ತಮಿಳಿನಲ್ಲಿ ಪೂನಿಯನ್ ಸೆಲ್ವನ್ ಕನ್ನಡದಲ್ಲಿ ಕಾಂತಾರ, ಇವರರಿಬ್ಬರಲ್ಲಿ ನಿಜವಾಗಲೂ ಗೆದ್ದದ್ದು ಯಾರು ಗೊತ್ತೇ?? ಲೆಕ್ಕಾಚಾರ ಹೇಗಿದೆ ಗೊತ್ತೇ?

390

ದಸರಾಗೂ ಮೊದಲೇ ಒಂದೇ ದಿನ ಬಿಡುಗಡೆಗೊಂಡಿದ್ದ ಕನ್ನಡದ ಕಾಂತಾರ ಮತ್ತು ತಮಿಳಿನ ಪೊನ್ನಿಯನ್ ಸೆಲ್ವನ್ ಚಿತ್ರಗಳ ನಡುವೆ ಬಾರಿ ಪೈಪೋಟಿ ಏರ್ಪಟ್ಟಿತ್ತು. ಇಂದಿಗೂ ಎರಡು ಚಿತ್ರಗಳು ಭರ್ಜರಿ ಪ್ರದರ್ಶನ ಕಾಣುತ್ತಿವೆ. 12 ದಿನಗಳೆ ಕಳೆದರೂ ಚಿತ್ರಗಳ ಆರ್ಭಟ ಜೋರಾಗಿದೆ. ಅದರಲ್ಲೂ ಕಾಂತಾರ ಸಿನಿಮಾ ಒಂದು ಕೈ ಮೇಲು ಎಂದೇ ಹೇಳಬಹುದು. ಬಜೆಟ್, ಸ್ಟಾರ್‌ಕಾಸ್ಟ್‌, ಕ್ಯಾನ್ವಾಸ್ ವಿಚಾರದಲ್ಲಿ ಉಳಿದೆರಡು ಸಿನಿಮಾಗಳಿಗಿಂತ ‘ಕಾಂತಾರ’ ಚಿಕ್ಕ ಸಿನಿಮಾ ಇರಬಹುದು. ಆದರೆ ಕಂಟೆಂಟ್ ಅಂತ ಬಂದರೆ ‘ಕಾಂತಾರ’ ಮೊದಲ ಸ್ಥಾನದಲ್ಲಿದೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇನ್ನೂ ತೆಲುಗಿನಲ್ಲಿ ಅ.15ರಂದು ಮತ್ತು ಹಿಂದಿಯಲ್ಲಿ ಇದೇ ಅ.14ರಂದು ತೆರೆಗೆ ಬರಲಿದೆ. ಪರರಾಜ್ಯದಲ್ಲಿ ಕನ್ನಡ ಸಿನಿಮಾ ನೋಡೋಕೆ ಹಿಂದೆ ಮುಂದೆ ನೋಡುವ ಜನ, ಇದೀಗ `ಕಾಂತಾರ’ ಚಿತ್ರವನ್ನ ನೋಡಲು ಮುಗಿಬಿದ್ದು ನೋಡ್ತಿದ್ದಾರೆ. ಈ ಮಧ್ಯೆ ಮುಂಬೈನ ಪ್ರಸಿದ್ಧ ಥಿಯೇಟರ್‌ನಲ್ಲಿ ಡಬ್ ಆಗದೇ ಮೂಲ ಭಾಷೆಯಲ್ಲಿ ರಿಲೀಸ್ ಆಗಿರುವ ಮೊದಲ ಚಿತ್ರವಾಗಿದೆ.

ಕರಾವಳಿಯ ಭೂತಾರಾಧನೆ, ಕೋಲಗಳ ಕುರಿತು ತಿಳಿದಿದ್ದವರಿಗೂ ತಿಳಿಯದವರಿಗೂ ವಿಶೇಷ ಅನುಭವವನ್ನು ಕಟ್ಟಿಕೊಡುವ ಸಿನಿಮಾ ‘ಕಾಂತಾರ’. ಸಿನಿಮಾದ ಮೊದಲ ಭಾಗದಲ್ಲಿ ಮುಂದೇನು ಅನ್ನುವ ಕುತೂಹಲವನ್ನು ತರಿಸುತ್ತದೆ. ಅದರೆ ಎರಡನೆ ಭಾಗ ಪ್ರೇಕ್ಷಕನಿಗೆ ಯೋಚಿಸಲು ಅವಕಾಶವೆ ಇರುವುದಿಲ್ಲ. ನಡೆಯುತ್ತಿರುವ ಸನ್ನಿವೇಶದಲ್ಲಿ ತಲ್ಲೀನನಾಗಿ ಬಿಡುತ್ತಾನೆ. ಕನ್ನಡ ಚಿತ್ರಗಳು ಈಗ ಎಲ್ಲೆಲ್ಲೂ ಸದ್ದು ಮಾಡುತ್ತಿವೆ ಅಂದಾಜು 16 ರಿಂದ 18 ಕೋಟಿ ಬಜೆಟ್ ಸಿನಿಮಾ 500 ಕೋಟಿ ಬಜೆಟ್ಟಿನ ಪೊನ್ನಿಯನ್ ಸೆಲ್ವನ್ ಚಿತ್ರಕ್ಕೆ ಸೆಡ್ಡು ಹೊಡೆದಿದೆ. ಈ ಎಲ್ಲ ಚಿತ್ರಗಳನ್ನು ಮೀರಿಸಿ ಕಾಂತಾರ ಐಎಂಡಿಬಿ ಅಲ್ಲಿ 9.6 ರೇಟಿಂಗ್ ಪಡೆದಿದೆ. ಈ ಮೂಲಕ ಕಾಂತಾರ ಕನ್ನಡ ಮಾತ್ರವಲ್ಲದೆ ಪರಭಾಷೆಯ ಚಿತ್ರರಂಗಗಳಲ್ಲಿಯೂ ಸದ್ದು ಮಾಡುತ್ತಿದೆ.

Leave A Reply

Your email address will not be published.