ಕೇವಲ ಶೆಟ್ಟಿ ರವರನ್ನು ಮಾತ್ರ ಹಾಕಿಕೊಂಡು ಸಿನಿಮಾ ಮಾಡುತ್ತೀರಿ ಎಂಬ ಪ್ರಶ್ನೆಗೆ ಇದ್ದದದ್ದು ಇದ್ದ ಹಾಗೆ ಹೇಳಿದ ರಿಷಬ್ “ಶೆಟ್ಟಿ” ಹೇಳಿದ್ದೇನು ಗೊತ್ತೇ??

30,855

ರಿಷಬ್ ಶೆಟ್ಟಿ ಅವರು ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಕಳೆದ ವಾರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರೆಲ್ಲರು ಫಿದಾ ಆಗಿದ್ದು, ರಿಷಬ್ ಶೆಟ್ಟಿ ಅವರ ನಟನೆಯನ್ನು ಹೊಗಳುತ್ತಿದ್ದಾರೆ, ಅಷ್ಟೇ ಅಲ್ಲದೆ ಈ ಸಿನಿಮಾ ಗೆ ಇರುವ ಡಿಮ್ಯಾಂಡ್ ಇಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ. ವಿಮರ್ಶಕರಿಂದಲು ಉತ್ತಮ ಪ್ರತಿಕ್ರಿಯೆ ಪಡೆದಿರುವ ಕಾಂತಾರ ಸಿನಿಮಾ, ಬಾಕ್ಸ್ ಆಫೀಸ್ ನಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಇಷ್ಟು ಒಳ್ಳೆಯ ರಿವ್ಯೂ ಪಡೆದುಕೊಳ್ಳುತ್ತಿದ್ದರು ರಿಷಬ್ ಶೆಟ್ಟಿ ಅವರನ್ನು ಅದೊಂದು ಪ್ರಶ್ನೆ ಮಾತ್ರ ಬೆಂಬಿಡದೆ ಕಾಡುತ್ತಿದೆ.

ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಹೀಗೆ ಈ ಶೆಟ್ಟಿ ಗ್ಯಾಂಗ್, ಸ್ಯಾಂಡಲ್ ವುಡ್ ನಲ್ಲಿ ಇವರದ್ದೇ ದರ್ಬಾರ್ ನಡೀತಿದೆ, ಶೆಟ್ಟಿ ಅವರನ್ನೇ ಹಾಕೊಂಡು ಸಿನಿಮಾ ಮಾಡ್ತಾರೆ ಎನ್ನುವ ಮಾತು ಕೆಲ ಸಮಯದಿಂದ ಕೇಳಿ ಬರುತ್ತಲೇ ಇದ್ದು, ಇದರ ಬಗ್ಗೆ ರಿಷಬ್ ಶೆಟ್ಟಿ ಅವರನ್ನೇ ಪ್ರಶ್ನೆ ಕೇಳಲಾಯಿತು, ಅದಕ್ಕೆ ಖುದ್ದು ರಿಷಬ್ ಅವರು ಬೇರೆ ರೀತಿಯ ಉತ್ತರವನ್ನೇ ಕೊಟ್ಟಿದ್ದಾರೆ, “ಜಾತಿ ವಿಚಾರ ಹಿಡ್ಕೊಂಡು ಯಾಕೆ ಹೀಗೆ ಒದ್ದಾಡ್ತಾರೆ ಅಂತ ಗೊತ್ತಿಲ್ಲ. ಅದರಲ್ಲಿ ನಂಬಿಕೆನು ಇಲ್ಲ. ಸುಮಾರು ಸಲ ಕೇಳಿ ಕೇಳಿ ಕಿವಿ ದಪ್ಪ ಆಗುತ್ತೆ ಅಂತಾರೆ.. ಹಾಗೆ ಆಗಿದೆ..ಮೊದಲೆಲ್ಲಾ ಅದರ ಬಗ್ಗೆ ರಿಯಾಕ್ಟ್ ಮಾಡ್ತಾ ಇದ್ದೆ. ಈಗ ತಲೆಕೆಡಿಸಿಕೊಳ್ಳೋದನ್ನ ಬಿಟ್ಟುಬಿಟ್ಟಿದ್ದೀನಿ..”ಎಂದಿದ್ದಾರೆ ರಿಷಬ್.

ಪ್ರಮೋದ್ ಶೆಟ್ಟಿ ಅವರ ವಿಚಾರಕ್ಕೆ ಮುಂದುವರೆದು ಮಾತನಾಡಿರುವ ರಿಷಬ್ ಅವರು, “ಜೊತೆಲೇ ನಾಟಕ ಮಾಡ್ಕೊಂಡು ಇದ್ವಿ, ಆಗ ಕಾಫಿ ಕುಡಿಯೋದಕ್ಕೂ ಕಾಸಿರಲಿಲ್ಲ, ರಸ್ತೆಯಲ್ಲಿ ಬೇಕರಿ ಹತ್ರ ನಿಂತಿರ್ತೀದ್ವಿ . ಸಿನಿಮಾಗು ಒಟ್ಟಿಗೆ ಬಂದ್ವಿ, ಅದರಲ್ಲಿ ತಪ್ಪೇನಿದೆ.. ನಮ್ಮ ಟೀಮ್ ನಾವು ಕರೆದುಕೊಂಡು ಬರ್ತೀವಿ..” ಎಂದಿದ್ದಾರೆ ರಿಷಬ್. ಸಪ್ತಮಿ ಗೌಡ ಅವರು ಸಹ ಇದರ ಬಗ್ಗೆ ಮಾತನಾಡಿ, ನಾನು ಸಪ್ತಮಿ ಗೌಡ ಅಂತ ರಿಷಬ್ ಸರ್ ನನಗೆ ಅವಕಾಶ ಕೊಟ್ಟಿಲ್ಲ, ನಾನು ಈ ಪಾತ್ರ ಮಾಡಬಲ್ಲೆ ಅಂತ ಅವಕಾಶ ಕೊಟ್ಟರು..ಎಂದಿದ್ದಾರೆ. ಒಟ್ಟಿನಲ್ಲಿ ಈ ಟಾಪಿಕ್ ಇಟ್ಟುಕೊಂಡು ಮಾತನಾಡುವ ಎಲ್ಲರಿಗೂ ಖಡಕ್ ಉತ್ತರ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ.

Leave A Reply

Your email address will not be published.