ದಿನೇ ದಿನೇ ಸೋಲನ್ನು ಕಾಣುತ್ತಿದ್ದರೂ ಕನ್ನಡಕ್ಕೆ ಬನ್ನಿ ಎಂದಾಗ ಖ್ಯಾತ ನಟಿ ಕೃತಿ ಶೆಟ್ಟಿ ಹೇಳಿದ್ದೇನು ಗೊತ್ತೇ?? ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ.

322

ಉಪ್ಪೆನಾ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಲಗ್ಗೆ ಇಟ್ಟ ಕನ್ನಡ ಮೂಲದ ನಟಿ ಕೃತಿ ಶೆಟ್ಟಿ ಮೊದಲ ಚಿತ್ರದಲ್ಲೇ ಸಿನಿ ರಸಿಕರ ಮನ ಗೆದ್ದವರು. ಈ ಚಿತ್ರದಲ್ಲಿ ಬೇಬಮ್ಮ ಎಂಬ ಪಾತ್ರದ ಮೂಲಕ ಅದ್ಭುತವಾಗಿ ನಟಿಸಿದ್ದ ಅವರು ತಮ್ಮ ಉಪ್ಪೆನಾ ಚಿತ್ರದ ಅಭಿನಯಕ್ಕಾಗಿ ಸೈಮಾ ಪ್ರಶಸ್ತಿ ಮತ್ತು ಫಿಲಂಫೇರ್ ಅತ್ಯುತ್ತಮ ಉದಯೋನ್ಮುಖ ನಟಿ ಪ್ರಶಸ್ತಿಯನ್ನು ಸಹ ಪಡೆದರು. ಈ ಚಿತ್ರದ ಮೂಲಕ ಕೃತಿ ಶೆಟ್ಟಿ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು. ಆನಂತರ ಅವರನ್ನು ಸಾಕಷ್ಟು ಬಾರಿ ಕನ್ನಡದ ಚಿತ್ರದಲ್ಲಿ ನಟಿಸ್ತೀರಾ? ಕನ್ನಡಕ್ಕೆ ನಿಮ್ಮ ಡೆಬ್ಯುಟ್ ಯಾವಾಗ ಎಂದು ಸಾಕಷ್ಟು ಜನರು ಕೇಳುತ್ತಿದ್ದರು. ಇದೀಗ ಕೃತಿ ಶೆಟ್ಟಿ ಕನ್ನಡ ಚಿತ್ರದಲ್ಲಿ ನಟಿಸುವುದರ ಕುರಿತು ಮಾತನಾಡಿದ್ದಾರೆ.

ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ನಂತರ ನಟಿ ಕೃತಿ ಶೆಟ್ಟಿ ಅವರಿಗೆ ಬೇರೆ ಚಿತ್ರರಂಗಗಳಿಂದಲೂ ಆಫರ್ ಕೇಳಿಕೊಂಡು ಬಂದವು. ಆದರೆ ಅವರು ತೆಲುಗು ಚಿತ್ರಗಳಲ್ಲಿಯೇ ಮುಂದುವರಿದರು. ಆದರೆ ಮೊದಲ ಚಿತ್ರದಲ್ಲಿ ಸಿಕ್ಕ ಭರ್ಜರಿ ಗೆಲುವು ಅವರ ನಂತರ ಚಿತ್ರಗಳಿಗೆ ಸಿಗಲಿಲ್ಲ. ನಂತರ ತಮಿಳು ಚಿತ್ರರಂಗದ ಕಡೆಗೂ ಒಲವು ತೋರಿಸಿದರು. ಈ ಹಿಂದೆಯೇ ಅವರ ವಾರಿಯರ್ ಚಿತ್ರ ತೆಲುಗು ಮತ್ತು ತಮಿಳು ಎರಡು ಭಾಷೆಗಳಲ್ಲಿ ತೆರೆಕಂಡಿತ್ತು. ಇದೀಗ ಅವರು ವನಾಂಗನ್ ಎಂಬ ತಮಿಳು ಚಿತ್ರಕ್ಕೆ ಸಹಿ ಹಾಕುವ ಮೂಲಕ ಕಾಲಿವುಡ್ ಗೆಲಗ್ಗೆ ಇಟ್ಟಿದ್ದಾರೆ. ಈ ಮೂಲಕ ತೆಲುಗು ಮತ್ತು ತಮಿಳು ಎರಡು ಚಿತ್ರರಂಗಗಳಲ್ಲೂ ಬ್ಯುಸಿಯಾಗಿರುವ ಅವರು ಯಾವಾಗ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಾರೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿದ್ದವು. ನೆನ್ನೆ ನಡೆದ ಫಿಲಂ ಫೇರ್ ಪ್ರಶಸ್ತಿ ಸಮಾರಂಭದಲ್ಲೂ ಇದೇ ಪ್ರಶ್ನೆ ಕೇಳಿ ಬಂತು. ಇದಕ್ಕೆ ಕೃತಿ ಶೆಟ್ಟಿ ಉತ್ತರಿಸಿದ್ದು ಕನ್ನಡ ಚಿತ್ರದಲ್ಲಿ ನಟಿಸುವುದರ ಬಗ್ಗೆ ಮಾತನಾಡಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ನಡೆದ 67ನೇ ಫಿಲಂ ಫೇರ್ ಪ್ರಶಸ್ತಿ ಸೌತ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ಕೃತಿ ಶೆಟ್ಟಿ, ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಕನ್ನಡದಲ್ಲಿ ಸಿನಿಮಾ ಯಾವಾಗ ಮಾಡ್ತೀರಾ ಎಂಬ ಪ್ರಶ್ನೆ ಕೇಳಿ ಬಂತು. ಇದಕ್ಕೆ ನಟಿ ಕೃತಿ ಶೆಟ್ಟಿ “ನಾನು ಕರ್ನಾಟಕದ ಹುಡುಗಿ, ಆದ ಕಾರಣ ನಾನು ಕನ್ನಡದಲ್ಲಿ ಅಭಿನಯಿಸುವ ಮೊದಲು ಸಿನಿಮಾ ತುಂಬಾ ಸ್ಪೆಷಲ್ ಆಗಿರಬೇಕು ಎಂದು ನಾನು ಬಯಸುತ್ತೇನೆ. ಆ ರೀತಿಯ ಕಥೆಗಾಗಿ ಕಾಯುತ್ತಿದ್ದೇನೆ, ಕಥೆ ಇಷ್ಟವಾದರೆ ನಟಿಸುತ್ತೇನೆ” ಎಂದು ಉತ್ತರಿಸಿದ್ದಾರೆ. ಈ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುವ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಲ್ಲದೆ ನಟಿ ಕೃತಿ ಶೆಟ್ಟಿ, ತಮಿಳು ನಟ ಸೂರ್ಯ ಅವರೊಂದಿಗೆ ತಮ್ಮ ಮುಂದಿನ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ.

Leave A Reply

Your email address will not be published.