಸಾಧಾರಣ ವಿಷಯಗಳನ್ನು ಕೇಳುತ್ತಿದ್ದೇನೆ. ಇದು ಕುತೂಹಲ ಹೆಚ್ಚಿಸುತ್ತಿದೆ. ನೋಡಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಶಿಲ್ಪಿ ಶೆಟ್ಟಿ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ನಿರೂಪಣೆ, ಭಾವನೆ, ವೈಬ್ ನಿಂದ ಕೂಡಿದೆ ಎಂದು ಹೇಳಿದ್ದಾರೆ. ಕ್ಲೈಮಾಕ್ಸ್ ಅಲ್ಲಿ goosebump ಬರುವಂತೆ ಮಾಡಿದೆ ಈ ಸಿನೆಮಾ ಎಂದು ಹೇಳಿಕೊಂಡಿದ್ದಾರೆ. ನಂಬಿಕೆ, ಪಕ್ಷಪಾತವಿಲ್ಲದೆ ಕಥೆ ಹೇಳುವುದಕ್ಕೆ, ಹಾಗು ಸಂಪೂರ್ಣ ತೇಜಸ್ಸಿಗಾಗಿ ಈ ಸಿನೆಮಾ ನೋಡಲೇಬೇಕು ಎಂದು ಹೇಳಿದ್ದಾರೆ. ಈ ಸಿನೆಮಾ ನಿರ್ದೇಶಿಸಿದ ರಿಷಬ್ ಶೆಟ್ಟಿ ಗೆ ಹ್ಯಾಟ್ಸ ಆಫ್ ಎಂದು ಹೇಳಿದ್ದಾರೆ ಶಿಲ್ಪಿ ಶೆಟ್ಟಿ.

Leave A Reply

Your email address will not be published.