ಬಿಗ್ ಬಾಸ್ ಓಟಿಟಿ ನಲ್ಲಿ ಕೇವಲ ಒಂದು ದಿನ ಕಾಣಿಸಿಕೊಳ್ಳಲು ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ಕೇಳಿದರೆ ತಲೆ ತಿರುಗುತ್ತದೆ. ಎಷ್ಟು ಅಂತೇ ಗೊತ್ತೇ??

176

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದೆ ಆಗಸ್ಟ್ 6 ರಿಂದ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಇನ್ನು ಈ ಕಾರ್ಯಕ್ರಮದ ಕುರಿತಂತೆ ಹಲವಾರು ವಿವರಗಳನ್ನು ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್ ರವರು ನೀಡಿದ್ದಾರೆ. ಹೌದು ಗೆಳೆಯರೇ, ಇದೇ ಆಗಸ್ಟ್ ಆರರಿಂದ ಪ್ರಾರಂಭವಾಗಲಿರುವ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮವು ಬರೋಬ್ಬರಿ 42 ದಿನಗಳ ಕಾಲ ನಡೆಯಲಿದ್ದು ಇಲ್ಲಿ ಒಬ್ಬ ವಿಜೇತ ಇರುವುದಿಲ್ಲ ಬದಲಾಗಿ ಹಲವಾರು ಜನ ವಿನ್ನರ್ಸ್ ಇರುತ್ತಾರೆ ಎಂಬುದಾಗಿ ಕೂಡ ಸ್ಪಷ್ಟೀಕರಣ ನೀಡಿದ್ದಾರೆ.

ಹಿಂದಿ ಹಾಗೂ ತೆಲುಗಿನಲ್ಲಿ ಈಗಾಗಲೇ ಪ್ರಸಾರ ಕಂಡು ಯಶಸ್ಸನ್ನು ಕಂಡಿರುವ ಈ ಮಾದರಿಯ ಬಿಗ್ ಬಾಸ್ ಕನ್ನಡಕ್ಕೆ ಇದೇ ಮೊದಲ ಬಾರಿ ಹಾಗೂ ಇದನ್ನು ನಿರೂಪಕರಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಡೆಸಿಕೊಡಲಿದ್ದಾರೆ ವಾರಾಂತ್ಯದಲ್ಲಿ 2 ದಿನಗಳು ಕೂಡ ಸಾಮಾನ್ಯ ಬಿಗ್ ಬಾಸ್ ನಲ್ಲಿ ಬರುವಂತೆ ಬರಲಿದ್ದಾರೆ ಎಂಬುದಾಗಿ ಹೇಳಿದ್ದಾರೆ. 24 ಗಂಟೆಗಳ ಪ್ರಸಾರವನ್ನು ಕಾಣಲಿರುವ ಈ ಬಿಗ್ ಬಾಸ್ ಅಪ್ಲಿಕೇಶನ್ ನಲ್ಲಿ ಕಾಣಿಸುವುದಕ್ಕಿಂತ ಎರಡು ನಿಮಿಷ ತಡವಾಗಿ ಅಷ್ಟೇ ಕಾಣಿಸಲಿದೆ ಎಂಬುದಾಗಿ ಹೇಳಿರುವ ಪರಮೇಶ್ವರ್ ಗುಂಡ್ಕಲ್ ಇದೊಂದು ಚಾಲೆಂಜಿಂಗ್ ಪರಿಸ್ಥಿತಿಯಾಗಿದೆ.

ಆದರೂ ಕೂಡ ಈ ಚಾಲೆಂಜ್ ಅನ್ನು ಸ್ವೀಕರಿಸಿ ನಾವು ಪ್ರೇಕ್ಷಕರಿಗೆ ಈ ಕಾರ್ಯಕ್ರಮವನ್ನು ಮುಟ್ಟಿಸುವ ಪ್ರಯತ್ನವನ್ನು ಮಾಡುತ್ತೇವೆ ಎಂಬುದಾಗಿ ಹೇಳಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಿರೂಪಕನಾಗಿ ತೆಗೆದುಕೊಳ್ಳಲಿರುವ ಸಂಭಾವನೆ ತಿಳಿದು ಬಂದಿದ್ದು ದಕ್ಷಿಣ ಭಾರತ ಬಿಗ್ ಬಾಸ್ ಇತಿಹಾಸದಲ್ಲಿ ಅತ್ಯಂತ ಅಧಿಕ ಎಂಬುದಾಗಿ ಕೇಳಿ ಬರುತ್ತಿದೆ. ಹೌದು ಗೆಳೆಯರೇ ಒಂದು ಎಪಿಸೋಡ್ ಚಿತ್ರೀಕರಣಕ್ಕಾಗಿ ಬರೋಬ್ಬರಿ ಆರು ಕೋಟಿ ರೂಪಾಯಿ ಸಂಭಾವನೆಯನ್ನು ಕಿಚ್ಚ ಸುದೀಪ್ ರವರು ಪಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಹೊಸ ಬಿಗ್ ಬಾಸ್ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.