ಬಾಲಿವುಡ್ ಇಂದ ನನ್ನನ್ನು ನಿಭಾಯಿಸಲು ಸಾಧ್ಯವಾಗಲ್ಲ ಎಂದಿದ್ದ ಮಹೇಶ್ ಬಾಬು. ಆದರೆ ಪಾನ್ ಮಸಾಲದಿಂದ ನಿಭಾಯಿಸಲು ಆಗುತ್ತೆ ಎಂದ ನೆಟ್ಟಿಗರು.

810

ಮಹೇಶ್ ಬಾಬು ತೆಲುಗು ಚಿತ್ರರಂಗದ ಒಬ್ಬ ದೊಡ್ಡ ಸ್ಟಾರ್. ತಮ್ಮ ಮಾಸ್ ಲುಕ್ ಹಾಗು ಆಕಾಶದಲ್ಲಿ ವ್ಯಕ್ತಿಗಳನ್ನು ಹಾರಿಸಿ ಯಾವುದೇ ಲಾಜಿಕ್ ಇಲ್ಲದೆ ಫೈಟ್ ಸೀನ್ ಮಾಡುವ ನಟ. ತೆಲುಗಿನ ಎಲ್ಲ ಸಿನೆಮಾಗಳ ಕಥೆಗಳು ನೀವು ನೋಡಿದರೆ ಒಂದೇ ರೀತಿ ಇರುತ್ತದೆ. ಆದರೆ ನಟರು ಬೇರೆ ಬೇರೆ ಆಗಿರುತ್ತಾರೆ ಇದು ಬಹಳ ಜನರ ಹೇಳುವುದನ್ನು ಕೇಳಿರುತ್ತೀರಾ. ಮೊನ್ನೆ ಮೇಜರ್ ಸಿನೆಮಾ ಟೈಲರ್ ಬಿಡುಗಡೆ ವೇಳೆ ಮಾತಾಡಿದ ಮಹೇಶ್ ಬಾಬು ಹಿಂದಿ ಸಿನೆಮಾಗೆ ಹೋಗುವುದಿಲ್ಲ, ಬಾಲಿವುಡ್ ಮಂದಿ ನನ್ನನ್ನು ನಿಭಾಯಿಸಲು ಸಾಧ್ಯವಿಲ್ಲ.

ಅಂತಹ ಚಿತ್ರರಂಗಕ್ಕೆ ಹೋಗಿ ನಾನು ಸಮಯ ವ್ಯರ್ಥ ಮಾಡುವುದಿಲ್ಲ ಎಂದು ವಿವಾದ ಸೃಷ್ಟಿ ಮಾಡಿದ್ದರು. ನಂತರ ನಾನು ಸಿನಿಮಾನ ಪ್ರೀತಿಸುವೆ, ಎಲ್ಲ ಭಾಷೆಯನ್ನು ಗೌರವಿಸುವೆ, ನಾನು ಎಲ್ಲಿ ಕೆಲಸ ಮಾಡುತ್ತಿದ್ದೆನೋ ಅಲ್ಲೇ ಆರಾಮವಾಗಿದ್ದೇನೆ ಎಂದಿದ್ದಾರೆ. ಮಹೇಶ್ ಬಾಬು ಅವರ ಈ ಹಿಂದಿ ಹೇಳಿಕೆಗೆ ತೆಲುಗಿನಲ್ಲಿ ಸೇರಿದಂತೆ ದೇಶದೆಲ್ಲೆಡೆ ಅನೇಕ ವಿರೋಧಗಳು ವ್ಯಕ್ತವಾಗಿತ್ತು. ಅನೇಕ ಟ್ರೊಲ್ ಗಳು ಆಗಿದ್ದವು. ಅದರ ಜೊತೆಗೆ ಇತ್ತೀಚಿನ ಹೇಳಿಕೆ ಹಾಗು ಹಿಂದೆ ಮಾಡಿದ ಒಂದು ಜಾಹಿರಾತು ಮುನ್ನೆಲೆಗೆ ಬಂದಿದೆ.

pic times of india

ಇದರಿಂದ ಇವರ ಮೇಲೆ ಮಾಡುವ ಟ್ರೊಲ್ ಸಂಖ್ಯೆ ಜಾಸ್ತಿ ಆಗಿದೆ. ಹಾಗೇನೇ ಅಕ್ಷಯ್ ಕುಮಾರ್ ಮೇಲೆ ಯಾವ ಕಾರಣಕ್ಕೆ ಟ್ರೊಲ್ ಆಗಿತ್ತೋ ಅದೇ ಕಾರಣ ಇದೀಗ ಮಹೇಶ್ ಬಾಬು ಕೂಡ ಟ್ರೊಲ್ ಆಗುತ್ತಿದ್ದಾರೆ. ಯಾವ ಜಾಹಿರಾತು ಎಂದು ನೀವು ಯೋಚಿಸುತ್ತಿದ್ದರೆ ಅದು ಬೇರೆ ಯಾವುದು ಕೂಡ ಅಲ್ಲ ಪಾನ್ ಮಸಾಲಾ ಜಾಹಿರಾತು. ನಟ ಮಹೇಶ್ ಬಾಬು ಹಿಂದೆ ಪಾನ್ ಮಸಾಲಾ ಬ್ರಾಂಡ್ ಒಂದರ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದೆ ಕಾರಣಕ್ಕೆ ಇವರು ಟ್ರೊಲ್ ಆಗಿದ್ದಾರೆ. ಆರೋಗ್ಯಕ್ಕೆ ಒಳ್ಳೆಯದಲ್ಲಾದ ಪಾನ್ ಮಸಾಲಾ ಜಾಹಿರಾತು ಮಾಡಿದಕ್ಕೆ ಹಿಗ್ಗಾಮುಗ್ಗಾ ನೆಟ್ಟಿಗರು ಟ್ರೊಲ್ ಮಾಡಿದ್ದಾರೆ. ಇದೆ ರೀತಿಯ ಟ್ರೊಲ್ ಸ್ವಲ್ಪ ದಿನಗಳ ಹಿಂದೆ ಅಕ್ಷಯ್ ಕುಮಾರ್ ಗು ಕೂಡ ಆಗಿತ್ತು.

Leave A Reply

Your email address will not be published.