ನಿತ್ಯಾನಂದ ಜೀವನ ಆಧಾರಿತ ಅಂತಾರಾಷ್ಟ್ರೀಯ ಚಾನೆಲ್ ಅಲ್ಲಿ ಡಾಕ್ಯುಮೆಂಟರಿ ಬಿಡುಗಡೆ. ಎಲ್ಲಿ ಹೇಗೆ ನೋಡಬಹುದು?

277

ನಿತ್ಯಾನಂದ ಸ್ವಾಮೀಜಿ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕದಲ್ಲಿ ಹೈಡ್ರಾಮಾ ಮಾಡಿ ಪೊಲೀಸ್ ರಿಗೆ ಅಥಿತಿಯಾಗಿದ್ದ ವ್ಯಕ್ತಿ. ತನ್ನದೇ ಶೈಲಿಯಲ್ಲಿ ಹಿಂದೂಯಿಸಂ ಅನ್ನು ಪ್ರಚಾರ ಮಾಡುತ್ತಿದ್ದ ವ್ಯಕ್ತಿ. ಅಲ್ಲದೆ ಅನೇಕ ಕಾರಣಗಳಿಂದ ಸುದ್ದಿಯಾಗಿ ಇದೀಗ ತನ್ನದೇ ದೇಶ ಸ್ಥಾಪಿಸಿ ಅಲ್ಲಿಯೇ ಇದ್ದಾನೆ ಈತ. ಒಂದು ಐಲ್ಯಾಂಡ್ ಖರೀದಿಸಿ ಅದನ್ನು ತನ್ನ ಕೈಲಾಸ ಎಂದು ಹೇಳಿಕೊಂಡಿದ್ದ ಈ ಸ್ವಯಂ ಘೋಷಿತ ದೇವಮಾನವ. ಇವರ ಆಶ್ರಮದಲ್ಲಿ ಇರುವವರು ಅನೇಕರು ಹೊರದೇಶದ ಪ್ರಜೆಗಳು. ಇದೀಗ ಇವರ ಮೇಲಿನ ಡಾಕ್ಯುಮೆಂಟರಿ ಒಂದು ಬಿಡುಗಡೆ ಆಗಿದೆ.

OTT ಗಳಲ್ಲಿ ಒಂದಾದ ಡಿಸ್ಕವರಿ+ ಎನ್ನುವ ಚಾನೆಲ್ ಅಲ್ಲಿ ಇವರ ಬಗ್ಗೆ ಮೈ ಡಾಟರ್ ಜೊಯ್ನ್ಡ್ ಎ ಕಲ್ಟ್ ಎನ್ನುವ ಸಂಚಿಕೆ ಬರುತ್ತಿದೆ. ಇದು ಒಟ್ಟು ಮೂರೂ ಎಪಿಸೋಡ್ ಹೊಂದಿದೆ. ಇಂಗ್ಲಿಷ್, ಹಿಂದಿ, ಕನ್ನಡ,ತಮಿಳ್,ತೆಲುಗು ಹಾಗು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಿದೆ. ಈ ವೆಬ್ ಸೀರೀಸ್ ಅಲ್ಲಿ ನಿತ್ಯಾನಂದ ಹಾಗೇನೇ ಅವನ ಜೀವನ, ಆತನ ಮೇಲಿನ ಆರೋಪಗಳು ಸೇರಿದಂತೆ ತುಂಬಾ ಸೂಕ್ಷ್ಮ ವಿಷಯಗಳನ್ನು ಕೂಡ ಇದರಲ್ಲಿ ಸೇರಿಸಲಾಗಿದೆ ಅಂತೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗೇನೇ ಇದರ ಬಗೆಗಿನ ಪರ ಹಾಗು ವಿರೋಧದ ಚರ್ಚೆಗಳು ಪ್ರಾರಂಭವಾಗಿದೆ.

ಈಗಲೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಇವರ ಇಂಗ್ಲಿಷ್ ಪ್ರವಚನಗಳು ಬರುತ್ತಲೇ ಇದೆ. ಹಾಗೇನೇ ಇವರ ಕೈಲಾಸಕ್ಕೆ ಉಚಿತ ಟಿಕೆಟ್ ಕೂಡ ಇಟ್ಟಿದ್ದ, ಅಲ್ಲದೆ ಅಲ್ಲಿನ ಕರೆನ್ಸಿ ಕೂಡ ತನಗೆ ಬೇಕಾದಂತೆ ಬದಲಾವಣೆ ಮಾಡಿದ್ದ. ಇದೀಗ ಇವರ ಮೇಲೆ ಒಂದು ಡಾಕ್ಯುಮೆಂಟರಿ ಕೂಡ ಬಿಡುಗಡೆ ಆಗಿದೆ. ಇದನ್ನು ನೀವು ಮೇಲೆ ಹೇಳಿದಂತೆ ಡಿಸ್ಕವರಿ + ಅಲ್ಲಿ ನೋಡಬಹುದಾಗಿದೆ. ಹಾಗೇನೇ ಇದಕ್ಕೆ ನೀವು ಪ್ಲೇ ಸ್ಟೋರ್ ಇಂದ ಈ ಡಿಸ್ಕವರಿ+ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ತಿಂಗಳಿಗೆ ೧೯೯ ರೂಪಾಯಿ ಕಟ್ಟಿ ಚಂದಾದಾರರಾಗಬೇಕಾಗುತ್ತದೆ. ಇಲ್ಲದೆ ಹೋದರೆ ವಾರ್ಷಿಕವಾಗಿ ೩೯೯ ರೂಪಾಯಿ ಕಟ್ಟಿ ಚಂದಾದಾರ ಆಗಬಹುದಾಗಿದೆ.

Leave A Reply

Your email address will not be published.