ತನ್ನ ಅಚ್ಚು ಮೆಚ್ಚಿನ ನಟನನ್ನು ಆಯ್ಕೆ ಮಾಡಿದ ರಿಷಬ್ ಶೆಟ್ಟಿ, ಆದರೆ ಆತ ಕನ್ನಡವರು ಅಲ್ಲ. ಕಾರಣ ಸಮೇತ ವಿವರಣೆ ನೀಡಿ ಹೇಳಿದ್ದೇನು ಗೊತ್ತೇ??
ಕನ್ನಡ ಚಿತ್ರರಂಗ ಇತ್ತೀಚೆಗೆ ಮತ್ತೆ ಈ ಹಿಂದಿನ ಸುವರ್ಣ ಯುಗವನ್ನು ಕಾಣುತ್ತಿದೆ. ಇತ್ತೀಚೆಗೆ ಬಿಡುಗಡೆಗೊಳ್ಳುತ್ತಿರುವ ಕನ್ನಡ ಸಿನಿಮಾಗಳು ಸಾಲು ಸಾಲಾಗಿ ಹಿಟ್, ಸೂಪರ್ ಹಿಟ್ ಆಗುತ್ತಿವೆ. ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಅಡಿಯಲ್ಲಿ ಮೂಡಿ ಬಂದ ಕೆಜಿಎಫ್ ಸಿನಿಮಾ ಸರಣಿ ಬೃಹತ್ ಗೆಲುವು ಸಾಧಿಸುವುದರ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯಿತು. ಆ ನಂತರ ಬಂದ ಎಷ್ಟೋ ಚಿತ್ರಗಳು ದೊಡ್ಡ ಹಿಟ್ ಆದವು, ಇದೀಗ ಆ ಪಟ್ಟಿಗೆ ಕಾಂತಾರ ಚಿತ್ರವು ಸೇರ್ಪಡೆ ಆಗಿದೆ. ಚಿತ್ರವನ್ನು ತೆಲುಗು, ತಮಿಳು, ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ಶುರು ಮಾಡಿದ್ದು ತೆಲುಗು ಅವತರಿಣಿಕೆ ಪ್ರಚಾರ ವೇಳೆಯಲ್ಲಿ ರಿಷಭ್ ತನಗೆ ಜೂನಿಯರ್ ಎನ್‌ಟಿಆರ್ ಇಷ್ಟ ಎಂದು ಹೇಳಿಕೊಂಡಿದ್ದಾರೆ.
ಕಾಂತಾರ ಸಿನಿಮಾ ಎಲ್ಲರಿಗೂ ಇಷ್ಟ ಆಗುತ್ತಿದೆ. ಎಲ್ಲರನ್ನೂ ಅಷ್ಟೇ ಸೆಳಯುತ್ತಲೂ ಇದೆ. ದಂತ ಕಥೆ ಇದಾಗಿದ್ದರೂ ಇಲ್ಲಿ ದೈವದ ಕಥೆಯನ್ನೇ ಹೊಂದಿದೆ. ಈ ಒಂದು ಕಾರಣಕ್ಕೇನೆ ಈ ಚಿತ್ರದ ಬಗ್ಗೆ ಒಂದು ದೈವಿಕ ಮನೋಭಾವನೆ ಕೂಡ ಕರಾವಳಿ ಭಾಗದಲ್ಲಿದೆ. ಇದಕ್ಕೂ ಹೆಚ್ಚಾಗಿ ಈ ಸಿನಿಮಾ ತನ್ನದೇ ವಿಶೇಷ ಮೇಕಿಂಗ್ ಮೂಲಕ ಹೊಸ ಛಾಪು ಮೂಡಿಸುತ್ತಿದೆ. ಕೆಲವೇ ದಿನದಲ್ಲಿಯೇ ಕನ್ನಡದ ಕಾಂತಾರ ಸಿನಿಮಾದ ಮೌತ್ ಟಾಕ್ ಹೆಚ್ಚಾಗಿದೆ. ಸಿನಿಮಾಕ್ಕೆ ಬರ್ತಿರೋ ರೆಸ್ಪಾನ್ಸ್ ವೇರಿ ಗುಡ್ ಅಂತಲೇ ಹೇಳಬಹುದು. ಇಂತಹ ಈ ಚಿತ್ರದ ಕೇವಲ ಎರಡು ಭಾಷೆಗೆ ಈಗ ಸೀಮಿತವಾಗಿತ್ತು. ಆದರೆ ಇನ್ನು ಕೆಲವೇ ದಿನದಲ್ಲಿ ಕಾಂತಾರ ಬೇರೆ ಭಾಷೆಯಲ್ಲೂ ತೆರೆ ಕಾಣಲಿದೆ. ಚಿತ್ರವನ್ನು ತೆಲುಗು, ತಮಿಳು, ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ಶುರು ಮಾಡಿದೆ.
ತೆಲುಗು ಅವತರಿಣಿಕೆ ಪ್ರಚಾರದ ವೇಳೆ ರಿಷಭ್ ಶೆಟ್ಟಿಗೆ ನಿರೂಪಕಿ ತೆಲುಗಿನ್ನಲ್ಲಿ ನಿಮ್ಮ ನೆಚ್ಚಿನ ನಟ ಯಾರು ಎಂದು ಕೇಳಿದ್ದಕ್ಕೆ ” ನನಗೆ ಜೂನಿಯರ್ ಎನ್‌ಟಿಆರ್ ಇಷ್ಟ, ಅವರ ತಾಯಿ ನಮ್ಮ ಊರಿನವರು. ನಮ್ಮ ಕುಂದಾಪುರದವರು. ಅಲ್ಲದೆ ಜೂನಿಯರ್ ಎನ್‌ಟಿಆರ್ ಒಬ್ಬ ಅದ್ಭುತ ನಟ, ಹಾಗಾಗಿ ಅವರೆಂದರೆ ನನಗೆ ಇಷ್ಟ” ಎಂದು ಹೇಳಿಕೊಂಡಿದ್ದಾರೆ. ಕಾಂತಾರ ಸಿನಿಮಾ ನಾಯಕ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಕನಸಿನ ಸಿನಿಮಾನೇ ಆಗಿದೆ. ಇಂತಹ ಈ ಚಿತ್ರ ರಿಷಬ್ ಚಿತ್ರ ಜೀವನದಲ್ಲಿ ವಿಶೇಷ ಮೈಲುಗಲ್ಲಾಗಿಯೇ ನಿಲ್ಲುತ್ತಿದೆ. ಇಲ್ಲಿವರೆಗೂ ಇದ್ದ ಸಿನಿಮಾಗಳ ಲೆಕ್ಕ ಬೇರೆ ಇತ್ತು. ಆದರೆ ಕಾಂತಾರ ಅದನ್ನೆಲ್ಲ ಮೀರಿಸುತ್ತಿದೆ. ಕಾಂತಾರ ಸಿನಿಮಾದ ಕಥೆ ಎಲ್ಲೆಡ ಹೋಗಬೇಕು. ಇದು ಎಲ್ಲರಿಗೂ ರೀಚ್ ಆಗಬೇಕು ಅನ್ನೋ ಕನಸು ರಿಷಬ್ ಶೆಟ್ಟಿಯವರದ್ದಾಗಿದೆ. ಈ ಹಿನ್ನೆಲೆಯಲ್ಲಿ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ತಯಾರಾಗಬೇಕು ಅಂತಲೂ ರಿಷಬ್ ಶೆಟ್ಟಿ ಕನಸು ಕಂಡಿದ್ದರು. ಅದರಂತೆ ಚಿತ್ರ ಬೇರೆ ಬೇರೆ ಭಾಷೆಗಳಲ್ಲಿ ತೆರೆ ಕಾಣುತ್ತಿದೆ.