ಬಿಜೆಪಿಯ ಪರೇಶ್ ರಾವಲ್ ಅವರ ಪತ್ನಿ ಮಿಸ್ ಇಂಡಿಯಾ ಆಗಿದ್ದ ವಿಷಯ ನಿಮಗೆ ಗೊತ್ತೆ? ಅವರಿಬ್ಬರ ಮದುವೆಯ ಹಿಂದಿನ ರೋಚಕ ಕಥೆ ಇಲ್ಲಿದೆ ನೋಡಿ.

254

ಪರೇಶ್ ರಾವಲ್ ತಮ್ಮ ನಟನೆಯಿಂದ ಇಡೀ ಭಾರತದ ಗಮನ ಸೆಳೆದ ನಟ. ಹೀರಾ ಪೆರಿ ಎಂಬ ಹಿಂದಿ ಚಲನಚಿತ್ರ ಇಂದಿಗೂ ನಂಬರ್ ೧. ಸ್ಥಾನದಲ್ಲಿ ಇದೆ ಅಂದರೆ ಪರೇಶ್ ರಾವಲ್ ಅವರ ನಟನೆ ಯು ಒಂದು ಕಾರಣ ಎನ್ನಬಹುದು. ಅದಲ್ಲದೆ ಇತ್ತೀಚಿಗೆ ೩ ವರ್ಷದ ಹಿಂದೆ ಬಂದ ಒಹ್ ಮೈ ಗಾಡ್ ಎನ್ನುವ ಚಲನಚಿತ್ರ ಸೂಪರ್ ಹಿಟ್ ಎನಿಸಿಕೊಂಡಿತು. ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಪರೇಶ್ ರಾವಲ್ ಒಬ್ಬ ನಟ ಮಾತ್ರವಲ್ಲದೆ ಬಿಜೆಪಿ ಯಾ ಒಬ್ಬ ಸಂಸದ ಕೂಡ ಆಗಿದ್ದಾರೆ.

ಪರೇಶ್ ರಾವಲ್ ಬಗ್ಗೆ ಪರಿಚಯ ಇಷಾಗಿದ್ದರೆ ಅವರ ಪತ್ನಿ ಮಿಸ್ ಇಂಡಿಯಾ ಆಗಿದ್ದರು ಎನ್ನುವ ವಿಷಯ ನಿಮಗೆ ತಿಳಿದಿತ್ತೇ? ಹೌದು ಇಂದು ಪರೇಶ್ ರಾವಲ್ ಪತ್ನಿ ಬಗ್ಗೆ ಹೇಳಲಿದ್ದೇವೆ. ಪರೇಶ್ ರಾವಲ್ ಅವರ ಪತ್ನಿ ಒಬ್ಬ ನಟಿಯೂ ಹೌದು. ತುಂಬಾ ಚಲನಚಿತ್ರದಲ್ಲಿ‌ನಟನೆ ಕೂಡಾ ಮಾಡಿದ್ದಾರೆ. ನಾರಮ ಗರಮ್, ನಾಕುದಾ ಇವು ಅವರ ನಟಿಸಿದ ಚಲನಚಿತ್ರದ ಹೆಸರುಗಳು. ಇವರು ಚಲನಚಿತ್ರಕ್ಕಿಂತ ಕಿರುತೆರೆಯಲ್ಲಿ‌ ನಟಿಸಿದ ಒಂದು ದಾರವಾಹಿ ಇಂದು ಇವರಿಗೆ ಒಳ್ಳೆಯ ಹೆಸರು ಬಂತು. ಇವರು ೧೯೭೯ ರಲ್ಲಿ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದವರು. ಅದೇ ರೀತಿ ಅದೇ ವರ್ಷ ಮಿಸ್ ಯೂನಿವರ್ಸ್ ಅಲ್ಲೂ ಭಾಗವಹಿಸಿದ್ದರು.

ಒಂದು ಕಾರ್ಯಕ್ರಮ ದಲ್ಲಿ‌ ಪರೇಶ್ ರಾವಲ್ ಸ್ವರೂಪ್ ಸಂಪತ್ ಅವರನ್ನು ನೋಡಿದ್ದರು. ಒಂದು ವರುಷ ತನಕ ಇಬ್ಬರ ನಡುವೆ ಮಾತುಕತೆ ಏನೂ ಇರಲಿಲ್ಲ. ಅಂದೇ ರಾವಲ್ ಮದುವೆ ಆದರೆ ಸ್ವರೂಪ್ ಸಂಪತ್‌ರನ್ನೇ ಎಂದು ನಿರ್ಧರಿಸಿ ಬಿಟ್ಟರು. ಒಂದು ನಾಟಕದ ಭಾಗವಾಗಿದ್ದ ರಾವಲ್ ನಾಟಕ ಪ್ರದರ್ಶನ ನಂತರ ಬ್ಯಾಕ್ ಸ್ಟೇಜ್ ಅಲ್ಲಿದ್ದರು. ರಾವಲ್ ಅವರ ನಟನೆಯಿಂದ ಪ್ರಭಾವಿತರಾಗಿ ಸ್ವರೂಪ್ ಸಂಪತ್ ರಾವಲ್ ಅವರನ್ನು ಹುಡುಕಿಕೊಂಡು ಬ್ಯಾಕ್ ಸ್ಟೇಜ್ ಗೆ ಬಂದು ನೀನು ಯಾರು ಎಂದು ಕೇಳಿದ್ದರಂತೆ. ಹೀಗೆ ಇವರಿಬ್ಬರ ಪರಿಚಯವಾಯಿತು ಎಂದು ಪರೇಸ್ ರಾವಲ್ ಹೇಳಿಕೊಂಡಿದ್ದಾರೆ.

ಇವರಿಬ್ಬರ ಮದುವೆಯ ಕಥೆ ಬಹಳ ರೋಚಕವಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಅರಿತ ಮೇಲೆ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರು. ಇವರ ಮದುವೆ ಎಲ್ಲಾ ಸೆಲೆಬ್ರಿಟಿಗಳ ತರಹ ದೊಡ್ಡ‌ ಮಟ್ಟದಲ್ಲಿ ನಡೆಯಲಿಲ್ಲ. ಇವರ ಮದುವೆ ನಡೆದಿದ್ದು ಒಂದು ಮರದ ನೆರಳಿನಲ್ಲಿ ಅಂದರೆ ನೀವು ನಂಬುತ್ತೀರ? ಹೌದು ಇವರಿಬ್ಬರ ಮದುವೆ ನಡೆದಿದ್ದು ಮರದ ಅಡಿಯಲ್ಲಿ. ಯಾವುದೇ ಮಂಟಪವಿರಲಿಲ್ಲ. ಒಂದು ಮರದ ಕೆಳಗೆ ಪುರೋಹಿತರ ಮಂತ್ರ ಪಠಣದ ನಡುವೆ ಇವರಿಬ್ಬರೂ ಸಪ್ತಪದಿ ತುಳಿದರಂತೆ. ಇವರಿಬ್ಬರಿಗೆ ಎರಡು ಗಂಡು ಮಕ್ಕಳಿದ್ದು ಅದಿತ್ಯ ಹಾಗೂ ಅನಿರುದ್ದ್ ಎನ್ನುವ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಇವರಿಬ್ಬರೂ ಇತ್ತಿಚೆಗೆ ಬಂದ ದೇಶದ ಹೆಮ್ಮೆಯ ಉರಿ- ದಿ ಸರ್ಜಿಕಲ್ ಸ್ಟ್ರೈಕ್ ಎನ್ನುವ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಸ್ವರೂಪ್ ಸಂಪತ್ ಅವರು ಉರಿ ಚಿತ್ರದಲ್ಲಿ ವಿಕ್ಕಿ ಕೌಶಲ್ ತಾಯಿ ಪಾತ್ರ ಮಾಡಿದ್ದರೆ ಪರೇಶ್ ರಾವಲ್ ಅಜಿತ್ ದೋವಲ್ ಪಾತ್ರದಲ್ಲಿ ಮಿಂಚಿದ್ದರು.

Leave A Reply

Your email address will not be published.