ಚಾರ್ಲಿ 777 ಟ್ರೈಲರ್ ಬಿಡುಗಡೆ. ದೇಶದಾದ್ಯಂತ ಮೆಚ್ಚುಗೆ ಪಡೆದಿದೆ ಕನ್ನಡ ಸಿನೆಮಾ ಟ್ರೈಲರ್. ಉತ್ತಮ ಬಾಕ್ಸ್ ಕಲೆಕ್ಷನ್ ಪಕ್ಕ ಎನ್ನುತ್ತಿದ್ದಾರೆ ಕನ್ನಡಿಗರು.

274

ರಕ್ಷಿತ್ ಶೆಟ್ಟಿ ತುಳುನಾಡಿನ ಮಾಣಿಕ್ಯ, ತಮ್ಮದೇ ಶೈಲಿಯಲ್ಲಿ ಉತ್ತಮ ಕಥಾ ಹಂದರವನ್ನೇ ಇಟ್ಟುಕೊಂಡು ಬೆಳ್ಳಿತೆರೆಗೆ ಬಂದು ತುಸು ಸಮಯದಲ್ಲೇ ಕರ್ನಾಟಕದ ದೊಡ್ಡ ಸ್ಟಾರ್ ನಟರಾಗಿ ಹೊರಹೊಮ್ಮಿದ್ದಾರೆ. ಜನರಿಗೆ ಏನು ಬೇಕೋ, ಜನರಿಗೆ ಯಾವ ವಿಷಯ ತೋರಿಸಿ ಮನೋರಂಜನೆ ನೀಡಬೇಕು ಎಂದು ಉತ್ತಮವಾಗಿ ಅರಿತ್ತಿದ್ದರೆ ರಕ್ಷಿತ್ ಶೆಟ್ಟಿ. ತಮ್ಮ ಮೊದಲನೇ ಸಿನೆಮಾ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಸಿನೆಮಾ ಹಾಗು ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ ಅಂತಹ ಸಿನೆಮಾಗಳು ಕನ್ನಡ ಸಿನೆಮಾ ದಿಕ್ಕನ್ನೇ ಬದಲಿಸಿದೆ.

ಇದೀಗ ಬಿಡುಗಡೆಗೆ ಸಿದ್ಧವಾಗಿದೆ ರಕ್ಷಿತ್ ಶೆಟ್ಟಿ ಅವರ ಇನ್ನೊಂದು ಬಹು ನಿರೀಕ್ಷಿತ ಚಿತ್ರ ಚಾರ್ಲಿ 777. ಕಳೆದ ಒಂದು ವರ್ಷದಿಂದ ಯಾವುದೇ ಸಿನೆಮಾ ಬಿಡುಗಡೆ ಆಗಿರಲಿಲ್ಲ ಶೆಟ್ರದು. ಇದೀಗ ದೊಡ್ಡ ಚಿತ್ರದೊಂದಿಗೆ ಬೆಳ್ಳಿ ಪರದೆಗೆ ಬರಲು ಸಿದ್ಧವಾಗಿದ್ದಾರೆ. ನಿಮಗೆ ತಿಳಿದಿರಬಹುದು ಈ ಚಾರ್ಲಿ 777 ಒಂದು ಬಹುಭಾಷಾ ಸಿನೆಮಾವಾಗಿದೆ. ಪಾನ್ ಇಂಡಿಯಾ ಸಿನೆಮಾ. ದೇಶದಾದ್ಯಂತ ಬಿಡುಗಡೆ ಗೆ ಕಾಯುತ್ತಿದೆ. ಈ ಸಿನೆಮಾ ರಕ್ಷಿತ್ ಶೆಟ್ಟಿ ಅವರ ಉಳಿದ ಸಿನಿಮಾಗಳಿಗಿಂತ ತುಂಬಾ ವಿಭಿನ್ನವಾಗಿದೆ. ಕಥೆ ಕೂಡ ವಿಭಿನ್ನವಾಗಿರಬಹುದು ಎನ್ನುವುದು ಜನರ ನಿರೀಕ್ಷೆ.

ಈಗಾಗಲೇ ಟ್ರೈಲರ್ ಬಿಡುಗಡೆ ಹೊಂದಿದ್ದು ದೇಶದಾದ್ಯಂತ ಮೆಚ್ಚುಗೆ ಪಡೆದಿದೆ. ನೋಡಿದವರು ತುಂಬಾ ಎಮೋಷನಲ್ ಸಿನೆಮಾ ಎಂದು ಈಗಾಗಲೇ ತಿಳಿಸಿ ಬಿಟ್ಟಿದ್ದಾರೆ. ಇದು ನೋಡಿದ ಪ್ರತಿಯೊಬ್ಬರ ಮಾತು ಇದೆ ಆಗಿದೆ. ಈ ಚಿತ್ರದ ವಿಶೇಷತೆ ಎಂದರೆ ಶ್ವಾನ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವುದು. ಈ ಸಿನೆಮಾದಲ್ಲಿ ಇದೆ ಒಂದು ಮುಖ್ಯ ಕಥಾಹಂದರ ಎಂದರೆ ತಪ್ಪಾಗಲಾರದು. ಈಗಾಗಲೇ ಬಿಡುಗಡೆ ಗೊಂಡ ಈ ಟ್ರೈಲರ್ ಕನ್ನಡದಲ್ಲಿ ಸುಮಾರು ೫.೬ ಮಿಲಿಯಾನ್ ವೀಕ್ಷಣೆಗೊಂಡಿದೆ. ಈಗಾಗಲೇ ಒಂದು ಪಾನ್ ಇಂಡಿಯಾ ಸಿನೆಮಾ KGF 2 ದಾಖಲೆ ಬರೆದಿದ್ದು ಇದು ಕೂಡ ದಾಖಲೆ ಬರೆಯಲಿದೆ ಎಂದು ಎಲ್ಲರು ಹೇಳುತ್ತಿದ್ದಾರೆ.

Leave A Reply

Your email address will not be published.