ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕ ನಟರು ಯಾರು ಯಾರು? ಯಶ್ ಅವರಿಗೆ ಎಷ್ಟನೇ ಸ್ಥಾನ ಇದೆ ಗೊತ್ತೇ?

392

ದಕ್ಷಿಣ ಭಾರತದ ಸಿನೆಮಾಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಹೆಸರು ಮಾಡುತ್ತಿದೆ. ಕಥೆ ನಿರ್ದೇಶನ ಸಂಗೀತ ಎಲ್ಲಾ ವಿಭಾಗಗಳಲ್ಲಿ ಪ್ರೇಕ್ಷಕರು ಸಿನೆಮಾವನ್ನು ನೆಚ್ಚಿ ಕೊಳ್ಳುತ್ತಿದ್ದಾರೆ. ಹೌದು ಉತ್ತರ ಭಾರತದ ಸಿನಿ ಪ್ರೇಕ್ಷಕರು ಕೂಡ ದಕ್ಷಿಣದ ಸಿನೆಮಾಗಳನ್ನು ಅತೀ ಹೆಚ್ಚು ಇಷ್ಟ ಪಡುತ್ತಾರೆ. ಬಾಲಿವುಡ್ ಒಂದು ಹಂತಕ್ಕೆ ಮೂಲೆ ಗುಂಪು ಆಗಿ ಹೋಗಿದೆ. ಉತ್ತರ ಭಾರತದ ಮಂದಿ ಬಾಲಿವುಡ್ ಸಿನೆಮಾ ಬಿಟ್ಟು ದಕ್ಷಿಣ ಭಾರತದ ಸಿನೆಮಾಗಳಿಗೆ ಮಣೆ ಹಾಕಿದ್ದಾರೆ. ಹಾಗಾದರೆ ದಕ್ಷಿಣ ಭಾರತದ ಸಿನೆಮಾ ನಾಯಕರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಾಯಕರು ಯಾರು ತಿಳಿಯೋಣ.

ಈ ಪಟ್ಟಿಯಲ್ಲಿ ಮೊದಲ ಸ್ಥಾನ ಬರುವುದು ಪ್ರಭಾಸ್ ಅವರು ಹೌದು ಬಾಹುಬಲಿ 2 ಚಿತ್ರದಲ್ಲಿ ಅವರು ಚಿತ್ರದ ಲಾಭಾಂಶ ಸೇರಿ ಒಟ್ಟು 150ಕೋಟಿ ಸಂಭಾವನೆ ಪಡೆದಿದ್ದಾರೆ. ತಮಿಳು ನಟ ವಿಜಯ್ 118ಕೋಟಿ ಸಂಭಾವನೆ ಪಡೆದಿದ್ದಾರೆ. ಹಾಗೆ ಇನ್ನೊಬ್ಬ ತಮಿಳು ನಟ ಅಜಿತ್ ಕುಮಾರ್ ಅವರು 105ಕೋಟಿ ಸಂಭಾವನೆ ಪಡೆಯುವ ಮೂಲಕ ನಂತರ ಇದ್ದಾರೆ.ಅವರ ನಂತರ ಇಂಡಿಯನ್ ಸೂಪರ್ ಸ್ಟಾರ್ ರಜನಿ ಕಾಂತ್ ಅವರು ಬರುತ್ತಾರೆ ರೋಬೋಟ್ 2.0 ಸಿನೆಮಾದಲ್ಲಿ ಅವರು 100ಕೋಟಿ ಸಂಭಾವನೆ ಪಡೆದಿದ್ದಾರೆ.

ಹೀಗೆ ಮುಂದುವರೆದು ತೆಲುಗು ನಟ ರಾಮ್ ಚರಣ್ 100ಕೋಟಿ, ಮಹೇಶ್ ಬಾಬು 55ಕೋಟಿ, ಧನುಷ್ 50ಕೋಟಿ ,ಜೂನಿಯರ್ NTR 45ಕೋಟಿ ಪಡೆದಿದ್ದಾರೆ. ಹೀಗೆ ನಟ ಯಶ್ ಅವರು 30ಕೋಟಿ ಸಂಭಾವನೆ KGF ಚಾಪ್ಟರ್ 1ರ ಸಂಭಾವನೆ ಆಗಿದ್ದು. ಈ ಬಾರಿ ಲಾಭಾಂಶ ಸೇರಿ ಎಷ್ಟು ಸಂಪಾಡಿಸಲಿದ್ದರೆ ನೋಡಬೇಕು. ಅದೇನೇ ಆಗಲಿ ಜನರ ಮೆಚ್ಚುಗೆ ಪಾತ್ರ ವಾದ ಸಿನೆಮಾ ನಟ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಾರೆ.

Leave A Reply

Your email address will not be published.