ಪ್ರೀತಿಸಿ ಮದುವೆಯಾಗಿದ್ದ ರಣವೀರ್ ಸಿಂಗ್ ಹಾಗೂ ದೀಪಿಕಾ ಮದ್ಯೆ ಎಲ್ಲವೂ ಸರಿ ಇಲ್ಲವೇ?? ಬಿರುಕು ಮೂಡಿತೇ?? ಎಲ್ಲದಕ್ಕೂ ಕಾರಣವಾದ ಅದೊಂದು ಟ್ವೀಟ್.

141

ಬಾಲಿವುಡ್ ನಲ್ಲಿ ಎಲ್ಲರೂ ಇಷ್ಟಪಡುವ ಸೆಲೆಬ್ರಿಟಿ ಕಪಲ್ ಗಳಲ್ಲಿ ಒಂದು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್. ಒಬ್ಬರನ್ನೊಬ್ಬರು ಬಹಳ ಪ್ರೀತಿಸಿ ಮದುವೆಯಾದ ಈ ಜೋಡಿ, ಸುಖವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಇತ್ತೀಚೆಗೆ ಇದ್ದಕ್ಕಿದ್ದ ಹಾಗೆ ದೀಪಿಕಾ ಪಡುಕೋಣೆ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ಭೇಟಿ ನೀಡಿದ ವಿಷಯ ಎಲ್ಲರಿಗು ಗೊತ್ತೇ ಇದೆ. ಇದರಿಂದಲೇ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು, ಆದರೆ ಈಗ ದೀಪಿಕಾ ಅವರ ದಾಂಪತ್ಯ ಜೀವನದ ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ದೀಪಿಕಾ ಹಾಗು ರಣವೀರ್ ಜೋಡಿಯ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಈ ವಿಚಾರವನ್ನು ವಿದೇಶಿ ಸೆನ್ಸಾರ್ ಬೋರ್ಡ್ ಸದಸ್ಯ ಆಗಿರುವ ಉಮೈರ್ ಸಂಧು ಅವರು ಬಹಿರಂಗಪಡಿಸಿದ್ದಾರೆ, “ಬ್ರೇಕಿಂಗ್.. ರಣವೀರ್ ಸಿಂಗ್ ಮತ್ತು ದೀಪಿಕಾ ನಡುವೆ ಎಲ್ಲವು ಸರಿಯಿಲ್ಲ..”ಎಂದು ಉಮೈರ್ ಟ್ವೀಟ್ ಮಾಡಿದ್ದು, ಇದೀಗ ಈ ವಿಚಾರ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ. ದೀಪಿಕಾ ಹಾಗೂ ರಣವೀರ್ ಅಭಿಮಾನಿಗಳಿಗೆ ಈ ವಿಚಾರ ದೊಡ್ಡ ಶಾಕ್ ನೀಡಿದೆ. ಈ ಜೋಡಿ ಮೊದಲು ಭೇಟಿಯಾಗಿದ್ದು 2012ರಲ್ಲಿ.

6 ವರ್ಷಗಳ ಕಾಲ ಡೇಟ್ ಮಾಡಿ, 2018ರಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರು ಜೊತೆಯಾಗಿ ರಾಮ್ ಲೀಲಾ, ಪದ್ಮಾವತ್ ಹಾಗೂ ಬಾಜಿರಾವ್ ಮಸ್ತಾನಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಜೋಡಿ ಬಹಳ ಅನ್ಯೋನ್ಯವಾಗಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು, ಆದರೆ ಇದೀಗ ಬಂದಿರುವ ಈ ಸುದ್ದಿ, ನಂಬಲು ಕಷ್ಟ ಎನ್ನಿಸುವ ಹಾಗೆ ಮಾಡಿದೆ. ಇತ್ತೀಚೆಗೆ ರಣವೀರ್ ಸಿಂಗ್ ಅವರಿಗೆ, ಫಿಲ್ಮ್ ಫೇರ್ ಅವಾರ್ಡ್ ಬಂದಿತು, ಸಮಾರಂಭದಲ್ಲಿ ದೀಪಿಕಾ ಅವರನ್ನು ಕರೆದು, ಮೆಚ್ಚುಗೆಯ ಮಾತುಗಳನ್ನಾಡಿ, ಅವರನ್ನು ಹೊಗಳಿದರು ಸಹ ದೀಪಿಕಾ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ಇದು ಕೂಡ ಚರ್ಚೆಗೆ ಕಾರಣವಾಗಿದೆ.

Leave A Reply

Your email address will not be published.