ಗ್ರಾಂಡ್ ಆಗಿ ಟ್ರೇಲರ್ ರಿಲೀಸ್ ಮಾಡಿದ KGF 2 ಸಿನೆಮಾದ ಬಜೆಟ್ ಎಷ್ಟು ಗೊತ್ತೆ? ಯಶ್ ಅವರ ಸಂಭಾವನೆ ಎಷ್ಟು?

1,270

KGF ಚಾಪ್ಟರ್ 2 ಅತ್ಯಂತ ನಿರೀಕ್ಷೆಯಿಂದ ಕಾಯುತ್ತಿರುವ ಸಿನೆಮಾಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಯಾಕೆಂದರೆ ಇದರ ಮೊದಲ ಅಧ್ಯಾಯ ಸೃಷ್ಟಿ ಮಾಡಿರುವ ಹವಾ ಅಂತಹದು. ಕೇವಲ ಕನ್ನಡಿಗರು ಅಷ್ಟೇ ಅಲ್ಲ ಬದಲಾಗಿ ಇಡೀ ದೇಶ ವಿದೇಶಗಳ ಅಭಿಮಾನಿಗಳು ಕೂಡ ಈ ಸಿನೆಮಾ ಬರಲು ಕಾಯುತ್ತಿದ್ದಾರೆ. ಕೋರೋನ ದಿಂದಾಗಿ ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಈ ಸಿನೆಮಾ ಏಪ್ರಿಲ್ 14ರಂದು ತೆರೆ ಕಾಣಲಿದೆ. ಅದ್ದೂರಿಯಾಗಿ ಟ್ರೇಲರ್ ಬಿಡುಗಡೆ ಮಾಡಿ ಈಗಾಗಲೇ ಹವಾ ಮಾಡುತ್ತಿದೆ ಇದು. ಇದಕ್ಕೆ YouTube ನಲ್ಲಿ ದೇಶ ವಿದೇಶಗಳಿಂದ ಬರುತ್ತಿರುವ ರಿವಿವ್ಯು ಗಳೇ ಸಾಕ್ಷಿ.

ಹಾಗಾದರೆ ಎಷ್ಟು ಮೊತ್ತದಲ್ಲಿ ಈ ಸಿನೆಮಾ ಮಾಡಲಾಗಿದೆ ತಿಳಿಯೋಣ. ಮೊದಲ ಅಧ್ಯಾಯ 80ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿತ್ತು ಹೊಂಬಾಳೆ ಫಿಲ್ಮ್ಸ್. 2018ರಲ್ಲೀ ಬಿಡುಗಡೆ ಆಗಿದ್ದ ಈ ಸಿನೆಮಾ 250ಕೋಟಿ ರೂಪಾಯಿ ಬಾಚುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಈಗ ಚಾಪ್ಟರ್ 2 ಈವರೆಗಿನ ಎಲ್ಲಾ ದಾಖಲೆಗಳನ್ನು ಉಡಿಸ್ ಮಾಡಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಚಾಪ್ಟರ್ 2 ಸಿನೆಮಾಗೆ 100ಕೋಟಿ ರೂಪಾಯಿ ವೆಚ್ಚ ಆಗಿದೆ ಎಂದು ಮೂಲಗಳು ಹೇಳುತ್ತಿವೆ.

ಹೀಗೆ ನಾಯಕ ನಟ ಯಶ್ ಈ ಸಿನೆಮಾ ಗೆ 25ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಸಿನೆಮಾ ಸಂಘಟನೆ ತಿಳಿಸಿದೆ.ತನ್ನ ಮೊದಲ KGF ಸಿನೆಮಾದಲ್ಲಿ 15ಕೋಟಿ ಪಡೆದ ನಟ ಯಶ್ ಈ ಬಾರಿ ಹೆಚ್ಚೇನೂ ಕೇಳ್ದೆ 25ಕೋಟಿ ಗೆ ಈ ಸಿನೆಮಾ ಮಾಡಿದ್ದಾರೆ. ಹಾಗೆಯೇ ನಿರ್ದೇಶಕ ಪ್ರಶಾಂತ್ ನಿಲ್ ಅವರು ಈ ಸಿನೆಮಾದ ಡೈರೆಕ್ಟ್ ಮಾಡಲು 15ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನುತ್ತಿದ್ದಾರೆ. ಅದೇನೇ ಇರಲಿ ಇದೆ ಬರುವ 14ರಂದು ಸಿನೆಮಾ ಚಿತ್ರ ಮಂದಿರಕ್ಕೆ ಬರಲಿದ್ದು ಯಾರು ಕೂಡ ಪೈರಸಿ ಗೆ ಎಡೆಮಾಡಿದೆ ಹಾಗೆ ಮಾಡುವವರನ್ನು ತಡೆದು ಚಿತ್ರ ಮಂದಿರದಲ್ಲಿ ಸಿನೆಮಾ ವೀಕ್ಷಿಸಿ ಈ ಸಿನೆಮಾ ಈ ವರೆಗಿನ ಎಲ್ಲಾ ಇತಿಹಾಸವನ್ನು ಅಳಿಸಿ ಹಾಕುವಷ್ಟು ಯಶಸ್ಸು ಕಾಣಲಿ ಎಂದು ಹಾರೈಸೋಣ.

Leave A Reply

Your email address will not be published.