ಟ್ರೋಲಿಗರ ಬಾಯಿ ಮುಚ್ಚುವಂತೆ ಟ್ವೀಟ್ ಮಾಡಿದ ವಾರ್ನರ್ ಪತ್ನಿ? ಯಾಕೆ ಏನಿದು ವಿಷಯ?

297

ಆಸೀಸ್ ಇದೀಗ ಟಿ ಟ್ವೆಂಟಿ ವಿಶ್ವ ಚಾಂಪಿಯನ್ ಇದು ಎಲ್ಲರಿಗೂ ಗೊತ್ತಿರುವ ವಿಚಾರ. ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ newzland ವಿರುದ್ಧ ಭರ್ಜರಿ ಆಗಿ ಗೆದ್ದು ಐಸಿಸಿ tournement ಗಳಲ್ಲಿ ತಮ್ಮ ಪಾರುಪತ್ಯ ಮೆರೆದಿದ್ದಾರೆ. ಹೌದು ಇದುವರೆಗೂ 11 ಬಾರಿ ಐಸಿಸಿ ಟೂರ್ನಿಯ ಫೈನಲ್ ತಲುಪಿರುವ ಆಸೀಸ್ 7 ಬಾರಿ ಗೆದ್ದಿದೆ. ಆಸೀಸ್ ಗೆಲುವಿಗೂ ವಾರ್ನರ್ ಪತ್ನಿ ಕ್ಯಾಂಡಿಸ್ ಅವರ ಟ್ವೀಟ್ ಗೂ ಏನು ಸಂಭಂದ ಎಂಬ ವಿಚಾರಕ್ಕೆ ಇಲ್ಲಿದೆ ಉತ್ತರ. ಅಷ್ಟಕ್ಕೂ ಕ್ಯಾಂಡಿಸ್ ಅವರು ಮಾಡಿದ ಟ್ವೀಟ್ ಆದರೂ ಏನು ಬನ್ನಿ ತಿಳಿಯೋಣ.

ಆಸೀಸ್ ಟೀಮ್ ಸೆಲೆಕ್ಷನ್ ಆದ ನಂತರ ವಾರ್ನರ್ ಅವರ ಆಯ್ಕೆ ಯ ಬಗ್ಗೆ ಹಲವು ವಿರೋಧ ವ್ಯಕ್ತವಾಗಿತ್ತು. ಔಟ್ ಆಫ್ ಫಾರ್ಮ್ ಆಟಗಾರ ಟೀಮ್ ನಲ್ಲಿ ಸ್ಥಾನ ಪಡೆದಿದ್ದು ಎಲ್ಲರೂ ಸೆಲೆಕ್ಷನ್ ಕಮಿಟಿ ಅತ್ತ ಬೆರಳು ಮಾಡುವಂತೆ ಮಾಡಿತ್ತು . ತುಂಬಾ ನಿಧಾನ ಗತಿಯಲ್ಲಿ ಆಡುವ ಆಟಗಾರ , ವಯಸ್ಸಾಗಿದೆ ಅವರನ್ನು ಸೆಲೆಕ್ಟ್ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು ಮತ್ತು ಅವರನ್ನು ವೈಯಕ್ತಿಕವಾಗಿ ಕೂಡ ಟಾರ್ಗೆಟ್ ಮಾಡಲಾಗಿತ್ತು. ಆದರೆ ಎಲ್ಲವನ್ನೂ ಧನಾತ್ಮಕವಾಗಿ ತೆಗೆದುಕೊಂಡ ವಾರ್ನರ್ ತಮ್ಮ ಆಟದ ಮೂಲಕ ಎಲ್ಲರ ಬಾಯಿ ಮುಚ್ಚುವಂತೆ ಮಾಡಿದರು. ಹೌದು ನಿನ್ನಿನ ದೊಡ್ಡ ಮೊತ್ತ ಚೇಸ್ ಮಾಡುವ ಸಂಧರ್ಭ ದಲ್ಲಿ ವಾರ್ನರ್ ಅವರ ಆಟ ಮಹತ್ತರ ಪಾತ್ರ ವಹಿಸಿತ್ತು. ಮತ್ತು ಅವರ ಈ ಸರಣಿಯ 289 ರನ್ ಗಳ ಆಟಕ್ಕೆ “ಪ್ಲೇಯರ್ ಆಫ್ ದಿ ಟೂರ್ನಮೆಂಟ್” ಪ್ರಶಸ್ತಿ ಒಲಿದು ಬಂದಿತ್ತು.

ಇದೆ ಕಾರಣದಿಂದಾಗಿ ಅವರ ಪತ್ನಿ ನಿನ್ನೆ ಟ್ವೀಟ್ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ. ಹೌದು “out of form, too old and slow, congratulations David Warner” ಎಂದು ಟ್ವೀಟ್ ಮಾಡಿ ನೆಟ್ಟಿಗರ ಬಾಯಿ ಮುಚ್ಚಿಸಿದ್ದಾರೆ. ಇನ್ನೊಂದು ಟ್ವೀಟ್ ಮೂಲಕ “out of form!! Warner scored 289 runs in T20WC. ಭಾರತೀಯ ಚಲನಚಿತ್ರದ ಹಾಡುಗಳಿಗೆ ಡೇವಿಡ್ ವಾರ್ನೆರ್ ಟಿಕ್ ಟಾಕ್ ವಿಡಿಯೋ ಮಾಡಿದ್ದೂ ಕೂಡ ಬಹಳ ಸದ್ದಾಗಿತ್ತು. ಈ ಎಲ್ಲ ಟ್ರಾಲಿಗೂ ಡೇವಿಡ್ ವಾರ್ನರ್ ತಮ್ಮ ಬ್ಯಾಟ್ ನಿಂದ ಉತ್ತರ ಕೊಟ್ಟಿದ್ದಾರೆ.

Leave A Reply

Your email address will not be published.