ದಕ್ಷಿಣ ಆಫ್ರಿಕಾ ಪಂದ್ಯಕ್ಕಾಗಿ ಬ್ಲೈಂಡ್ ಡ್ರಿಲ್ ಮಾಡುತ್ತಿರುವ ದಿನೇಶ್ ಕಾರ್ತಿಕ್. ಏನಿದು ಹೊಸ ಅಭ್ಯಾಸ?
ದಿನೇಶ್ ಕಾರ್ತಿಕ್ ಗೆ ಇದು ಕೊನೆಯ ಅಂತಾರಾಷ್ಟ್ರೀಯ icc ಟೂರ್ನಮೆಂಟ್ ಆಗಿರಬಹುದು. ೩೭ ವರ್ಷದ ದಿನೇಶ್ ಕಾರ್ತಿಕ್ ಜಾಗತಿಕ ICC ಪಂದ್ಯ ಆಡಲು ಪ್ರಾರಂಭಿಸಿದ್ದು 2007 ರಲ್ಲಿ. ಆದರೆ ಧೋನಿ ಸ್ಥಾನ ಭದ್ರವಾದ ಹಿನ್ನಲೆಯಲ್ಲಿ ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಪಂದ್ಯವಾದಳು ಸಾಧ್ಯವಾಗಲಿಲ್ಲ. ಆದರೆ ಇದೀಗ ಇನ್ನೊಮ್ಮೆ ಅವಕಾಶ ಸಿಕ್ಕಿದ್ದು, ಇದನ್ನು ಉತ್ತಮವಾಗಿ ಬಳಸಿಕೊಳ್ಳಲು ದಿನೇಶ್ ಕಾರ್ತಿಕ್ ಯೋಜನೆ ಮಾಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ವಿರುದ್ದದ ಪಂದ್ಯಕ್ಕೆ ದಿನೇಶ್ ಕಾರ್ತಿಕ್ ಬ್ಲೈಂಡ್ ಡ್ರಿಲ್ ಅಭ್ಯಾಸ ಮಾಡುತ್ತಿದ್ದಾರೆ.
ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಮೇಲ್ವಿಚಾರಣೆಯಲ್ಲಿ ದಿನೇಶ್ ಕಾರ್ತಿಕ್ ವಿಶಿಷ್ಟ ಕೀಪಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಬ್ಲೈಂಡ್ ಡ್ರಿಲ್ ಎನ್ನುವುದು ವಿಕೆಟ್ ಕೀಪರ್ ತನ್ನ ಜಾಗರೂಕತೆಯನ್ನು ಹೆಚ್ಚಿಸಲು ಮಾಡುವ ಅಭ್ಯಾಸ. ಬ್ಯಾಟ್ಸಮನ್ ಪೂರ್ಣವಾಗಿ ತನ್ನ ಮುಂದೆ ಇರುವಾಗ ವಿಕೆಟ್ ಕೀಪರ್ ಗೆ ಬಾಲ್ ಎಲ್ಲಿ ಯಾವ ಕಡೆ ಬರುತ್ತದೆ ಎನ್ನುವ ಸುಳಿವು ಇರುವುದಿಲ್ಲ. ಆತನಿಗೆ ಸಹಕಾರಿ ಆಗಲು ಈ ಬ್ಲೈಂಡ್ ಡ್ರಿಲ್ ಎನ್ನುವುದನ್ನು ಮಾಡಲಾಗುತ್ತದೆ.
ನೆದರ್ಲಾಂಡ್ ಪಂದ್ಯದಲ್ಲಿ ಒಂದು ಸ್ಟಂಪಿಂಗ್ ಅವಕಾಶ ಮಿಸ್ ಮಾಡಿದ್ದರು ದಿನೇಶ್ ಕಾರ್ತಿಕ್. ಈ ಬ್ಲೈಂಡ್ ಡ್ರಿಲ್ ಮೂಲಕ ವಿಕೆಟ್ ಕೀಪರ್ ರೆಪ್ಲೆಕ್ಷನ್ ತೀಕ್ಷ್ಣ ವಾಗುತ್ತದೆ. ಅದೇ ರೀತಿ ಫುಟ್ ವರ್ಕ್ ಸುಧಾರಿಸುತ್ತದೆ. ಚಲನ ವಲನಗಳು ಸುಧಾರಿಸುತ್ತದೆ. ಅಲ್ಲದೆ ಬ್ಯಾಟ್ ಗೆ ತಾಗಿ ಬಾಲ್ ಯಾವ ದಿಕ್ಕಿಗೂ ಹೋಗಬಹುದು. ಕೀಪರ್ ಈ ಸಮಯದಲ್ಲಿ ತುಂಬಾನೇ ಕ್ಸಿಫ್ರಾವಾಗಿರಬೇಕಾಗುತ್ತದೆ. ಇದರಿಂದ ಒಂದು ರನ್ ಕೂಡ ಬ್ಯಾಟ್ಸಮನ್ ಮಾಡುವುದನ್ನು ತಪ್ಪಿಸಬಹುದಾಗಿದೆ. ಅದೇ ರೀತಿ ಇತ್ತೀಚಿನ ಪಂದ್ಯಗಳಲ್ಲಿ ಒಂದು ರನ್ ನಿಂದ ಸೋಲುವುದು ಗೆಲ್ಲುವುದು ಕೂಡ ತುಂಬಾ ಪಂದ್ಯಗಳನ್ನು ನಾವು ನೋಡಿದ್ದೇವೆ.