ಕೆಎಲ್ ರಾಹುಲ್ ರವರಿಗೆ ಎದುರಾಯ್ತು ಸಂಕಷ್ಟ: ಮೊದಲ ಬಾರಿಗೆ ರಾಹುಲ್ ಕುರಿತು ಗವಾಸ್ಕರ್ ಹೇಳಿದ್ದೇನು ಗೊತ್ತೇ??

160

ಭಾರತ ತಂಡದ ಸ್ಟಾರ್ ಪ್ಲೇಯರ್ ಕೆ.ಎಲ್.ರಾಹುಲ್ ಅವರು ಈಗ ಫಾರ್ಮ್ ಕಳೆದುಕೊಂಡಿದ್ದಾರೆ. ಮೊದಲಿಗೆ ಗಾಯದ ಕಾರಣದಿಂದ ಗೇಮ್ ಇಂದ ಹೊರಗಡೆ ಉಳಿದಿದ್ದ ರಾಹುಲ್ ಅವರು ಇದೀಗ ಭಾರತ ತಂಡಕ್ಕೆ ಮರಳಿ ಬಂದಿದ್ದಾರೆ. ಏಷ್ಯಾಕಪ್ ನಲ್ಲಿ ಇವರು ಉತ್ತಮ ಪ್ರದರ್ಶನ ನೀಡಲಿಲ್ಲ, ಆರಂಭಿಕನಾಗಿ ರಾಹುಲ್ ಅವರು ರನ್ ಗಳಿಸಲು ಕಷ್ಟಪಡುತ್ತಿದ್ದಾರೆ. ಮೊಹಾಲಿಯಲ್ಲಿ ನಡೆದ ಭಾರತ ವರ್ಸಸ್ ಆಸ್ಟ್ರೇಲಿಯಾ ನಡುವಿನ ಮೊದಲ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಅವರು 35 ಎಸೆತಗಳಲ್ಲಿ 55 ರನ್ ಗಳಿಸಿ, ಫಾರ್ಮ್ ಗೆ ಮರಳಿರುವ ಸೂಚನೆ ನೀಡಿದರು, ಆದರೆ 2ನೇ ಮತ್ತು 3ನೇ ಪಂದ್ಯದಲ್ಲಿ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದ್ದಾರೆ.

10 ಮತ್ತು 1 ರನ್ ಗಳಿಸಿ ಔಟ್ ಆದರು ರಾಹುಲ್. ಇವರು ಫಾರ್ಮ್ ನಲ್ಲಿ ಇಲ್ಲದೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಕೆ.ಎಲ್.ರಾಹುಲ್ ಅವರು ಈಗಿರುವ ಫಾರ್ಮ್ ಬಗ್ಗೆ ಭಾರತದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಅವರು ಆತಂಕಗೊಂಡಿದ್ದಾರೆ, ಈ ರೀತಿ ಆದರೆ ವರ್ಲ್ಡ್ ಕಪ್ ಪಂದ್ಯಗಳಿಗೆ ಕಷ್ಟ ಎಂದು ಹೇಳಿದ್ದಾರೆ. “ತಂಡಕ್ಕೆ ಏನು ಬೇಕೋ ಅದನ್ನೇ ಕೆ.ಎಲ್.ರಾಹುಲ್ ಅವರು ಮಾಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 55 ರನ್ ಗಳಿಸಿದರು, 2ನೇ ಪಂದ್ಯದಲ್ಲಿ ಒಂದೇ ರನ್ ಗೆ ಔಟ್ ಆಗುವ ಹಾಗೆ ಆಯಿತು. ಅದು 8 ಓವರ್ ಗಳ ಪಂದ್ಯ ಆಗಿತ್ತು, ಹಾಗಾಗಿ ಆರಂಭದಲ್ಲಿ ತಂಡಕ್ಕಾಗಿ ಕೆ.ಎಲ್.ರಾಹುಲ್ ವಿಕೆಟ್ ತ್ಯಾಗ ಮಾಡಿದರು..” ಎಂದಿದ್ದಾರೆ ಗವಾಸ್ಕರ್.

“ಅದೇ ರೀತಿ ಮೂರನೇ ಪಂದ್ಯದಲ್ಲಿ ರನ್ ರೇಟ್, ಒಂದು ಓವರ್ ಗೆ 9ಕ್ಕಿಂತ ಹೆಚ್ಚಿತ್ತು, ಆಗಲು ಹೆಚ್ಚು ರನ್ ಗಳನ್ನು ಪಡೆಯಬೇಕಿತ್ತು. ಉತ್ತಮ ಆರಂಭ ಬರಬೇಕು, ಹಾಗಾಗಿ ಅವರು ವಿಕೆಟ್ ತ್ಯಾಗ ಮಾಡಿದರು. ವಿರಾಟ್ ಅವರ ಹಾಗೆ ರಾಹುಲ್ ಅವರು ಸರಿಯಾದ ರೀತಿಯಲ್ಲಿ ಆಡುವಾಗ ಅವರನ್ನು ತಡೆಯಲು ಆಗುವುದಿಲ್ಲ. ಆದರೆ ಬೌಂಡರಿಗೆ ಬಾಲ್ ಅನ್ನು ಕಳಿಸಲು ಪ್ರಯತ್ನಿಸುವಾಗ, ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಇದನ್ನು ತಪ್ಪಿಸುವ ಪ್ರಯತ್ನ ಮಾಡಿದರೆ, ಸ್ಥಿರವಾಗಿ ರನ್ ಗಳಿಸುತ್ತಾರೆ..” ಎಂದಿದ್ದಾರೆ ಗವಾಸ್ಕರ್.

Leave A Reply

Your email address will not be published.