ಕೆರಳಿದ ಸಿಂಹ ಬಿಡುಗಡೆಯಾಗಬಾರದು ಅಂದಿದ್ರು, ಸವಾಲು ಹಾಕಿ, ಸಿನಿಮಾ ಬಿಡುಗಡೆ ಮಾಡಿದ್ದು ಹೇಗೆ ಗೊತ್ತಾ ಪಾರ್ವತಮ್ಮ??
ನಮಸ್ಕಾರ ಸ್ನೇಹಿತರೇ ಸಿನಿಮಾ ನಿರ್ಮಾಪಕ. ನಿರ್ಮಾಪಕ ಅಂದಾಕ್ಷಣ ಕೇವಲ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡೋದು ಅನ್ನೋ ಮಾತು ಕೆಲವು ವರ್ಷಗಳ ಹಿಂದೆ ಇತ್ತು. ಆದರೆ ಈಗ ಆ ಮಾತು ಚಾಲ್ತಿಯಲ್ಲಿ ಇಲ್ಲ. ಯಾಕಪ್ಪಾ ಅಂದ್ರೆ ಸಿನಿಮಾ ನಿರ್ಮಾಪಕ ಅಂದಾಕ್ಷಣ ಕೇವಲ ಸಿನಿಮಾಗೆ ಬೇಕಿರೋ ಹಣವನ್ನು ಮಾತ್ರ ಹೊಂದಿಸಿ ನಿರ್ದೇಶಕನಿಗೆ ಜವಬ್ದಾರಿ ವಹಿಸುವುದು ಅಂತಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿರ್ಮಾಪಕ ಆದವನಿಗೆ ಸಿನಿಮಾ ಪ್ರಪಂಚದ ಎಲ್ಲಾ ಆಗುಹೋಗುಗಳ ಬಗ್ಗೆ ಅಪಾರ ಅರಿವು ಇರಬೇಕು.
ಇದು ಕಡ್ಡಾಯ ಅಲ್ಲದಿದ್ದರು ಅರಿತು ಕೊಳ್ಳುವ ಉತ್ಸಾಹ ಆದರೂ ಇರಬೇಕು. ಇತ್ತೀಚಿನ ದಿನಗಳಲ್ಲಿ ನಿರ್ಮಾಪಕರು ಕೇವಲ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡೋದು ಮಾತ್ರ ಅಲ್ಲ. ಚಿತ್ರದ ಕಥೆ, ಪಾತ್ರಗಳು ಹೀಗೆ ಎಲ್ಲಾದರೂಲ್ಲಿಯೂ ಕೂಡ ಗಮನ ಹರಿಸಿ ಜವಾಬ್ದಾರಿ ಆಗಿ ಸಿನಿಮಾ ಮಾಡುತ್ತಿದ್ದಾರೆ. ಇದು ಹೊಸ ಟ್ರೆಂಡ್ ಅಂತ ಹೇಳ್ಬೋದು. ಬಟ್ ಈ ರೀತಿಯ ಶಿಸ್ತು, ಬದ್ದತೆ ಪಾರ್ವತಮ್ಮ ರಾಜ್ ಕುಮಾರ್ ಅವರು ಪಾಲಿಸಿಕೊಂಡು ಬರುತ್ತಿದ್ದರು.ಹಾಗಾಗಿಯೇ ವಜ್ರೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ತಯಾರಾಗುತ್ತಿದ್ದ ಎಲ್ಲಾ ಬಹುತೇಕ ಸಿನಿಮಾಗಳು ಯಶಸ್ವಿಯಾಗುತ್ತಿದ್ದವು.
ಪಾರ್ವತಮ್ಮ ಅವರು ದಿಟ್ಟ ಚಾಣಾಕ್ಷತೆ ನಿರ್ಮಾಪಕಿ ಆಗಿದ್ರು. ಅವರಿಂದ ಇಂದಿನ ನಿರ್ಮಾಪಕರು ಅನೇಕ ವಿಚಾರಗಳನ್ನು ಕಲಿಯಬೇಕು. ಅದಕ್ಕೆ ಒಂದು ಉತ್ತಮ ಉದಾಹರಣೆ ಅಂದ್ರೆ ಅದು 1981. ರಾಜ್ ಕುಮಾರ್ ಅವರ ಕೆರಳಿದ ಸಿಂಹ ಚಿತ್ರದ ರಿಲೀಸ್ ಸಂದರ್ಭ. ಈ ಕೆರಳಿದ ಸಿಂಹ ಚಿತ್ರವನ್ನ ಪಾರ್ವತಮ್ಮ ಅವರು ನಿರ್ಮಾಣ ಮಾಡಿರ್ಲಿಲ್ಲ. ಆದ್ರೇ ಈ ಚಿತ್ರದ ನಿರ್ಮಾಪಕರು ಪಿ.ಎಚ್.ರಾಮರಾವ್. ಆದ್ರೂ ಕೂಡಾ ಪಾರ್ವತಮ್ಮ ಅವರು ಈ ಕೆರಳಿದ ಸಿಂಹ ಸಿನಿಮಾದ ಸಂಕಷ್ಟದ ಸಂದರ್ಭದಲ್ಲಿ ನೆರವಾಗಿದ್ರು.
ಹೌದು ರಾಜ್ ಕುಮಾರ್ ಅವರ ಈ ಕೆರಳಿದ ಸಿಂಹ ಸಿನಿಮಾ ರಿಲೀಸ್ ಗೂ ಮೊದಲ ಸಾಕಷ್ಟು ಕುತೂಹಲ ಮೂಡಿಸಿರುತ್ತದೆ. ಈ ಚಿತ್ರದಲ್ಲಿ ರಾಜ್ ಕುಮಾರ್ ಅವರ ಜೊತೆ ಶ್ರೀನಿವಾಸ ಮೂರ್ತಿ, ತೂಗುದೀಪ ಶ್ರೀನಿವಾಸ್, ಪಂಡರಿ ಬಾಯಿ, ಸರಿತಾ, ಶಕ್ತಿ ಪ್ರಸಾದ್, ಸುಧೀರ್ ಹೀಗೆ ಘಟಾನುಘಟಿ ಕಲಾವಿದರು ನಟಿಸಿರುತ್ತಾರೆ. ಹಾಗಾಗಿ ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಕೂಡ ಇರುತ್ತದೆ. ಈ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗುತ್ತೆ. ಇನ್ನೆನೋ ನಾಳೆ ರಿಲೀಸ್ ಆಗ್ಬೇಕು ಅನ್ನೋಷ್ಟರಲ್ಲಿ ತಮಿಳುನಾಡಿನಲ್ಲಿ ಯಾವ್ಧೋ ಒಂದು ಕಾರಣಕ್ಕಾಗಿ ಪ್ರತಿಭಟನೆ ಗಲಾಟೆ ಆಗುತ್ತೆ. ಇದ್ರಿಂದ ಮದ್ರಾಸ್ ಬಂದ್ ಕೂಡ ಆಗಿರುತ್ತೆ.
ಮೊದಲು ನಮ್ಮ ಕನ್ನಡ ಸಿನಿಮಾಗಳು ಮದ್ರಾಸ್ ನಲ್ಲಿಯೇ ಎಲ್ಲಾ ಕೆಲಸ ಮಾಡ್ಬೇಕಿರುತ್ತೆ. ಅದು ಶೂಟಿಂಗ್, ಡಬ್ಬಿಂಗ್ ಎಲ್ಲಾ ಕೆಲಸ. ನಾಳೇ ಕೆರಳಿದ ಸಿಂಹ ಸಿನಿಮಾ ರಿಲೀಸ್ ಆಗಬೇಕು. ಮದ್ರಾಸ್ ಅಲ್ಲಿ ಸಿಕ್ಕಾಪಟ್ಟೆ ದೊಂಬಿ ಗಲಾಟೆ ಪ್ರತಿಭಟನೆಗಳು. ಇಂತ ಸಂದರ್ಭದಲ್ಲಿ ಪಾರ್ವತಮ್ಮ ಅವರು ನೇರವಾಗಿ ತಮ್ಮ ಸ್ವಂತ ಕಾರನ್ನ ತಮಿಳುನಾಡಿಗೆ ಕಳುಹಿಸಿ ತಾವೇ ಖುದ್ದಾಗಿ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿ ರೀಲ್ ಅನ್ನು ಬೆಂಗಳೂರಿಗೆ ತರಿಸಿಕೊಳ್ಳುತ್ತಾರೆ.
ತದ ನಂತರ ನಿರ್ಮಾಪಕರು ನಿಟ್ಟುಸಿರು ಬಿಡುವಂತಾಗುತ್ತದೆ. ರಾಜ್ ಕುಮಾರ್ ಅವರ ಚಿತ್ರಗಳಿಗೂ ಕೂಡ ಅಂದು ತೊಂದರೆ ನೀಡೋ ವ್ಯಕ್ತಿಗಳು ಇದ್ರು ಅನ್ನೋದಕ್ಕೆ ಇಂತಹ ಒಂದಷ್ಟು ಸಂಗತಿಗಳು ನಡೆದಿವೆ. ಪಾರ್ವತಮ್ಮ ರಾಜ್ ಕುಮಾರ್ ಅವರ ದಿಟ್ಟತೆ ಕೆರಳಿದ ಸಿಂಹ ಸಿನಿಮಾ ಅಂದು ಅನೌನ್ಸ್ ಮಾಡಿದ ದಿನದಂದೇ ರಿಲೀಸ್ ಆಗಿ ಅಭೂತಪೂರ್ವ ಯಶಸ್ಸು ಪಡೆಯುತ್ತದೆ. ಹೀಗೆ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಇಂದಾಗೂ ಕೂಡ ಅನೇಕ ನಿರ್ಮಾಪಕರಿಗೆ ಆದರ್ಶ ಮಾದರಿ ಅಂತ ಹೇಳಿದ್ರೇ ಅತಿಶಯೋಕ್ತಿ ಅಲ್ಲ.