ಕಿರುತೆರೆ ನಟಿಗೆ ಒಲಿದ Jackpot. ಕನ್ನಡ ಸಿನಿಮಾ ಲೋಕದಲ್ಲಿ ದೂಳೆಬ್ಬಿಸಿದ ಚಿತ್ರದ ಎರಡನೇ ಸೀಕ್ವೆಲ್ ಗೆ ಆಯ್ಕೆ. ಯಾವುದು ಈ ಸಿನಿಮಾ?

514

ಈ ಬಣ್ಣದ ಲೋಕನೆ ಹಾಗೆ, ಒಬ್ಬ ವ್ಯಕ್ತಿಯನ್ನ ಫುಟ್ಪಾತ್ ಇಂದ ಅಗಸದವೆರೆಗೂ ಹಾರಿಸುತ್ತೆ. ರಾತ್ರೋ ರಾತ್ರಿ ಸ್ಟಾರ್ಗಳನ್ನಾಗಿ ಮಾಡುತ್ತೆ. ಈ ಬಣ್ಣದ ಲೋಕದಲ್ಲಿ ಗೆದ್ದು ಬಿಡಗಿದವರು ಅನೇಕರಿದ್ದಾರೆ. ತಮ್ಮ ಸ್ವಂತ ಟ್ಯಾಲೆಂಟ್ ಇಂದ ಯಶಸ್ಸು ಸಾದಿಸಿದವರ ಲಿಸ್ಟ್ ನೋಡಿದ್ರೆ ಬಹಳಷ್ಟಿದೆ. ಅದೇ ಎತ್ತರಕ್ಕೆ ಬೆಳೆದ ಮೇಲೆ ಅಹಂಕಾರ ಪಟ್ಟವರು ಕೆಳಗೆ ಬಿದ್ದ ಉದಾಹರಣೆನು ಇದೆ. ನಮ್ಮ ಕನ್ನಡ ಕಿರುತೆರೆಯ ಮೂಲಕ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡು ಮಿಂಚಿದ ಅನೇಕ ನಟ ನಟಿಯರನ್ನ ನಾವು ನೋಡಿದ್ದೇವೆ. ಈಗ ಸರದಿ ನಮ್ಮ ಕಲರ್ಸ್ ವಾಹಿನಿ ಅಲ್ಲಿ ಪ್ರಸಾರ ಆಗುವ ಧಾರಾವಾಹಿ ನನ್ನರಸಿ ರಾಧೆಯ ನಾಯಕಿ ಇಂಚರ ಅಂದರೆ ನಮ್ಮ ಕೌಸ್ತುಭ ಮಣಿ.

ಕಲರ್ಸ್ ಅಲ್ಲಿ ಪ್ರಸಾರ ಆಗುತ್ತಿರುವ ನನ್ನರಸಿ ರಾಧೆ ಕರ್ನಾಟಕದ ಜನರ ಮನ ಗೆದ್ದಿದೆ. ಮುಖ್ಯ ಪಾತ್ರ ವಹಿಸಿರುವ ಕೌಸ್ತುಭ ಅವರ ಮುದ್ದಾದ ನಟನೆ ಎಲ್ಲರ ಮನ ಗೆದ್ದಿದೆ. ಕಥೆ ಕೂಡ ಜನರ ಮನಸ್ಸನ್ನು ಗೆದ್ದಿದೆ. ಇದೆ ಕಾರಣಕ್ಕೆ ಕರ್ನಾಟಕದಲ್ಲಿ ಟಾಪ್ ರೇಟಿಂಗ್ ಧಾರಾವಾಹಿಗಳಲ್ಲಿ ನನ್ನರಸಿ ರಾಧೆ ಕೂಡ ಒಂದಾಗಿದೆ. ಯಾವುದೇ ನಟನೆ ಮೇಲೆ ಅಷ್ಟಾಗಿ ಒಲವು ಇಲ್ಲದಿದ್ದರೂ ಕೂಡ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಕೌಸ್ತುಭ ಆಡಿಷನ್ ಕೊಟ್ಟು ನನ್ನರಸಿ ರಾಧೆಗೆ ಆಯ್ಕೆ ಆಗಿದ್ದರು. ಇದೀಗ ತಮ್ಮ ನಟನೆ ಮೂಲಕ ಜನರ ಮನ ಗೆದ್ದು ಬೆಳ್ಳಿತೆರೆಗೆ ಹರಳು ಸಿದ್ದರಾಗಿದ್ದಾರೆ.

ಕೌಸ್ತುಭ ತಮ್ಮ ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಕರ್ನಾಟದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿ ಸಕ್ಸಸ್ ಆದ ರಾಮಾಚಾರಿ ಚಿತ್ರದ ಸೀಕ್ವೆಲ್ ಅಂದರೆ ರಾಮಾಚಾರಿ ೨.೦ ಗೆ ಮಾರ್ಗರೇಟ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಕೌಸ್ತುಭ.ಈ ಸಿನಿಮಾದಲ್ಲಿ ನಾಯಕ ನಾಗಿ ಯುವ ಪ್ರತಿಭೆ ತೇಜ್ ನಟಿಸುತ್ತಿದ್ದು ಶೀಘ್ರದಲ್ಲಿಯೇ ಈ ಸಿನಿಮಾ ರಾಜ್ಯದ ಜನತೆ ಮುಂದೆ ಬರಲಿದೆ. ಈ ಸಿನಿಮಾ ನಂತರ ಅದೃಷ್ಟ ತಂದ ನನ್ನರಸಿ ರಾಧೆ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಇಲ್ಲವೋ ಎನ್ನುವುದು ಗೊತ್ತಿಲ್ಲ. ಆದರೆ ಕಿರುತೆರೆ ಇಂದ ಬೆಳ್ಳಿತೆರೆಗೆ ಹೋದ ನಟಿಯರ ಸಾಲಿಗೆ ನಮ್ಮ ಕೌಸ್ತುಭ ಮಣಿ ಸೇರಿಕೊಂಡಿದ್ದಾರೆ.

Leave A Reply

Your email address will not be published.