ಪ್ರಭಾಸ್ KGF Chapter 3 ರಲ್ಲಿ ಯಶ್ ಜೊತೆ ಕಾಣಿಸಿಕೊಂಡರು ಅಚ್ಚರಿ ಪಡಬೇಡಿ. ಮೂರನೇ ಭಾಗದ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು.

845

KGF ಚಾಪ್ಟರ್ ೨ ರ ಕೊನೆಯಲ್ಲಿ ಮೂರನೇ ಭಾಗ ದ ಬಗ್ಗೆ ಸುಳಿವು ನೀಡಿ ಬಿಟ್ಟಿದ್ದರು ಪ್ರಶಾಂತ್ ನೀಲ್. ಇದು ಯಶ್ ರ ಸಿನೆಮಾ ನೋಡಿದ ನಂತರ ಕ್ರೇಜ್ ಹಾಗು ನಿರೀಕ್ಷೆ ಹೆಚ್ಚಾಗಿದೆ. ಇನ್ನು ಇದರ ಬಗ್ಗೆ ಅನೇಕ ದಿನ ಅನೇಕ ಲೇಖನೆಗಳು ಅಪ್ಡೇಟ್ ಗಳು ವಿವಿಧ ವೆಬ್ಸೈಟ್ ಹಾಗು ನ್ಯೂಸ್ ಪೋರ್ಟಲ್ ಗಳಲ್ಲಿ ಬರುತ್ತಲೇ ಇದ್ದವು. ಇದೀಗ ಇದಕ್ಕೆಲ್ಲ ತೆರೆ ಬಿದ್ದಿದೆ. KGF ಮೂರನೇ ಭಾಗದ ಬಗ್ಗೆ ಸ್ವತಃ ನಿರ್ಮಾಪಕ ವಿಜಯ್ ಕಿರಾಗಂದೂರ್ ಅವರೇ ಮಾಹಿತಿ ನೀಡಿದ್ದಾರೆ.

ಹೊಂಬಾಳೆ ಫಿಲಂಸ್ ಹಾಲಿವುಡ್ ನ ಮಾರ್ವೆಲ್ ತರಹದ ಒಂದು ಸೂಪರ್ ಹಿಟ್ ಫ್ರಾಂಚೈಸ್ ನಿರ್ಮಾಣ ಮಾಡಲು ಯೋಚಿಸುತ್ತಿದ್ದರಂತೆ. ದೈನಿಕ್ ಭಾಸ್ಕರ್ ಎನ್ನುವ ಖಾಸಗಿ ನ್ಯೂಸ್ ಸಂದರ್ಶನದಲ್ಲಿ ಮಾತಾಡಿದ ವಿಜಯ್ ಅವರು ಒಕ್ಟೋಬರ್ ನಂತರ KGF 3 ಚಿತ್ರೀಕರಣ ಶುರುವಾಗಲಿದೆ ಅಂತೇ. ಹಾಗೇನೇ ೨೦೨೪ ರಲ್ಲಿ ಈ ಸಿನೆಮಾ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಏಪ್ರಿಲ್ ೧೪ ರಂದು ಬಿಡುಗಡೆ ಆದ KGF ಚಾಪ್ಟರ್ ೨ ವಿಶ್ವದಾದ್ಯಂತೆ ದೊಡ್ಡ ಸಂಚಲನ ಸೃಷ್ಟಿಸಿತ್ತು. ೧೦೦೦ ಕೋಟಿ ಗು ಅಧಿಕ ಕಲೆಕ್ಷನ್ ಮಾಡಿದ ಕನ್ನಡದ ಮೊದಲ ಸಿನೆಮಾ ಎನ್ನುವ ಖ್ಯಾತಿಗೂ ಒಳಗಾಗಿದೆ.

ಹಿಂದಿಯಲ್ಲಿ ೪೦೦ ಕೋಟಿ ದಾಟಿದ ಎರಡನೇ ಸಿನೆಮಾ KGF Chapter ೨ ಆಗಿದೆ. ಇನ್ನು ಈ ಸಂತಸದಲ್ಲಿ ಇರುವ ನಿರ್ಮಾಪಕರು ಮೂರನೇ ಭಾಗ ಬಂದೆ ಬರುತ್ತದೆ ಎಂದು ಹೇಳಿದ್ದಾರೆ. ಸಧ್ಯ ಪ್ರಶಾಂತ್ ನೀಲ್ ಅವರು ತೆಲುಗಿನ ಸ್ಟಾರ್ ಪ್ರಭಾಸ್ ಅವರ ಜೊತೆ ಸಾಲಾರ್ ಚಿತ್ರದಲ್ಲಿ ಬ್ಯುಸಿ ಆಗಿದ್ದು ಈಗಾಗಲೇ ೩೦-೪೦% ರಷ್ಟು ಶೂಟಿಂಗ್ ಮುಗಿದಿದೆ ಅಂತೇ. ಅಕ್ಟೋಬರ್ ನಂತರ KGF ೩ ನೇ ಭಾಗ ಶೂಟಿಂಗ್ ಶುರುವಾಗಲಿದೆ ಎಂದು ಹೇಳಿದ್ದಾರೆ ನಿರ್ದೇಶಕರು. ಅನೇಕ ಅಭಿಮಾನಿಗಳು ಸಾಲಾರ್ ಚಿತ್ರವನ್ನೇ ಈ KGF 3 ನೇ ಭಾಗ ಎಂದು ಹೇಳಿದ್ದರು.

ಈಗ ಅದಕ್ಕೂ ಸ್ಪಷ್ಟನೆ ನೀಡಿದ ವಿಜಯ್ ಕಿರಗಂದೂರು ನಾವು ಮಾರ್ವೆಲ್ ರೀತಿಯ ವಿಶ್ವವನ್ನು ರಚಿಸಲಿದ್ದೇವೆ. ಸ್ಪೈಡರ್ ಮ್ಯಾನ್ ಹಾಗು ಡಾಕ್ಟರ್ ಸ್ಟ್ರೇಂಜ್ ಸಿನೆಮಾದಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳು ಬಂದಿದ್ದವು. ನಾವು ಕೂಡ ಅದೇ ರೀತಿ ಮಾಡಬೇಕೆಂದಿದ್ದೇವೆ. ಇದರಿಂದ ಹೆಚ್ಚು ಜನರನ್ನು ನಾವು ತಲುಪಬಹುದಾಗಿದೆ ಎಂದು ಹೇಳಿದ್ದಾರೆ. ಇನ್ನು ನಾವು ಮೇಲೆ ಹೇಳಿದಂತೆ ಇದೊಂದು ಮಾರ್ವೆಲ್ ರೀತಿ ಇರಬಹುದು ಎಂದು ಸೂಚನೆ ಕೊಟ್ಟಿದಾರೆ. ಆದ್ದರಿಂದ KGF 3 ನೇ ಸಿನೆಮಾದಲ್ಲಿ ಪ್ರಭಾಸ್ ಕೂಡ ಕಾಣಿಸಿಕೊಳ್ಳಬಹುದು ಹಾಗೇನೇ ಸಾಲಾರ್ ಅಲ್ಲಿ ಯಶ್ ಕೂಡ ಕಾಣಿಸಿಕೊಳ್ಳಬಹುದು ಎಂದು ಇದೀಗ ಗುಸು ಗುಸು ಶುರುವಾಗಿದೆ.

Leave A Reply

Your email address will not be published.