ದೇಶದ ಬಗ್ಗೆ ಲಘುವಾಗಿ ಮಾತನಾಡಿದ ರಶ್ಮಿಕಾ: ಸಿನಿಮಾದಲ್ಲಿ ಡಿಲೀಟ್ ಆದ ವಿಡಿಯೋ ಆಯಿತು ವೈರಲ್: ಏನು ಹೇಳಿದ್ದಾರೆ ಗೊತ್ತೇ ದೇಶದ ಬಗ್ಗೆ??

130

ಕಳೆದ ತಿಂಗಳು ತೆರೆಕಂಡ ತೆಲುಗಿನ ಸೀತಾ ರಾಮಂ ಸಿನಿಮಾ ಭಾರಿ ಸದ್ದು ಮಾಡಿ ಸೂಪರ್ ಹಿಟ್ ಆಗಿದೆ. ಈ ಸಿನಿಮಾವನ್ನು ಹನು ರಾಘವಪುಡಿ ನಿರ್ದೇಶನ ಮಾಡಿದ್ದು, ದುಲ್ಕರ್ ಸಲ್ಮಾನ್ ನಾಯಕನಾಗಿ, ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸಿದ್ದಾರೆ, ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳು ಮತ್ತು ಮಲಯಾಳಂ ಗೆ ಡಬ್ ಆಗಿ ಬಿಡುಗಡೆಯಾಗಿದ್ದ ಸೀತಾರಾಮಂ ಸಿನಿಮಾ ಇದೀಗ ಹಿಂದಿಗೂ ಡಬ್ ಆಗಿ ಬಿಡುಗಡೆಯಾಗಿ ಸೂಪರ್ ಇಟ್ ಟಾಕ್ ಪಡೆದುಕೊಳ್ಳುತ್ತಿದೆ.

ಈ ನಡುವೆ ಸೆಪ್ಟೆಂಬರ್ 9ರಂದು ಸೀತಾರಾಮಾಂ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗಲಿದೆ. ಅದರ ಬೆನ್ನಲ್ಲೇ ಚಿತ್ರತಂಡಸ್ ಡಿಲೀಟೆಡ್ ಸೀನ್ಸ್ ಬಿಡುಗಡೆ ಮಾಡುತ್ತಿದೆ, ರಶ್ಮಿಕಾ ಅವರ ದೃಶ್ಯ ಒಂದನ್ನು ಇದೀಗ ಬಿಡುಗಡೆ ಮಾಡಿದ್ದು, ಭಾರತದ ಬಗ್ಗೆ ಕೇವಲವಾಗಿ ಮಾತನಾಡುವ ದೃಶ್ಯ ಇದಾಗಿದೆ, ಈ ದೃಶ್ಯವನ್ನು ಸಿನಿಮಾ ಇಂದ ತೆಗೆದುಹಾಕಲಾಗಿದೆ. ಸೀತಾರಾಮಂ ಸಿನಿಮಾದಲ್ಲಿ ಸೀತಾ ಮತ್ತು ರಾಮ್ ರನ್ನು ಒಂದು ಮಾಡುವ ಕೆಲಸ ರಶ್ಮಿಕಾ ಅವರ ಪಾತ್ರದ್ದು, ಆಫ್ರಿನ್ ಎನ್ನುವ ಪಾಕಿಸ್ತಾನ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ರಶ್ಮಿಕಾ. ಸೀತಾಳನ್ನು ಹುಡುಕಿ ಹೈದರಾಬಾದ್ ಗೆ ಬಂದು, ನೂರ್ ಜಹಾನ್ ಕಾಲೇಜ್ ನಲ್ಲಿ ಸೀತಾ ಬಗ್ಗೆ ಮಾಹಿತಿ ಪಡೆದು, ಇದ್ದಕ್ಕಿದ್ದ ಹಾಗೆ ಹೊರಗೆ ಬರುತ್ತಾಳೆ ಆಫ್ರಿನ್.

ಟ್ಯಾಕ್ಸಿ ಡ್ರೈವರ್ ಅನ್ನು ನೋಡಿ, “ಇಂಡಿಯಾದಲ್ಲಿ ನಿನ್ನಂಥವರು ಇದ್ದಾರಾ..” ಎಂದು ಧಿಮಾಕು ತೋರಿಸಿ ಹೇಳುತ್ತಾಳೆ. ಆಗ ಟ್ಯಾಕ್ಸಿ ಡ್ರೈವರ್, “ಇಲ್ಲಿ ನಿನ್ನಂಥವರೆ ಇರ್ತಾರೆ, ನಿಮ್ಮ ಬ್ಯಾಗ್ ತೆಗೆದುಕೊಂಡು ಹೋಗಿ, ನಮ್ಮ ದೇಶದ ಮರಿಯಾದೇನಾ ನಿಮ್ಮ ಜೊತೆ ಕಳಿಸೋದಕ್ಕೆ ಆಗೋದಿಲ್ಲ. ಎಲ್ಲಾ ಸರಿ ಇದೆಯಾ ಅಂತ ಚೆಕ್ ಮಾಡಿಕೊಳ್ಳಿ..” ಎಂದು ಟ್ಯಾಕ್ಸಿ ಡ್ರೈವರ್ ಹೇಳುತ್ತಾನೆ. ಈ ಸೀನ್ ಸಿನಿಮಾದಲ್ಲಿ ಇದ್ದರೆ, ವಿವಾದ ಆಗುವು ಖಂಡಿತ ಎನ್ನುವ ಕಾರಣದಿಂದ ಸಿನಿಮಾದಲ್ಲಿ ಈ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ. ಸಧ್ಯಕ್ಕೆ ಯೂಟ್ಯೂಬ್ ನಲ್ಲಿ ಈ ದೃಶ್ಯ ಬಿಡುಗಡೆ ಆಗುತ್ತಿದ್ದು, ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.

Leave A Reply

Your email address will not be published.