ಚಾರ್ಲಿ ಖದರ್, ಸಿನೆಮಾ ನಿರ್ದೇಶಕನಿಗೆ ಬಂತು ಬಾಲಿವುಡ್ ದಿಗ್ಗಜನಿಂದ ಕರೆ. ಮೆಚ್ಚುಗೆಯ ಮಹಾಪೂರ ಬರುತ್ತಿದೆ ಸಿನೆಮಾಗೆ.

301

ಚಾರ್ಲ್ಸಿ 777 ಕನ್ನಡ ಪ್ರತಿಭಾನ್ವಿತ ನಿರ್ದೇಶಕ ಕಿರನ್ ರಾಜ್ ರ ಸಿನಿಮಾ. ತಾವೇ ಬರೆದು ನಿರ್ದೇಶನ ಮಾಡಿದ ಸಿನೆಮಾ. ಇದಕ್ಕೆ ಸಾತ್ ನೀಡಿದ್ದು ನಮ್ಮ ಕನ್ನಡದ ಪ್ರತಿಭಾನ್ವಿತ ನಟ, ನಿರ್ದೇಶಕ, ಬರಹಗಾರ ನಮ್ಮ ತುಳುನಾಡಿನ ರಕ್ಷಿತ್ ಶೆಟ್ಟಿ. ಈ ಇಬ್ಬರ ಜುಗಲ್ ಬಂದಿ ಗೆ ಭರ್ಜಿರಿಯಾಗಿ ಬೆನ್ನಿಗೆ ನಿಂತಿದ್ದು ನಮ್ಮ ನಿಮ್ಮೆಲ್ಲರ ಮನಗೆದ್ದ ಚಾರ್ಲಿ ಅಂದರೆ ಈ ಸಿನೆಮಾದ ಮುಖ್ಯ ಪಾತ್ರ ವಹಿಸಿದ ನಾಯಿ.

ಈ ಸಿನೆಮಾ ಟ್ರೇಲರ್ ಗೆ ಬಹಳ ಮೆಚ್ಚುಗೆ ಬಂದಿದ್ದು ದೇಶದಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಎಲ್ಲ ಕಡೆಯಲ್ಲೂ ಪ್ರೀಮಿಯರ್ ಕೂಡಾ ಇದ್ದಿದ್ದು ದೇಶಾದ್ಯಂತ ಜನ ಮೆಚ್ಚುಗೆ ಜೊತೆ ಕಂಬನಿಯೂ ಸುರುಸಿದ್ದಾರೆ. ಜನರ ಮನಸ್ಸಿಗೆ ಈ ಸಿನೆಮಾ ತಲುಪಿದೆ ಎನ್ನುವುದಕ್ಕೆ ಜನರ ಕಣ್ಣಿಂದ ಬರುವ ಆ ಹನಿಗಳು. ಅಲ್ಲದೇ ಈ ನಾಯಿಗಳನ್ನು ಸಾಕುವ, ಪ್ರೀತಿಸುವ ಅನೇಕ ಜನರಿಗೆ ಈ ಸಿನೆಮಾ ಹೇಳಿ ಮಾಡಿಸಿದ ಹಾಗಿದೆ. ಉದಾಹರಣೆಗೆ ನಮ್ಮ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿಯವರು. ಅವರೂ ಕೂಡಾ ತಮ್ಮ ಸಾಕು ನಾಯಿ ಸತ್ತಾಗ ಕಣ್ಣೀರು ಸುರಿಸಿದ್ದು ಎಲ್ಲಾ ಕಡೆ ವೈರಲ್ ಆಗಿತ್ತು. ಈ ಸಿನೆಮಾ ನೋಡಿಯೂ ಮುಖ್ಯಮಂತ್ರಿ ಬಾವುಕರಾಗಿದ್ದು ಸಿನೆಮಾಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

File pic

ಇದೀಗ ದೇಶದೆಲ್ಲೆಡೆ ಈ ಸಿನೆಮಾ ಉತ್ತಮ ವಿಮರ್ಶೆ ಪಡೆಯುತ್ತಿದ್ದಂತೆಯೇ ಬಾಲಿವುಡ್ ಪಿಟ್‌ನೆಸ್ ಕಾಯ್ದುಕೊಂಡಿರುವ ಹಾಗೆನೇ ಪ್ರಾಣಿಗಳ ಮೇಲೆ ಸಿಕ್ಕಾಪಟ್ಟೆ ಪ್ರೇಮ ಇಟ್ಟುಕೊಂಡಿರುವ ಜಾನ್ ಅಬ್ರಾಹಂ ಅವರ ಕರೆ ಚಾರ್ಲಿ ೭೭೭ ಸಿನೆಮಾದ ನಿರ್ದೇಶಕರಿಗೆ ಬಂದಿದೆಯಂತೆ. ಇದನ್ನು ತಿಳಿಸಿದ್ದು ಸ್ವತಃ ನಿರ್ದೇಶಕ ಕಿರನ್ ರಾಜ್. ಇದು ಈ‌ಸಿನೆಮಾ ತಂಡದ ಬಲ ಹೆಚ್ಚಿಸಿದೆ ಅಂದರೆ ತಪ್ಪಾಗಲಾರದು.

ಬಾಕ್ಸ್ ಆಫೀಸ್‌ನಲ್ಲಿ ಮೊದಲ ವಾರಾಂತ್ಯದಲ್ಲಿ ಸುಮಾರು ೨೦ ಕೋಟಿ ಹಣ ಬಾಚಿ ಕೊಂಡಿದೆಯಂತೆ. ಈ ವಾರವು ಕೂಡಾ ಉತ್ತಮ ಪ್ರದರ್ಶನ ಕಾಣುತ್ತಿದ್ದು ಇದೇ ವೇಗದಲ್ಲಿ ನಡೆದರೆ ಮುಂದೆ ೫೦ ಕೋಟಿ ಗಳಿಸುವುದರಲ್ಲಿ‌ ಯಾವುದೇ ಅನುಮಾನವಿಲ್ಲ. ಜಾನ್ ತಮ್ಮ ಹಿಂದಿನ ಸಿನೆಮಾ ಮಕಾಡೆ ಮಲಗಿದ್ದು ಎಲ್ಲರಿಗೂ ಗೊತ್ತೆ ಇದೆ. ಇದಕ್ಕೆ ಕಾರಣ ಕೆಜಿಎಪ್ ಅಂದರೆ ತಪ್ಪಾಗಲಾರದು. ಅದೇ ರೀತಿ ಆ ಸಿನೆಮಾ ಪ್ರಚಾರದ ಸಮಯದಲ್ಲಿ ತಾನು ಪ್ರಾದೇಶಿಕ ಸಿನೆಮಾದಲ್ಲಿ ನಟಿಸಲ್ಲ ಎಂದಿದ್ದರು. ಇದು ಸ್ವಲ್ಪ ಮಟ್ಟಿಗೆ ವಿವಾದ ಸೃಷ್ಟಿಸಿತ್ತು. ಇದೀಗ ಇವರಿಂದಲೇ ಒಂದು ಕನ್ನಡ ಸಿನೇಮಾಗೆ ಪ್ರಶಂಸೆ ಬಂದಿದ್ದು ಉತ್ತಮ ನಡೆ ಎಂದು ಎಲ್ಲರೂ ಹೇಳುತ್ತಿದ್ದಾರೆ.

Leave A Reply

Your email address will not be published.