ಬಟ್ಟೆಗಳ ವಿಚಾರಕ್ಕಾಗಿ ನಾಗ ಚೈತನ್ಯಗೆ ವಿಚ್ಚೇದನ ನೀಡಿದರೆ ಸಮಂತಾ: ಹೊಸ ಆಯಾಮದಲ್ಲಿ ಅಸಲಿ ಕಾರಣ ಬಯಲು??
ಟಾಲಿವುಡ್ ನ ರೀಲ್ ಕಂ ರಿಯಲ್ ಜೋಡಿಗಳಲ್ಲಿ ಕ್ಯೂಟ್ ಜೋಡಿಯಾಗಿದ್ದ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ಜೊತೆ ಜೊತೆಯಾಗಿಯೇ ಸಿನಿಮಾ ರಂಗಕ್ಕೆ ಬಂದು ಪ್ರೀತಿಯ ಲೋಕಕ್ಕೆ ಇಳಿದು, ಬಹಳ ಸಮಯ ಪ್ರೀತಿಸಿ ಮದುವೆ ಮಾಡಿಕೊಂಡರು. ಸಮಂತಾ ಅಕ್ಕಿನೇನಿ ಮತ್ತು ಚೈತನ್ಯ ಸಮಂತಾ ನಡುವೆ ಬಿರುಕು ಮೂಡಿದೆಯೇ ಎಂಬ ಪ್ರಶ್ನೆ ಕೆಲ ತಿಂಗಳಿಂದ ಎಲ್ಲರಿಗೂ ಕಾಡಿತ್ತು. ನಂತರ ಅವರು ತಾವು ಬೇರೆಯಾಗುತ್ತಿರುವ ಸುದ್ದಿ ಹಂಚಿಕೊಂಡರು. ಆ ನಂತರ ಅವರ ವಿಚ್ಚೇದನಕ್ಕೆ ದಿನವೂ ಒಂದೊಂದು ಕಾರಣಗಳು ಕೇಳಬರತೊಡಗಿದವು. ಇದೀಗ ಅವರು ತೊಡುತ್ತಿದ್ದ ಬಟ್ಟೆಗಳು ನಾಗಚೈತನ್ಯ ಅವರಿಗೆ ಇಷ್ಟವಾಗುತ್ತಿರಲಿಲ್ಲ, ಜೊತೆಗೆ ಅವರು ಚಿತ್ರಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದದ್ದು ವಿಚ್ಚೇದನಕ್ಕೆ ಕಾರಣವಾಗಿತ್ತು ಎನ್ನಲಾಗುತ್ತಿದೆ. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್‌ನಲ್ಲಿ ಸಮಂತಾ ಅವರು ಡಿಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡರೂ ಕೂಡ, ಸಾಕಷ್ಟು ಬೋಲ್ಡ್ ದೃಶ್ಯಗಳಲ್ಲಿ ಅವರು ಭಾಗಿಯಾಗಿದ್ದರು. ಇದೇ ನಾಗ ಚೈತನ್ಯ ಹಾಗೂ ಸಮಂತಾ ಮನಸ್ತಾಪಕ್ಕೆ ಕಾರಣವಾಗಿದೆಯಾ ಎಂಬ ಮಾತು ಕೂಡ ಕೇಳಿಬರುತ್ತಿದೆ.
‘ದಿ ಫ್ಯಾಮಿಲಿ ಮ್ಯಾನ್ 2’ ರಿಲೀಸ್ ಆದನಂತರ ಸಮಂತಾ ನಟನೆಗೆ ದೊಡ್ಡ ಮಟ್ಟದಲ್ಲಿ ಚಪ್ಪಾಳೆ ಕೇಳಿಬಂದರೂ ಕೂಡ, ನಾಗ ಚೈತನ್ಯ ಮಾತ್ರ ಪತ್ನಿಯ ನಟನೆ ಬಗ್ಗೆ ಸಾರ್ವಜನಿಕವಾಗಿ ಎಲ್ಲಿಯೂ ಮಾತನಾಡಿರಲಿಲ್ಲ. ಸಮಂತಾ ನಟನೆಯನ್ನು ಎಷ್ಟು ಹೊಗಳಿ ಕೊಂಡಾಡಿದರೋ ಅಷ್ಟೇ ಬೋಲ್ಡ್ ದೃಶ್ಯದ ಬಗ್ಗೆಯೂ ಚರ್ಚೆಯಾಯ್ತು. ಸಮಂತಾ ಅವರ ಪಾತ್ರಗಳ ಆಯ್ಕೆಯೇ ನಾಗಚೈತನ್ಯರಿಂದ ವಿಚ್ಛೇದನ ಪಡೆದುಕೊಳ್ಳಲು ಕಾರಣವಾಯ್ತೇ ಎಂಬ ಸಂದೇಹ ಆಗಲೇ ಬಂದಿತ್ತು. ಸಮಂತಾ ಹಾಗೂ ನಾಗಚೈತನ್ಯ ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎಂದಾಗಲೇ ಇಬ್ಬರೂ ದೂರ ದೂರ ಆಗಲು ಕಾರಣ ಏನಿರಬಹುದು ಎಂದು ಅನೇಕರು ಏನೇನೋ ಮಾತನಾಡಿದ್ದರು. ಅವುಗಳಲ್ಲಿ ರಾಜಿ ಪಾತ್ರವೂ ಒಂದು. ಈಗ ನಾಗಚೈತನ್ಯ ಪಾತ್ರಗಳ ಬಗ್ಗೆ ಅಂದು ಮಾತನಾಡಿದ್ದಕ್ಕೂ, ಸಮಂತಾ ಆಯ್ಕೆ ಮಾಡಿಕೊಂಡ ಪಾತ್ರಕ್ಕೂ ಸಂಬಂಧವನ್ನು ಕಲ್ಪಿಸಲಾಗುತ್ತಿದೆ. ಸಮಂತಾ ಅವರು ಆಯ್ಕೆ ಮಾಡಿಕೊಂಡ ಪಾತ್ರದಿಂದಲೇ ವಿಚ್ಛೇದನ ಆಯ್ತು ಎನ್ನಲಾಗಿದೆ. ಈ ಬಗ್ಗೆ ಸಮಂತಾ ಆಗಲೀ, ನಾಗಚೈತನ್ಯ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇತ್ತೀಚಿಗಷ್ಟೆ ಸಮಂತಾ ವಿಚ್ಚೇದನ ಪಡೆದುಕೊಳ್ಳಲು ಕೆಲವೊಂದು ಕಾರಣಗಳು ಇವೇ ಎಂದು ಹೇಳಲಾಗುತ್ತಿದೆ. ಸಮಂತಾ ನಾಗಚೈತನ್ಯ ರವರ ತಾಯಿ ಲಕ್ಷ್ಮೀ ದಗ್ಗುಬಾಟಿಯವರನ್ನು ಭೇಟಿಯಾಗಿದ್ದರಂತೆ. ವಿಚ್ಚೇದನದಕ್ಕೆ ಕೆಲವೊಂದು ಕಾರಣಗಳನ್ನು ಬಿಚ್ಚಿಟ್ಟಿದ್ದಾರಂತೆ. ಲಕ್ಷ್ಮೀ ದಗ್ಗುಬಾಟಿಯವರನ್ನು ಭೇಟಿಯಾದ ಸಮಂತಾ ನಿಮ್ಮ ಮಗ ನನಗೆ ತುಂಬಾ ಹಿಂಸೆ ಕೊಡುತ್ತಿದ್ದರು. ಮದುವೆಯಾದ ಬಳಿಕ ತುಂಬಾನೆ ಬದಲಾಗಿದ್ದಾರೆ. ನನ್ನನ್ನು ತುಂಬಾ ಕಂಟ್ರೋಲ್ ಮಾಡುತ್ತಿದ್ದರು. ಮದುವೆಗೆ ಮುಂಚೆ ಇದ್ದಂಗೆ ಮದುವೆಯಾದ ಬಳಿಕ ನನ್ನ ಬಳಿ ನಡೆದುಕೊಳ್ಳುತ್ತಿರಲಿಲ್ಲ. ನನಗೆ ಇಷ್ಟವಾದ ಬಟ್ಟೆಯನ್ನು ಸಹ ಹಾಕಿಕೊಳ್ಳಲು ಬಿಡುತ್ತಿರಲಿಲ್ಲ. ಜೊತೆಗೆ ಅಂತಹವರ ಜೊತೆ ಮಾತನಾಡಬೇಡ ಎಂದು ನನ್ನನ್ನು ಕಂಟ್ರೋಲ್ ಮಾಡುತ್ತಿದ್ದರು. ನನ್ನ ಸ್ವತಂತ್ರಕ್ಕೆ ದಕ್ಕೆ ಬಂತು. ನಾನು ಸುಮಾರು ದಿನಗಳ ಕಾಲ ಅವರ ಜೊತೆ ಮಾತನಾಡದೇ ಇದ್ದರೂ ಸಹ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಜೊತೆಗೆ ಅಕ್ಕಿನೇನಿ ಕುಟುಂಬ ಸಹ ಅವರ ಪರವಾಗಿಯೇ ಇತ್ತು. ಈ ಎಲ್ಲಾ ಕಾರಣಗಳಿಂದ ನಾನು ವಿಚ್ಚೇದನ ಕೊಟ್ಟೆ ಎಂದು ಹೇಳಿದ್ದಾರಂತೆ. ಇನ್ನೂ ಇದು ಎಷ್ಟರ ಮಟ್ಟಿಗೆ ನಿಜವೋ ತಿಳಿಯದು. ಆದರೆ ಈ ಸುದ್ದಿ ಇದೀಗ ಹಾಟ್ ಟಾಪಿಕ್ ಆಗಿ ಹರಿದಾಡುತ್ತಿದೆ.