ನನ್ನ ಸಿನೆಮಾ ಕನ್ನಡದಲ್ಲಿ ಡಬ್ ಮಾಡಿಸುವ ಅವಶ್ಯಕತೆ ಇಲ್ಲ ಹಾಗು ಮಾಡಿಸುವುದೂ ಇಲ್ಲ ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡ ತೆಲುಗು ಸ್ಟಾರ್ ನಾಣಿ.

556

ಭಾರತೀಯ ಚಿತ್ರರಂಗ ವಿಶ್ವದಲ್ಲಿಯೇ ಸುದೀ ಮಾಡಿದೆ ಇತ್ತೀಚಿಗೆ ಬಿಡುಗಡೆ ಆದ KGF ಚಾಪ್ಟರ್ ೨ ಮೂಲಕ. ಅದೇ ರೀತಿ ಅದಕ್ಕಿಂತ ಮೊದಲು RRR ಹಾಗು ಪುಷ್ಪ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಭಾರತೀಯ ಚಿತ್ರರಂಗ ಎಂದರೆ ಅದು ಕೇವಲ ಬಾಲಿವುಡ್ ಅಲ್ಲದೆ ಟಾಲಿವುಡ್, ಸ್ಯಾಂಡಲ್ವುಡ್, ಕಾಲಿವುಡ್, ಮಾಲಿವುಡ್, ಕೋಸ್ಟಲ್ ವುಡ್ ಸೇರಿದಂತೆ ಇನ್ನು ಅನೇಕ ಭಾಸೆಯ ಚಿತ್ರ ರಂಗವು ಸೇರಿದೆ. ಇತ್ತೀಚಿಗೆ ಬಿಡುಗಡೆ ಅದ ಎಲ್ಲ ಸಿನಿಮಾಗಳು ಪಾನ್ ಇಂಡಿಯಾ ಸಿನೆಮಾಗಳಾಗಿದ್ದು ಎಲ್ಲ ಭಾಷೆಯಲ್ಲೂ ಕೂಡ ಡಬ್ ಆಗಿ ಬಿಡುಗಡೆ ಆಗಿದೆ.

ಡಬ್ ಅದ ಕಾರಣ ಎಲ್ಲ ಭಾಷಿಗರು ಕೂಡ ತಮ್ಮ ಮಾತೃ ಭಾಷೆಯಲ್ಲಿಯೇ ಸಿನೆಮಾ ವೀಕ್ಷಣೆ ಮಾಡಿದ ಕಾರಣಕ್ಕೇನೆ RRR ಒಂದು ಸಾವಿರ ಕೋಟಿ ದಾಟಲು ಸಾಧ್ಯವಾಯಿತು. ಅದೇ ರೀತಿ RRR ದಾಖಲೆ ಸರಿದೂಗಿಸುವತ್ತ ನಮ್ಮ ಕನ್ನಡದ ಹೆಮ್ಮೆ KGF ಚಾಪ್ಟರ್ ೨ ಕೂಡ ಹೆಜ್ಜೆ ಇಡುತ್ತಿದ್ದು ಇದು ಕೂಡ ದೇಶದ ಪ್ರಮುಖ ಭಾಷೆಗಳಿಗೆ ಡಬ್ ಆಗಿದೆ. ಅದೇ ಕಾರಣಕ್ಕೆ ಒಂದು ವಾರದಲ್ಲಿ ೭೦೦ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಭರ್ಜರಿ ಪ್ರದರ್ಶನ ಆಗುತ್ತಿದೆ. ತೆಲುಗು ಸಿನೆಮಾದ ನಟ ನಾಣಿ ಅವರ ಈ ಮಾತು ಇದೀಗ ವಿವಾದ ಎಬ್ಬಿಸಿದೆ.

ತೆಲುಗು ನಟ ನ್ಯಾಚುರಲ್ ಸ್ಟಾರ್ ನಾಣಿ ಯಾರಿಗೆ ಪರಿಚಯ ಇಲ್ಲ ಹೇಳಿ. ಕನ್ನಡ ಚಕ್ರವರ್ತಿ ಸುದೀಪ್ ಅವರ ಮಕ್ಕಿ ಚಿತ್ರದಲ್ಲಿ ನಟನೆ ಮಾಡಿ ತನ್ನ ಅದೃಷ್ಟ ಬದಲಾಯಿಸಿಕೊಂಡ ನಟ. ಅದಾದ ನಂತರ ಅನೇಕ ಚಿತ್ರಗಳು ಬಿಡುಗಡೆ ಗೊಂಡು ಸೂಪರ್ ಹಿಟ್ ಕೂಡ ಆಗಿದೆ. ಅಲ್ಲದೆ ಕರ್ನಾಟಕದಲ್ಲೂ ಕೂಡ ಅನೇಕ ಅಭಿಮಾನಿಗಳನ್ನು ಪಡೆದಿದ್ದಾರೆ. ಇದೀಗ ಅವರ ಹೊಸ ಸಿನೆಮಾ ಬಿಡುಗಡೆ ಗೆ ತಯಾರಾಗಿದೆ. ಇದೆ ಸಮಯದಲ್ಲಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ನಾಣಿ ಅವರ ಅಂತೇ ಸುಂದರಣಿಕಿ ಅನ್ನುವ ಸಿನಿಮಾ ಬಿಡುಗಡೆ ಆಗುತ್ತಿದ್ದು ಅದನ್ನು ಕನ್ನಡದಲ್ಲಿ ಡಬ್ ಮಾಡುವ ಅವಶ್ಯಕತೆ ಇಲ್ಲ ಹಾಗೇನೇ ಅದನ್ನು ಕನ್ನಡಕ್ಕೆ ಡಬ್ ಮಾಡುವುದು ಇಲ್ಲ ಎಂದು ಹೇಳಿದ್ದಾರೆ. ಇದು ಕನ್ನಡಿಗರಿಗೆ ತುಂಬಾ ಬೇಸರವಾಗಿದ್ದು. ಅನೇಕರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆ ಈ ಡಬ್ ಬಗ್ಗೆ? ಇಲ್ಲಿದೆ ನೋಡಿ ನಾಣಿ ಅವರು ಕೊಟ್ಟ ವಿವರಣೆ.

“ಕನ್ನಡ ಪ್ರೇಕ್ಷಕರಿಗೆ ತೆಲುಗು ಚೆನ್ನಾಗಿಯೇ ಅರ್ಥವಾಗುತ್ತದೆ, ಕನ್ನಡ ಭಾಷೆಯಲ್ಲಿ ಸಿನೆಮಾ ಡಬ್ ಮಾಡಿ ಬಿಡುಗಡೆ ಮಾಡುವುದಿಲ್ಲ. ತೆಲುಗು ಭಾಷೆಯಲ್ಲಿಯೇ ಸಿನೆಮಾ ಇದ್ದಾರೆ ಅದು ಪರಿಪೂರ್ಣವಾಗಿ ಅರ್ಥ ಆಗುತ್ತದೆ. ಇದೆ ಕಾರಣಕ್ಕಾಗಿ ತೆಲುಗು ಭಾಷೆಯಲ್ಲಿ ಸಿನೆಮಾ ನೋಡಲಿ ಎಂದಿದ್ದಾರೆ. ತೆಲುಗು ಭಾಷೆಯಲ್ಲಿ ಸಿನೆಮಾ ನೋಡಿದರೆ ಅದನ್ನು ಆನಂದಿಸಲು ಸಾಧ್ಯವಾಗುತ್ತದೆ. ನಾವು ನಟರು ಯಾವಾಗಲು ನಮ್ಮ ದ್ವನಿಯೊಂದಿಗೆ ಚಿತ್ರಕ್ಕೆ ಅರ್ಥ ಕೊಟ್ಟಿರುತ್ತೇವೆ” ಎಂದು ಹೇಳಿದ್ದಾರೆ. ಇದು ವಿವಾದ ವಾಗುತ್ತಲೇ ಕ್ಷಮೆ ಕೇಳಿದ ನಾಣಿ ನನ್ನ ಭಾವನೆಯನ್ನು ಸರಿಯಾಗಿ ತಿಳಿಸದಿದ್ದಕ್ಕೆ ಕ್ಷಮೆಯಾಚಿಸುತ್ತೇನೆ, ಕನ್ನಡ ಚಿತ್ರರಂಗದ ಬಗ್ಗೆ ಮತ್ತು ಎಲ್ಲೇ ಮೀರಿದ ಯಶಸ್ಸಿನ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.