ತಮಿಳಿನ ವಿಜಯ್ ಜೋಸೆಫ್ ನ್ “B’east” ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ KGF Chapter 2 ನಾಯಕ ಕನ್ನಡದ ರಾಕಿಂಗ್ ಸ್ಟಾರ್ ಯಶ್.

330

ಇಡೀ ಸಿನಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಚಿತ್ರ KGF ಚಾಪ್ಟರ್ 2 ಇದೀಗಾಗಲೇ ತನ್ನ ಟ್ರೇಲರ್ ನಿಂದಾ ಹವಾ ಸೃಷ್ಟಿ ಮಾಡಿರುವ KGF ಚಾಪ್ಟರ್ 2 ಬಾಕ್ಸ್ ಆಫೀಸ್ ದೋ-ಚುವುದರಲ್ಲಿ ಸಂಶಯವೇ ಇಲ್ಲ. ಅದೆಷ್ಟೋ ದೊಡ್ಡ ದೊಡ್ಡ ಸ್ಟಾರ್ ನಟರು ತಮ್ಮ ಸಿನೆಮಾ ಬಿಡುಗಡೆಯ ದಿನಾಂಕ ಬದಲು ಮಾಡಿದ್ದಾರೆ. ಕಾರಣ KGF ಮೊದಲ ಚಾಪ್ಟರ್ ರಿಲೀಸ್ ಆದಾಗ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಕೂಡ ಮಕಾಡೆ ಮಲಗಿದ್ದರು.

ಆದರೆ ಈ ಬಾರಿ ತಮಿಳು ಸೂಪರ್ ಸ್ಟಾರ್ ವಿಜಯ್ ಅವರು ಒಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಹೌದು KGF ಚಾಪ್ಟರ್ 2 ಬಿಡುಗಡೆ ದಿನವೇ ತಮ್ಮ ಚಿತ್ರ ಬೀಸ್ಟ್ ರಿಲೀಸ್ ಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಇದಕ್ಕೆ ರಾಕಿ ಭಾಯಿ ಯಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ ಬನ್ನಿ ಏನು ತಿಳಿಯೋಣ. ಸಿನೆಮಾದ ಪ್ರಮೋಶನ್ ನಲ್ಲಿ ಬ್ಯುಸಿ ಆಗಿರುವ ಯಶ್ ಅವರು ಉತ್ತರ ಭಾರತದಲ್ಲಿ ಪ್ರಮೋಶನ್ ಗೆ ಹೋಗಿದ್ದರು. ಅಲ್ಲಿ ಪತ್ರಕರ್ತ ಒಬ್ಬರು ಬೀಸ್ಟ್ ಚಿತ್ರದ ಬಗೆಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ಯಶ್ ವಿಜಯ್ ಒಬ್ಬ ಶ್ರೇಷ್ಠ ನಟ, ಜನರು KGF ಚಾಪ್ಟರ್ 2 V/S ಬೀಸ್ಟ್ ಎನ್ನುವ ಮಾತನ್ನು ಆಡುತ್ತಿದ್ದಾರೆ.

ಆದರೆ ಈ ಎರಡು ಚಿತ್ರಗಳನ್ನು ವೈ-ರಿಗಳಾಗಿ ಬಿಂಬಿಸಬೇಡಿ ಬದಲಿಗೆ KGF ಮತ್ತು ಬೀಸ್ಟ್ ಎಂದು ಹೇಳಿ. ಉತ್ತಮವಾದ ಪೈಪೋಟಿ ಇದ್ದಾರೆ ಒಳ್ಳೆದು ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯಶ್ ಅವರ ಈ ಪ್ರತಿಕ್ರಿಯೆಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಯಶ್ ಒಬ್ಬ ಶ್ರೇಷ್ಠ ನಟ ಎಂದು ಹೇಳಲು ಇದೆ ಸಾಕು ಎನ್ನುತ್ತಾರೆ ಅವರ ಅಭಿಮಾನಿಗಳು. ಉತ್ತಮ ಚಿತ್ರಕ್ಕೆ ಯಶಸ್ಸು ಯಾವಾಗಲು ಸಿಗುತ್ತದೆ. KGF ದೊಡ್ಡ ಮಟ್ಟದಲ್ಲಿ ಯಶಸ್ಸಾಗಲಿದೆ ಎಂದು ಎಲ್ಲ ಕನ್ನಡಿಗರು ನಿರೀಕ್ಷೆ ಇಟ್ಟಿದ್ದಾರೆ.

Leave A Reply

Your email address will not be published.